ಕೊಪ್ಪಳ ಆ. ೦೧ ಗಂಗಾವತಿ ತಆಲೂಕು ಚಿಕ್ಕಬೆಣಕಲ್ ಗ್ರಾ.ಪಂ. ವ್ಯಾಪ್ತಿಯ ಹೊಸಬೆಣಕಲ್ ಗ್ರಾಮದಲ್ಲಿ ರೋಜಗಾರ ದಿವಸ ಆಚರಣೆ ಮಾಡಲಾಯಿತು. ತಾಲೂಕಾ ಪಂಚಾಯತಿ ಐಇಸಿ ಸಂಯೋಜಕ ಕೃಷ್ಣನಾಯಕ್ ಅವರು ಉದ್ಯೋಗಖಾತ್ರಿ ಯೋಜನೆಯಡಿ ರೋಜಗಾರ್ ದಿವಸ ಆಚರಣೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿ, ಕೂಲಿ ಕಾರ್ಮಿಕರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನೀಡುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಸ್ಥಳೀಯವಾಗಿಯೇ ಉದ್ಯೋಗ ಪಡೆದುಕೊಂಡು, ಗುಳೇ ಹೋಗದಂತೆ ಕರೆ ನೀಡಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹೇಶ ಮಾತನಾಡಿ ಮುಖ್ಯ ಮಂತ್ರಿಗಳ ೨೧ ಅಂಶಗಳ ಕಾಂiiಕ್ರಮ ಮತ್ತು ವೈಯಕ್ತಿಕ ಕಾಮಗಾರಿಗಳ ಮಾಹಿತಿ ನೀಡಿದರು. ರೋಜಗಾರ ದಿವಸದಂದು ೨೧೦ ಕುಟುಂಬಗಳು ಭಾಗವಹಿಸಿದರು. ಅದೇ ದಿನ ನಮೂನೆ-೬ ಪಾರಂ ಪಡೆದು ಸ್ವೀಕೃತಿ ನೀಡಿ ೨೧೦ ಕುಟುಂಬಗಳಿಗೆ ಹೊಸಬೇಣಕಲ್ ಗ್ರಾಮದಲ್ಲಿ ಅರಣ್ಯೀಕರಣ ಕಾಮಗಾರಿ ಪ್ರಾರಂಭಿಸಿ ಕೆಲಸ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷರು, ಗ್ರಾ.ಪಂ. ಸರ್ವ ಸದಸ್ಯರು, ಸಿಬ್ಬಂದಿಗಳು, ಕಾಯಕಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Subscribe to:
Post Comments (Atom)
0 comments:
Post a Comment