ಸಹಕಾರಿ ರಂಗವು ಕಾಮಧೇನು, ಕಲ್ಪವೃಕ್ಷವಿದ್ದಂತೆ ಎಂದು ಮಾಜಿ ಸಂಸದ, ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಳ ನಿ., ಬೆಂಗಳೂರು ನಿರ್ದೇಶಕರು ಹಾಗೂ ಹಿರಿಯ ಸಹಕಾರಿ ಧುರೀಣರಾದ ಶಿವರಾಮಗೌಡರವರು ಅಭಿಪ್ರಾಯಪಟ್ಟರು. ಅವರು ಶನಿವಾರ ಗಂಗಾವತಿಯ ಕೃಷಿ ಮತ್ತು ತೋಟಗಾರಿಕೆ ಸಂಸ್ಕರಣ ಸಹಕಾರ ಸಂಘ ನಿಯಮಿತದ ಪ್ರಥಮ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರು ಎನ್ನುವ ಸಹಕಾರಿ ರಂಗದ ತತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಎಲ್ಲರೂ ಸಹಕರಿಸಬೇಕು. ಯುವ ಉತ್ಸಾಹಿಗಳನ್ನು ಒಳಗೊಂಡ ಕೃಷಿ ಮತ್ತು ತೋಟಗಾರಿಕೆ ಸಂಸ್ಕರಣ ಸಹಕಾರ ಸಂಘವು ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ, ಈ ಸಂಸ್ಥೆಯಿಂದ ಕೃಷಿ ಮತ್ತು ತೋಟಗಾರಿಕೆ ರೈತರಿಗೆ ಹೆಚ್ಚಿನ ಉಪಯೋಗವಾಗಿ, ಆರ್ಥಿಕವಾಗಿ ಸದೃಢರಾಗಲಿ ಎಂದರು. ಸಂಘದ ಅಧ್ಯಕ್ಷರಾದ ಶಿವರಾಜಗೌಡರವರು ಮಾತನಾಡಿ ದಿನಾಂಕ: ೧೭.೧೦.೨೦೧೪ರಂದು ನೋಂದಣಿಗೊಂಡ ನಮ್ಮ ಸಹಕಾರ ಸಂಘವು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗಂಗಾವತಿ, ವೆಂಕಟಗಿರಿ, ಮರಳಿ, ಕನಕಗಿರಿ ಹಾಗೂ ಹುಲಿಹೈದರ ಕಂದಾಯ ಹೋಬಳಿಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಿದ್ದು, ಸಹಕಾರ ಇಲಾಖೆಯು ನಿಗದಿಪಡಿಸಿದಷ್ಟು ಗುರಿಮುಟ್ಟಿದ್ದು, ನಮ್ಮ ಸಹಕಾರಿಯ ಶೇರುದಾರರಿಗೆ ಕೃಷಿ ಅಭಿವೃದ್ಧಿಗಾಗಿ ಅಗತ್ಯ ಸಹಾಯ ಸಹಕಾರ ನೀಡುವ ಸದುದ್ದೇಶದಿಂದ ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅಗತ್ಯ ಮಾಹಿತಿ ಮತ್ತು ನೆರವು ನೀಡುವ ಭರವಸೆ ನೀಡಿದ್ದಾರೆ. ಇನ್‌ಸಿಂಪ್ ಸೇರಿದಂತೆ ಸಂಸ್ಕರಣಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳ ಅನುಷ್ಠಾನಕ್ಕೆ ಕೃಷಿ ಇಲಾಖೆಯನ್ನು ಕೋರಲಾಗಿದೆ. ಸಂಘದ ಬೈಲಾ ಪ್ರಕಾರ ಆದಾಯ ತೆರಿಗೆ ಇಲಾಖೆಯಲ್ಲಿ ಈಗಾಗಲೇ ಪಾನ್ ಸಂಖ್ಯೆ ಪಡೆದಿದ್ದು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವ್ಯಾಟ್ ನೋಂದಣಿ ಕೈಗೊಳ್ಳಲಾಗಿದ್ದು, ಸಹಕಾರ ಸಂಘವನ್ನು ಲಾಭದತ್ತ ಮುನ್ನಡೆಸಲು ಹಾಗೂ ಸಂಘ ರಚನೆಯ ಮೂಲ ಉದ್ದೇಶದ ಈಡೇರಿಕೆಯ ದೃಷ್ಟಿಯಿಂದ ಕೃಷಿ ಮಾರಾಟ ಇಲಾಖೆಯಿಂದ ಗಂಗಾವತಿಯ ಎಪಿಎಂಸಿಯಲ್ಲಿ ವ್ಯಾಪಾರದ ಅನುಮತಿ ಪಡೆಯಲಾಗಿದೆ ಹಾಗೂ ಡೀಲರ್‌ಶಿಪ್ ಮತ್ತು ಲಾಭದ ಉದ್ದೇಶದಿಂದ ಈಗಾಗಲೇ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ಇಫ್ಕೋ ಮತ್ತು ಕ್ರಿಭ್ಕೋ ಕಂಪನಿಗಳೊಂದಿಗೆ ಒಡಂಬಡಿಕೆ ಪ್ರಗ
ತಿಯಲ್ಲಿದೆ ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಜ ಯಲಿಗಾರ್ ಸಂಘದ ೨೦೧೪-೧೫ನೇ ಸಾಲಿನ ಆಯ-ವ್ಯಯ ಮತ್ತು ಅಢಾವೆ ಪತ್ರಿಕೆ ಹಾಗೂ ೨೦೧೫-೧೬ನೇ ಸಾಲಿನ ಮುಂಗಡಪತ್ರವನ್ನು ಓದಿದ ಅವರು ಮಾಳಿಗೆ ತೋಟ (ಟೆರೇಸ್ ಗಾರ್ಡನ್) ಯೋಜನೆಯ ಅನುಷ್ಠಾನಕ್ಕಾಗಿ ಫಲಾನುಭವಿಯಾಗಲು ಶೇರುದಾರರಲ್ಲಿ ಮನವಿ ಮಾಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರವೀಣರವರು ಟೆರೇಸ್ ಗಾರ್ಡನ್ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಿ.ಆರ್. ಪತ್ತಿನ ಸೌಹಾರ್ಧ ಸಹಕಾರಿಯ ಅಧ್ಯಕ್ಷರಾದ ಗುರುಬಸವನಗೌಡ, ಕರ್ನಾಟಕ ರಾಜ್ಯ ಪಟ್ಟಣ ಸೌಹಾರ್ಧ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರಾದ ಕೆ. ಕಾಳಪ್ಪ, ಸಂಘದ ಉಪಾಧ್ಯಕ್ಷರಾದ ಶ್ರೀ ರುದ್ರಪ್ಪ ಗಂಗಾವತಿ, ಡಿ. ಚಂದ್ರಕಾಂತ, ಹೆಚ್.ಎಂ. ಶಶಿಧರಸ್ವಾಮಿ, ರಾಮಾನಾಯ್ಕ, ಶಾಂತಮ್ಮ ಗುರುಬಸನಗೌಡ, ಶರಣಪ್ಪ ಗುಡದೂರು, ವೀರೇಶ ಸುಳೇಕಲ್, ಚನ್ನಮ್ಮ ಲೋಕೇಶಪ್ಪ, ಸತೀಶ ಭೋಜಾಶೆಟ್ಟರ, ಸಿ.ಆರ್. ಪತ್ತಿನ ಸೌಹಾರ್ಧ ಸಹಕಾರಿಯ ನಿರ್ದೇಶಕರು ಹಾಗೂ ಕೃಷಿ ಮತ್ತು ತೋಟಗಾರಿಕೆ ಸಂಸ್ಕರಣ ಸಹಕಾರ ಸಂಘ ನಿಯಮಿತದ ಶೇರುದಾರರು ಹಾಗೂ ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ರೈತರು ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment