PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ. ೨೩. ಸಿನೆಮಾ ಕ್ಷೇತ್ರ ಈಗ ತುಂಬಾ ವಿಶಾಲವಾಗಿದ್ದು, ಆಸಕ್ತರಿಗೆ ಪ್ರತಿಭಾವಂತರಿಗೆ ಉತ್ತಮ ವೇದಿಕೆಯಾಗಿದೆ ಎಂದು ಪತ್ರಕರ್ತ, ಸಿನೆಮಾ ವಿಮರ್ಶಕ ಬಸವರಾಜ ಕರುಗಲ್ ಹೇಳಿದರು.
ನಗರದ ಸರಕಾರಿ ಬಾಲಕಿಯರ ಪ. ಪೂ. ಕಾಲೇಜಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಖ್ಯಾತ ಚಲನಚಿತ್ರ ನಟರಾದ ಡಾ|| ವಿಷ್ಣುವರ್ಧನ್, ಉಪೇಂದ್ರ ಮತ್ತು ಶೃತಿರವರ ಹುಟ್ಟುಹಬ್ಬ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಿನೆಮಾ ಇಂದು ದೊಡ್ಡ ಮಾದ್ಯಮವಾಗಿದೆ ಅಲ್ಲಿ ವಿವಿಧ ಸ್ಥರದಲ್ಲಿ ಕೆಲಸ ಮಾಢುವ ಅವಕಾಶಗಳಿದ್ದು, ಆಸಕ್ತರು ಅದನ್ನು ಸರಿಯಾಗ ಅರ್ಥ ಮಾಡಿಕೊಂಡು ಮುಂದುವರಿಯಬಹುದು ಎಂದ ಅವರು ಕೊಪ್ಪಳವೂ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದೆ, ಸನ್ಮಾನದಿಂದ ಬರಹದ ಜವಾಬ್ದಾರಿ ಜಾಸ್ತಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ, ಚಲನಚಿತ್ರ ಕಲಾವಿದ ಶಿಕ್ಷಕ ಮಂಜುನಾಥ ಪೂಜಾರ ಮಾತನಾಡಿ, ನಮ್ಮ ಭಾಗದ ಜನರು ಮುಂದುವರಿಯಲು ತುಂಬಾ ಕಷ್ಟವಿದೆಯಾದರೂ ಸತತ ಪ್ರಯತ್ನದಿಂದ ಫಲ ಸಿಗುತ್ತದೆ, ನಮ್ಮವರಿಗೆ ಅವಕಾಶ ಸಿಕ್ಕಿದ್ದರೆ ಅದು ಕೇವಲ ಸ್ವಸಾಮರ್ಥ್ಯದಿಂದ ಮಾತ್ರ ಎಂದ ಅವರು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಭಾಗದ ಎಲ್ಲರೂ ಪ್ರೋತ್ಸಾಹ ನೀಡಬೇಕು ಅದರ ಮುಖೇನ ಚಿತ್ರ ರಂಗದ ಸೇವೆ ಮಾಢಬೇಕು, ಚಿತ್ರರಂಗ ಈಗ ವೃತ್ತಿ ಮತ್ತು ಪ್ರವೃತ್ತಿ ಎಂಬ ಎರಡು ಭಾಗವನ್ನು ಹೊಂದಿದ್ದು, ತಮ್ಮ ಇಚ್ಛಾನುಸಾರ ಮುಂದು
ವರಿಯಬಹುದು ಎಂದರು. ಕಲಾವಿದ ಬಸವರಾಜ ಕೊಪ್ಪಳ ಚಲನಚಿತ್ರ ರಂಗದ ಮೂಲಕ ಜನರ ನಿರೀಕ್ಷೆ ಎಂಬ ವಿಷಯ ಕುರಿತು ಮಾತನಾಡಿ, ರಾಜ್ಯದಲ್ಲಿಯೇ ಬೆಳ್ಳಿಮಂಡಲ ತುಂಬಾ ಕ್ರಿಯಾಶೀಲವಾಗಿದೆ, ಇಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ಜರುಗುತ್ತಿವೆ, ಉತ್ತರ ಕರ್ನಾಟಕದ ಜನರು ತುಂಬಾ ಪ್ರೀತಿ ವಿಶ್ವಾಸದವರು, ಸಿನೆಮಾ ಕೇವಲ ಮನರಂಜನೆಯಾಗಿರದೆ ಸಂದೇಶ ನೀಡುವಂಥಾಗಬೇಕು, ಬದಲಾವಣೆಗೆ ಪ್ರೇರಣೆಯಾಗಲಿ ಎಂದರು. ಚಲನಚಿತ್ರ ಗೀತೆ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಬಾಲವಿಕಾಸ ಅಕಾಡೆಮಿ ಸದಸ್ಯ ಗವಿಸಿದ್ದಪ್ಪ ಕರ್ಕಿಹಳ್ಳಿ ಇದ್ದರು, ಗಾಯಕ ಸಂಗೀತ ಶಿಕ್ಷಕ ಸದಾಶಿವ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಬಸವರಾಜ ದೇಸಾಯಿ ಸ್ವಾಗತಿಸಿದರು, ವಿದ್ಯಾರ್ಥಿನಿಯರು ಪ್ರರ್ಥಿಸಿದರು, ಕಾರ್ಯಕ್ರಮದ ಸಂಘಟಕ ಮಂಜುನಾಥ ಜಿ. ಗೊಂಡಬಾಳ ನಿರೂಪಿಸಿ ವಂದಿಸಿದರು.

Advertisement

0 comments:

Post a Comment

 
Top