PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಡಿ,೨೧ ಪ್ರತಿವರ್ಷದಂತೆ ಈ ವರ್ಷವೂ ಸಹ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ಮತ್ತು ತಿರುಳ್ಗನ್ನಡ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಜನೇವರಿ ೦೭, ೦೮ ಮತ್ತು ೯ ರಂದು ಜರುಗುವ ಇಟಗಿ ಉತ್ಸವದಲ್ಲಿ ಕವಿ ಸಮ್ಮೇಳನದ ಸಮ್ಮೇಳಾಧ್ಯಕ್ಷರಾಗಿ  ಇಟಗಿಯ ಸಾಹಿತಿ, ಶಿಕ್ಷಕ ಬಿ.ಎಂ.ಹಳ್ಳಿಯವರನ್ನು ಆಯ್ಕೆಮಾಡಲಾಯಿತು.
   ಜನೇವರಿ ೦೮ ಮತ್ತು ೦೯ ರಂದು  ೭ನೇ ಇಟಗಿ ಜಾನಪz ಜಾತ್ರೆ ಮತ್ತು ೪ನೇ ಕವಿ ಸಮ್ಮೇಳನವನ್ನು ನಡೆಸಲಾಗುವುದು. ೦೮ ರಂದು ಸಂಜೆ ಕವಿ ಸಮ್ಮೇಳನ ಮತ್ತು ಜಾನಪದ ಜಾತ್ರೆ ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿ ನಡೆಯಲಿದ್ದು  ೦೯ ರ ಶನಿವಾರದಂದು ಮದ್ಯಾಹ್ನ ೪ ಗಂಟೆಗೆ ಇಟಗಿ ಉತ್ಸವದ ಕವಿ ಗೋಷ್ಠಿ ಮತ್ತು ಕವಿ ಸಮ್ಮೇಳನ ಗೋಷ್ಠಗಳು ನಡೆಯಲಿವೆ ಮತ್ತು ರಾತ್ರಿ ಸಮಾರೋಪ ಸಮಾರಂಭ ಜರುಗಲಿದೆ.

Advertisement

0 comments:

Post a Comment

 
Top