ಕೊಪ್ಪಳ-24- ತಾಲೂಕಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳದಲ್ಲಿ ನಡೆದ ರಾಷ್ಟ್ರಿಯ ಸೇವಾ ಯೋಜನೆಯ ಸಂಸ್ಥಪನಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಡಾ. ವಿ.ಬಿ.ರಡ್ಡೇರ್ ವಹಿಸಿ ಮಾತನಾಡುತ್ತಾ ಗಾಂಧಿಜೀಯ ವ್ಯಕ್ತಿತ್ವ ಮತ್ತು ಆದರ್ಶಗಳನ್ನು ಎಲ್ಲಾ ವಿದ್ಯಾರ್ಥಿಗಳು ಪರಿಪಾಲಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಡಾ|| ಶ್ರೀನಿವಾಸ ಹ್ಯಾಟಿ ಕಾರ್ಯದರ್ಶಿಗಳು ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಮಾತನಾಡುತ್ತಾ ರಕ್ತದಾನದ ಮಹತ್ವ ಕುರಿತು ವಿದ್ಯಾರ್ತಿಗಳಿಗೆ ತಿಳಿಸಿದರು. ಪ್ರ್ರಾಸ್ತಾವಿಕ ನುಡಿ ಮಾತನಾಡಿದ ಶ್ರೀಮತಿ ಲಲಿತಾ ಅಂಗಡಿ ರಾ.ಸೇ.ಯೋ.ಯ ಉದ್ದೇಶ ದ್ಯೇಯಗಳು ಮತ್ತು ಅದರಿಂದಆಗುವ ಲಾಭಗಳು ಕುರಿತು ತಿಳಿಸಿದರು. ಸಭೆಯ ಸ್ವಾಗತವನ್ನು ಡಿ.ಎಂ ಬಡಿಗೇರ ಉಪನ್ಯಾಸಕರು ನೇರವೆರಿಸಿದರು. ನಿರೂಪಣೆಯನ್ನು ಬಾಳಪ್ಪ ಹೆಚ್.ನಿರೂಪಿಸಿದರು. ಈ ಸಂದರ್ಭದಲ್ಲಿ ಸೌಭಾಗ್ಯ ಡಿ, ಶರಶ್ಚಂದ್ರ ಕಿಣಗಿ, ಅನಿತಾ ಹ್ಯಾಟಿ, ರಾಜೇಶ ಯಾವಗಲ್, ಪುಂಡಲಿಕ ರೆಡ್ಡಿ ಉಪನ್ಯಾಸಕರು ಉಪಸ್ಥಿತಿದ್ದರು.
Subscribe to:
Post Comments (Atom)
0 comments:
Post a Comment