PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ, ೨೧- ನಾಡಿನ ಆರಾಧ್ಯದೈವ ಪ್ರಸಿದ್ಧ ಕಲ್ಲೂರು ಗ್ರಾಮದ ಶ್ರೀ ಕಲ್ಲಿನಾಥ ದೇವರಿಗೆ ಹತ್ತು ಕೆ.ಜಿ.ಬೆಳ್ಳಿ ಕವಚ ಸಮರ್ಪರ್ಣಾ ಸಭಾರಂಭ ಅಗಷ್ಟ ೩೦ರಂದು ರವಿವಾರ ಜರುಗಲಿದೆ. ಶ್ರೀ ಕಲ್ಲಿನಾಥನ ಭಕ್ತರಾದ ತಾಳಕನಕಾಪೂರ, ಮಂಗಳೂರು, ವಣಗೇರಿ, ಚಾಮಲಾಪೂರ, ಇರಕಲ್ಲಗಡಾ, ಲೇಬಗೇರಿ ಗ್ರಾಮದ ದೇಶಪಾಂಡೆ ಬಂಧುಗಳು ಭಕ್ತಿ ಪೂರ್ವಕವಾಗಿ ಬೆಳ್ಳಿ ಮೂರ್ತಿ ಸಮರ್ಪಣೆ ಮಾಡಲಿದ್ದಾರೆ.  ಈ ದಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ಅಗಡಿ ಆನಂದವನದ ಶ್ರೀ ಗುರುದತ್ತ ಮೂರ್ತಿ ಚಕ್ರವರ್ತಿಗಳು, ವೇ.ಬ್ರ.ಶಂಕರ್ ಭಟ್ಟ ಜೋಷಿ, ಸೂಡಿಯ ವೇ.ಬ್ರ.. ಭುಜಂಗ ಶರ್ಮ, ಕರ್ಕಿಹಳ್ಳಿಯ ಮಲ್ಲಾರಭಟ್ಟ ದಿಕ್ಷೀತರು, ಸಂತಶ್ರೇಷ್ಠ ಸುರೇಶ್ವರ ಪಾಟೀಲ್ ,ವಣಗೇರಿಯ ಪರಶುರಾಮ ಭಟ್ಟ ಜೋಷಿ ವಹಿಸಲಿದ್ದು ದೇಶಪಾಂಡೆ ಬಂಧುಗಳು ಹಾಗೂ ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀ ಕಲ್ಲಿನಾಥ ಕೃಪಾ ದೇಶಪಾಂಡೆ ಸೇವಾ ಸಂಸ್ಥೆಯ ಕಾರ್ಯದರ್ಶಿ ಸಂತೋಷ ದೇಶಪಾಂಡೆ ಕೊರಿದ್ದಾರೆ.

Advertisement

0 comments:

Post a Comment

 
Top