PLEASE LOGIN TO KANNADANET.COM FOR REGULAR NEWS-UPDATES

ಮಹಾದಾಯಿ ನದಿ ಹಾಗೂ ಕಳಸಾ-ಬಂಡೂರಿ ನಾಲಾ ಜೋಡಣೆಗಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಿಪಿಐಎಂಎಲ್ ಲಿಬರೇಷನ್ ಪಕ್ಷ ಹಾಗೂ ಅದರ ಅಂಗ ಸಂಘಟನೆಗಳಾದ ಎಐಸಿಸಿಟಿಯು, ಅಖಿಲ ಭಾರತ ಕೃಷಿ ಹಾಗೂ ಗ್ರಾಮೀಣ ಕಾರ್ಮಿಕ ಸಂಘ, ಪ್ರಗತಿಪರ ಮಹಿಳಾ ಸಂಘ, ಕ್ರಾಂತಿಕಾರಿ ಯುವಜನ ಸಂಘ, ಅಖೀಲ ಭಾರತ ವಿದ್ಯಾರ್ಥಿ ಸಂಘಗಳು ಸಂಪೂರ್ಣ ಬೆಂಬಲಿಸಲಿವೆ ಎಂದು ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಓಡಿಸ್ಸಾದ ಶಿವನಾಧ ನದಿ, ಕೇರಳದ ಪಿರಿಯಾರ್ ನದಿಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸಿರುವ ಸರಕಾರಗಳ ನೀತಿಗಳು ರೈತ ವಿರೋಧಿಯಾಗಿವೆ. ಕೇಂದ್ರ ಸರಕಾರ ಮಹಾರಾಷ್ಟ್ರ ಮತ್ತು ಗೋವಾ ಸರಕಾರಗಳ ಪರ ನಿಂತು ಕರ್ನಾಟಕದ ಜನತೆಗೆ ಅನ್ಯಾಯ ಮಾಡುತ್ತಿದೆ. ಕರ್ನಾಟಕ ಸರ್ಕಾರ ಬರಗಾಲದಿಂದ ಅರ್ಧ ತುಂಬಿದ ಜಲಾಶಯಗಳ ನೀರನ್ನು ಕಾವೇರಿಯಿಂದ ತಮಿಳುನಾಡು, ತುಂಗಭದ್ರಾದಿಂದ ಆಂದ್ರ ಸರಕಾರಗಳು ಕಳುವು ಮಾಡುತಿದ್ದರೂ ಮೂಕಪ್ರೇಕ್ಷಕನಾಗಿ  ನೋಡುತ್ತಿರುವುದು ಖಂಡನೀಯವಾಗಿದೆ.  ರಾಜ್ಯ ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಕರ್ನಾಟಕದ ನದಿಗಳಲ್ಲಿ ನೀರಿನ ಹಂಚಿಕೆ ಬಗ್ಗೆ ಪ್ರಾಮಾಣಿಕ ಹೋರಾಟ ಮಾಡಿ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ರೈತರನ್ನು ರಕ್ಷಿಸಬೇಕೆಂದು ಭಾರಧ್ವಾಜ್ ಒತ್ತಾಯಿಸಿದ್ದಾರೆ.

Advertisement

0 comments:

Post a Comment

 
Top