ಕೊಪ್ಪಳ ಸೆ. ೨೪ (ಕ ವಾ) ಬಹು ಮಾಲಿಕತ್ವ ಇರುವ ಪಹಣಿದಾರರಿಗೆ ಪೋಡಿ ಮಾಡಿ, ಪ್ರತ್ಯೇಕ ಪಹಣಿ ಹಾಗೂ ನಕಾಶೆಯನ್ನು ವಿತರಿಸಿ ಪೋಡಿ ಮುಕ್ತ ಗ್ರಾಮಗಳನ್ನಾಗಿಸಲು ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು, ಸಮಸ್ಯೆ ಇತ್ಯರ್ಥಪಡಿಸಲು ಶ್ರಮಿಸುತ್ತಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಭೂಮಾಪನ ಕಂದಾಯ ವ್ಯವಸ್ಥೆ, ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪೋಡಿ ಮುಕ್ತ ಅಭಿಯಾನ ಗ್ರಾಮ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳನ್ನು ಪೋಡಿ ಮುಕ್ತವಾಗಿಸುವ ಕಾರ್ಯಕ್ರಮವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮ ಇದಾಗಿದೆ. ಬಹು ಮಾಲಿಕತ್ವ ಇರುವ ಪಹಣಿದಾರರಿಗೆ ಪೋಡಿ ಮಾಡಿ, ಪ್ರತ್ಯೇಕ ಪಹಣಿ ಹಾಗೂ ನಕಾಶೆ ವಿತರಿಸುವ ಮೂಲಕ ರೈತಾಪಿ ವರ್ಗದವರು ನೆಮ್ಮದಿಯ ಜೀವನ ನಡೆಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಪಹಣಿ ಹಾಗೂ ನಕ್ಷೆಯ ತೊಂದರೆಯಿಂದಾಗಿ ರೈತರು ಬೆಳೆ ಸಾಲ ಪಡೆಯುವುದು, ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ತೀವ್ರ ತೊಂದರೆ ಇರುವುದನ್ನು ಗಮನಿಸಿರುವ ನಮ್ಮ ಸರ್ಕಾರ ಪೋಡಿ ಮುಕ್ತ ಗ್ರಾಮಗಳನ್ನು ರೂಪಿಸಲು ಶ್ರಮಿಸುತ್ತಿದೆ. ಇದಕ್ಕಾಗಿ ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ, ಪೋಡಿ ಮಾಡಿ ಕೊಡಲು ಕಾರ್ಯಕ್ರಮಗಲನ್ನು ಹಮ್ಮಿಕೊಂಡಿದೆ. ಗ್ರಾಮದ ಎಲ್ಲಾ ಬಹುಮಾಲಿಕತ್ವ ಇರುವ ಖಾಸಗಿ ಪಹಣಿದಾರರಿಗೆ ಅವರ ಜಮೀನಿನ ಅಳತೆಯನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅವರ ಜಮೀನಿನ ಅಳತೆಯನ್ನು ಮಾಡಿ, ಪೋಡಿ ಮಾಡಿ ಪ್ರತ್ಯೇಕ ಪಹಣಿ ವಿತರಿಸಲಾಗುವುದು. ಇದರಿಂದಾಗಿ ಬಹುಮಾಲಿಕತ್ವ ಇರುವ ರೈತರು ಪ್ರತ್ಯೇಕ ಪಹಣಿ ಹೊಂದಲು ಸಾಧ್ಯವಾಗಲಿದ್ದು, ರೈತರು ಪ್ರತ್ಯೇಕ ಪಹಣಿಯಿಂದ ಸರ್ಕಾರದ ಸೌಲಭ್ಯ ಪಡೆಯುವುದು, ಜಮೀನು ವ್ಯವಹಾರಗಲು, ಬ್ಯಾಂಕ್‌ನಿಂದ ಸಾಲ ಅಲ್ಲದೆ ಜಮೀನಿನ ವ್ಯಾಪ್ತಿ ಅಳತೆಗೆ ಅನುಕೂಲವಾಗಲಿದೆ. ಜಿಲ್ಲೆಯ ಪ್ರತಿ ತಾಲೂಕಿನ ೦೩ ಗ್ರಾಮಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ತಾಲೂಕಿನ ಹಿರೇಸಿಂದೋಗಿ, ಯಲಮಗೇರಾ ಹಾಗೂ ಇಂದರಗಿ ಗ್ರಾಮಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಇದೇ ಸೆಪ್ಟಂಬರ್ ೩೦ ರ ಒಳಗಾಗಿ ಈ ಗ್ರಾಮಗಳು ಪೋಡಿ ಮುಕ್ತ ಗ್ರಾಮಗಳಾಗಲಿವೆ. ಈ ಕಾರ್ಯಕ್ರಮಕ್ಕೆ ರೈತರು ಅವಶ್ಯಕ ಮಾಹಿತಿ ನೀಡಿ ಯೋಜನೆಯ ಯಶಸ್ವಿಗೆ ಸಹಕರಿಸಬೇಕು.
ಕಾರ್ಯಕ್ರಮದಲ್ಲಿ ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಹೂಗಾರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ ಹಂದ್ರಾಳ, ಜಿ.ಪಂ. ಮಾಜಿ ಸದಸ್ಯ ಈಶಪ್ಪ ಮಾದಿನೂರ, ಗ್ರಾ.ಪಂ. ಸದಸ್ಯರುಗಳಾದ ನೀಲಮ್ಮ ಕೊಳ್ಳಿ, ರೇಣುಕಾ ನಾಯಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

0 comments:
Post a Comment