PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-06- ಮಹಿಳೆಯರು ಅಧ್ಯಾತ್ಮಿಕದಲ್ಲಿ ತೋಡಗಿಕೊಳ್ಳಬೇಕು ಮತ್ತು ಗರ್ಭಿಣಿ ಸ್ತ್ರೀಯರು ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು ವೈದ್ಯರ ಸಲಹೆಯನ್ನು ಪಡೆಯಬೇಕೆಂದು ವೀರಭದ್ರಯ್ಯ ಬನ್ನಿಮಠ ಹೇಳಿದರು ಅವರು ಇಂದು  ನಗರದ ಗವಿಸಿದ್ಧೇಶ್ವರ ಕನ್ವೇಶನ್ ಹಾಲನಲ್ಲಿ ನಡೆದ ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್ನೂರ್ವ ಅತಿಥಿಗಳಾಗಿ ಆಗಮಿಸಿದ್ದ ಡಿ. ವಾಯ್ಡರ್ ಪಾರ್ಕಿನ ಅಧಿಕಾರಿಯಾದ ವಿವೇಕ ಜಾಗೃತ ಬಳಗದ ಕೊಪ್ಪಳ ಉಸ್ತುವಾರಿಯಾದ ಶರಣಪ್ಪ ಬಂಡಿ ಈ ಒಂದು
ಉಡಿ ತುಂಬುವ ಕಾರ್ಯಕ್ರಮವನ್ನು ವಿವೇಕ ಜಾಗೃತ ಬಳಗ ಪ್ರತಿವರ್ಷವು ಆಚರಿಸುತ್ತಾಬಂದಿದೆ ಆದ್ಯಾತ್ಮೀಕ ಕಾರ್ಯಕ್ರಮದ ಜೊತೆಗೆ ರಚನಾತ್ಮಕ ಕಾರ್ಯಕ್ರಮವನ್ನು  ನಮ್ಮ ಬಳಗ ನೆರವರಿಸುತ್ತಾ ಬಂದಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಕಲ್ಮಠ ವಹಿಸಿದರು ಈ ಸಂದರ್ಭದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಯೋಜನಾನಿರ್ದೇಶಕರು ಮತ್ತು ಶ್ರೀಮತಿ ಕೋಮಲಾ ಕುದರಿಮೊತಿ, ಗಾಯಿತ್ರಿ, ರೇಖಾ ನಿಡಸಿಸಿ, ಅಶ್ವಿನಿ ಗದುಗಿನಮಠ, ಜಿಲ್ಲಾ ಜಾಗೃತ ಬಳಗದ ಜಿಲ್ಲಾ ಅದ್ಯಕ್ಷರಾದ ಸಿ.ವಿ ಮಡಿವಾಳರ, ಬಿ.ಜಿ ಕರಿಗಾರ, ವೀರಬದ್ರಯ್ಯ ಹಿತ್ತಲಮನಿ, ಗವಿಸಿದ್ದಪ್ಪ ಕರ್ಕಿಹಳ್ಳಿ, ಸಿ.ಎಸ್. ಹಿರೇಮಠ, ಕೊಟ್ರಪ್ಪ ಅಂಗಡಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಮಹಾಬಳೇಶ ಮಟ್ಟಿ ನಿರೂಪಿಸಿದರು.

Advertisement

0 comments:

Post a Comment

 
Top