PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ.ಸೆ,೨೩  ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತ ಇದರ ೯ನೇ ವಾರ್ಷಿಕ ಮಹಾಸಭೆಯು   ಬುಧವಾರ ಶ್ರೀ ಗವಿಸಿದ್ಧೇಶ್ವರ ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿತು.    ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ಧ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಎಸ್.ಡಿ.ಡಂಬಳ ರವರು ಮಹಾಸಭೆಯ ಅಧ್ಯಕ್ಷತೆವಹಿಸಿದ್ದರು.
   ಈ ಸಭೆಗೆ ಸದಸ್ಯೆರೆಲ್ಲರೂ ಭಾಗಹಿಸಿ ಮಹಾಸಭೆಯು ಯಶಸ್ವಿಗೊಳಿಸಿದರು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತ ಸಂಸ್ಥಾಪನಾ ಅಧ್ಯಕ್ಷ ಸಂಗಪ್ಪ ವಕ್ಕಳದ,  ಸಮಾಜದ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಕಾಶಿನಾಥ್‌ರೆಡ್ಡಿ . ಉಪಾಧ್ಯಕ್ಷ ವ್ಹಿ.ಎಮ್.ಮೇಟಿ, ನಿರ್ದೇಶಕರಾದ ಜಿ.ಎಸ್.ಗೋನಾಳ  ವಿ.ಜಿ.ಯತ್ನಳ್ಳಿ, ವಿಜಯಲಕ್ಷ್ಮೀ ಪಾಟೀಲ್, ಬಿ.ಶರಣಪ್ಪ ವಕೀಲರು, ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂ
ಡು ತಮ್ಮ ಸಲಹೆ ಸೂಚನೆಗಳನ್ನು ನೀಡಿ  ಲಾಭಾಂಶ ವಿಂಗಡನೆ ಮಾಡದೇ ಬ್ಯಾಂಕನ್ನು ಸಧೃಡವಾಗಿ ಬೆಳೆಸಲು ಮತ್ತು ಬ್ಯಾಂಕಿನ ಆಡಳಿತ ವ್ಯವಸ್ಥೆಗೆ ಮಾರಕವಾಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಅಲ್ಲದೆ ಸೌಹಾರ್ಧ ಬ್ಯಾಂಕಿಗೆ ನಿವೇಶನ ಪಡೆಯುವಲ್ಲಿ ಶ್ರಮಿಸಿಲಿ ಎಂದು  ಸಲಹೆ ನೀಡಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಪಿಗ್ಮಿ ಏಜೆಂಟ್,  ಬಸವರಾಜ್ ಅಂಗಡಿ ಮತ್ತು ಪಂಚಪ್ಪ ಡಂಬಳ ರವರಿಗೆ ಬ್ಯಾಂಕಿನ ಪರವಾಗಿ ಸನ್ಮಾನಿಸಲಾಯಿತು.  ಆರಂಭದಲ್ಲಿ ಬ್ಯಾಂಕಿನ ನಿರ್ದೆಶಕ ಹಾಗೂ ಮಾಜಿ ಅಧ್ಯಕ್ಷ ಜಿ.ಎಸ್.ಗೋನಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಭಾಗದ ಸಮಾಜ ಬಾಂಧವರು, ಯುವಕರು, ಮಹಿಳೆಯರು ಬ್ಯಾಂಕಿಗೆ ಶೇರುದಾರರಾಗಲು ಕೋರಿದರು. ನರ್ಮದಾ ಬೆಟಗೇರಿಯವರು ಪ್ರಾರ್ಥನಾ ಗೀತೆ ಹಾಡಿದರು, ಸಭೆಯ ಕಾರ್ಯಕಲಾಪ ಪ್ರಾರಂಭಿಸಿದರು.ಕಾರ್ಯದರ್ಶಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಬಸವರಾಜ್ ರಾಮದುರ್ಗ ರವರು  ಸಭೆಯಲ್ಲಿ ವಿಷಯ ಮಂಡನೆಮಾಡಿ ಸಭೆಯ ಕಾರ್ಯಕಲಾಪಕ್ಕೆ ಚಾಲನೆ ನೀಡಿ ಕೊನೆಯಲ್ಲಿ ವಂದಿಸಿದರು, ಸಾಮಾನ್ಯ ಸದಸ್ಯರು ಕೂಡಾ ಈ ಮಹಾ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top