PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಸೆ.೧೯ (ಕ ವಾ) ಜಿಲ್ಲೆಯಲ್ಲಿ ಸೆ.೧೯ ರಿಂದ ಅ. ೦೨ ರವರೆಗೆ ಆಚರಿಸಲಾಗುವ ಗೌರಿ-ಗಣೇಶ ಹಬ್ಬದ ಪ್ರಯುಕ್ತ, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅನುಕೂಲವಾಗುವಂತೆ ಮಧ್ಯಪಾನ ಹಾಗೂ ಮಾರಾಟವನ್ನು ನಿಷೇಧಿಸಿ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್  ಆದೇಶ ಹೊರಡಿಸಿದ್ದಾರೆ.
     ನಿಷೇಧಾಜ್ಞೆಯನ್ವಯ ಜಿಲ್ಲೆಯಾದ್ಯಂತ ಸೆ. ೧೯ ರ ಬೆಳಿಗ್ಗೆ ೬ ಗಂಟೆಯಿಂದ ಸೆ. ೨೦ ರ ಬೆ. ೮ ಗಂಟೆಯವರೆಗೆ.  ಸೆ. ೨೧ ರ ಬೆಳಿಗ್ಗೆ ೬ ಗಂಟೆಯಿಂದ ಸೆ. ೨೨ ಬೆಳಿಗ್ಗೆ ೮ ಗಂಟೆಯವರೆಗೆ.  ಸೆ. ೨೫ ರ ಬೆಳಿಗ್ಗೆ ೬ ಗಂಟೆಯಿಂದ ಸೆ. ೨೬ ರ ಬೆಳಿಗ್ಗೆ ೮ ಗಂಟೆಯವರೆಗೆ.  ಸೆ. ೨೭ ರ ಬೆಳಿಗ್ಗೆ ೬ ಗಂಟೆಯಿಂದ ಸೆ. ೨೮ ರಂದು ಬೆ. ೮ ಗಂಟೆಯವರೆಗೆ ಮಧ್ಯಪಾನ, ಮಧ್ಯ ಮಾರಾಟ ನಿಷೇಧಿಸಲಾಗಿರುತ್ತದೆ.  ಮೇಲೆ ತಿಳಿಸಿದ ದಿನಗಳ ಜೊತೆಗೆ ಹೆಚ್ಚುವರಿಯಾಗಿ ಗಂಗಾವತಿ ನಗರದಲ್ಲಿ ಸೆ. ೨೩ ರ ಬೆ. ೬ ಗಂಟೆಯಿಂದ ಸೆ. ೨೪ ರಂದು ಬೆ. ೮ ಗಂಟೆಯವರೆಗೆ.  ಸೆ. ೨೯ ರಂದು ಬೆ. ೬ ಗಂಟೆಯಿಂದ ಸೆ. ೩೦ ರ ಬೆ. ೮ ಗಂಟೆಯವರೆಗೆ ಹಾಗೂ ಅಕ್ಟೋಬರ್ ೦೨ ರಂದು ಬೆ. ೬ ಗಂಟೆಯಿಂದ ಅ. ೦೩ ರಂದು ಬೆ. ೮ ಗಂಟೆಯವರೆಗೆ ಮಧ್ಯಪಾನ, ಮಧ್ಯ ಮಾರಾಟ ನಿಷೇಧಿಸಲಾಗಿದೆ.
     ಈ ಸಂಬಂಧ ಅಬಕಾರಿ ಉಪ ಆಯುಕ್ತರ ಮುಖಂಡತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Advertisement

0 comments:

Post a Comment

 
Top