ಕೊಪ್ಪಳ - 22 ಕುಷ್ಟಗಿ ತಾಲೂಕ ಪಂಚಾಯತ ಕಚೇರಿಯ ಅಧ್ಯಕ್ಷರ ಕೊಠಡಿಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ವೆಸಗಿರುವುದನ್ನು ದಲಿತ ಪ್ಯಾಂಥರ್‍ಸ್ ಆಫ್ ಇಂಡಿಯಾ, ಜಿಲ್ಲಾ ಸಮಿತಿ ಖಂಡಿಸಿದೆ. ಅಂಬೇಡ್ಕರ್ ಭಾವಚಿತ್ರವನ್ನು ಪ್ರತಿಯೊಬ್ಬ ಜನಪ್ರತಿನಿಧಿ ಅಧಿಕಾರಿಗಳು ಸುರಕ್ಷಿತ ಜಾಗದಲ್ಲಿ ಇಟ್ಟು ಪೂಜೆ ಸಲ್ಲಿಸಬೇಕಾಗಿದ್ದು, ಆದರೆ ಕುಷ್ಟಗಿ ತಾಲೂಕಾ ಪಂಚಾಯತ ಅಧ್ಯಕ್ಷೆ ಸುವರ್ಣ ತುರಾಯಿ ತಮ್ಮ ವಿಶ್ರಾಂತಿ ಕೊಠಡಿಯ ಮಂಚದ ಕೆಳಗೆ ಬೀಸಾಡಿದ್ದು, ಕನಿಷ್ಠ ಜಾಗವಿಲ್ಲದಂತೆ ವರ್ತಿಸಿದ ಅಧ್ಯಕ್ಷೆಯ ಸದಸ್ಯತ್ವ ರದ್ದುಗೊಳಿಸಿ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕೆಂದು ದಲಿತ ಪ್ಯಾಂಥರ್‍ಸ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷರಾದ ಮುದಿಯಪ್ಪ ಬರಗೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಪಂಪಾಪತಿ ಸಿದ್ಧಾಪೂರ, ಜಿಲ್ಲಾ ಉಪಾಧ್ಯಕ್ಷ ರಾಮಣ್ಣ ಯತ್ನಟ್ಟಿ, ದೇವಪ್ಪ ಯತ್ನಟ್ಟಿ ಕೊಪ್ಪಳ ತಾಲೂಕಾ ಅಧ್ಯಕ್ಷರು ಕುಷ್ಟಗಿ ಇವರು ಆಗ್ರಹಿಸಿದ್ದಾರೆ.
Home
»
Koppal News
»
koppal organisations
»
news
» ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ಅವಮಾನಕ್ಕೆ ಖಂಡನೆ.
Subscribe to:
Post Comments (Atom)
0 comments:
Post a Comment