ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ೨೦೧೪-೧೫ ನೇ ಸಾಲಿನ ದ್ವಿತೀಯ ಸೆಮಿಷ್ಟರನ ರೂಢಿ ಪಾಠ ಯೋಜನೆಯ ಮುಕ್ತಾಯ ಸಮಾರಂಭವು ಸರಕಾರಿ ಪ್ರೌಢ ಶಾಲೆ ಹ್ಯಾಟಿ ಮಂಗಳವಾರ ದಂದು ನಡೆಯಿತು ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಶರಣಪ್ಪ ಮಣ್ಣೂರು ನವರು ವಹಿಸಿದ್ದರು, ಮುಖ್ಯ ಅಥಿಗಳಾಗಿ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ರೂಢಿ ಪಾಠ ಸಂಯೋಜಕರಾ ಶ್ರೀ ಆನಂದರಾವ್ ದೇಸಾಯಿ ವಹಿಸಿದ್ದರು. ಪ್ರಾರ್ಥನೆಯನ್ನು ಪ್ರಶಿಕ್ಷಣಾರ್ಥಿಯಾದ ಸಂಗೀತ. ವಿ. ಅಂಗಡಿ ಮಾಡಿದರು, ತಿರುಪತಿ ಸ್ವಾಗತ ಪುಪ್ಪಾರ್ಪಣೆ ನೆರವೇರಿಸಿದರು. ಶಿಲ್ಪಾ ಹಿರೇಮಠ ಮತ್ತು ನೇತ್ರಾವತಿ ಬಹುಮಾನ ವಿತರಣಾ ಸಮಾರಂಭವನ್ನು ನಡೆಸಿದರು, ಪ್ರಶಿಕ್ಷಣಾರ್ಥಿಗಳಾದ ಗೀತಾ ಮತ್ತು ಮೌನೇಶ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ಆಂಜನೇಯ್ಯ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಯಾದ ರಮೇಶ ನೆರವೇರಿಸಿ ಕೊಟ್ಟರು. ಈ ಸಮಾರಂಭದಲ್ಲಿ ಶಾಲೆಯ ಸಹ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.
Subscribe to:
Post Comments (Atom)
0 comments:
Post a Comment