PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ ತಾಲೂಕಿನ ಹಿರೇಮಾದಿನಾಳ ಗ್ರಾಮದಲ್ಲಿರುವ ಅಂಗನವಾಡಿಯ ಅಂಗನವಾಡಿ ಕಾರ್ಯಕರ್ತೆಯಾದ ಲಕ್ಷ್ಮೀದೇವಿ ಗಂಡ ಮೌನೇಶ ಇವರ ಭ್ರಷ್ಠಾಚಾರ ವಿರುದ್ಧ ಮತ್ತು ಇವರನ್ನು ಬೇರೆ ಕಡೆ ವರ್ಗಾವಣೆ ಮಾಡಲು ಹಿರೇಮಾದಿನಾಳ ಗ್ರಾಮದ ಸಮಸ್ತ ನಾಗರಿಕರಿಂದ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗಂಗಾವತಿ ಇವರಿಗೆ ಮನವಿ ಸಲ್ಲಿಸಲಾಗಿತ್ತು, ಆದರೆ ಕಾಟಾಚಾರಕ್ಕೆ ದಿನಾಂಕ ೦೩-೦೮-೨೦೧೫ ರ ಸೋಮವಾರರಂದು ಬಂದ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಅಲ್ಲಿ ಸೇರಿದ ಗ್ರಾಮಸ್ಥರೆಲ್ಲರಿಗೂ ಎಲ್ಲರೂ ಕಾರ್ಯಕರ್ತೆ ಲಕ್ಷ್ಮೀದೇವಿಯನ್ನು ಅನುಸರಿಸಿಕೊಂಡು ಹೋಗಿ, ನೀವೇನೇ ಮಾಡಿದರೂ ಇವರ ವಿರುದ್ಧ ಯಾವುದೇ ಕ್ರಮ ಜರುಗಿಸಲಾಗುವುದಿಲ್ಲ, ಇದಕ್ಕೂ ಮೀರಿ ತಾವು ಹೋದರೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಗ್ರಾಮಸ್ಥರಿಗೆ ಬೆದರಿಕೆ ಹಾಕಿರುತ್ತಾರೆ. ಇದರಲ್ಲಿ ರಾಜಕೀಯವೇ ಬೇರೆ ಇದೆ ಎಂದು ಕಾರ್ಯಕರ್ತೆಯ ಪರ ಮಾತನಾಡಿ ಹೋಗಿರುತ್ತಾರೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಾರ್ಯಕರ್ತೆ ಲಕ್ಷ್ಮೀದೇವಿಯ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಅಥವಾ ವರ್ಗಾವಣೆ ಮಾಡದಿದ್ದಲ್ಲಿ ಮಾನ್ಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿರುದ್ಧ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಮುಖಂಡರಾದ ಮಹ್ಮದಸಾಬ್, ಭೀಮಣ್ಣ ಬಾವಿಕಟ್ಟಿ, ಗುರುರಾಜ ಆಗೋಲಿ, ಬಿ. ಹನುಮೇಶ ನಾಯಕ, ದುರಗಪ್ಪ ಲಾದುಂಚಿ, ಶಿವಮೂರ್ತಿ, ಮಾರುತಿ ಜಿನ್ನಾಪುರ, ದುರಗಪ್ಪ ತಳವಾರ ಎಚ್ಚರಿಸಿದ್ದಾರೆ.

Advertisement

0 comments:

Post a Comment

 
Top