PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೨೨ (ಕ ವಾ) ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ೨೦೧೪ನೇ ಸಾಲಿನಲ್ಲಿ (ಜನೆವರಿ ೨೦೧೪ ರಿಂದ ಡಿಸೆಂಬರ್ ೨೦೧೪ರ ಅವಧಿಯಲ್ಲಿ) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ ಅವುಗಳ ಮುದ್ರಣ, ಮುಖಪುಟ, ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ಪ್ರಕಾಶಕರಿಗೆ ೨೦೧೪ನೇ ಸಾಲಿನ ಕನ್ನಡ ಪುಸ್ತಕ ಸೊಗಸು-೨೦೧೪ ಬಹುಮಾನಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುಖಪುಟ ವಿನ್ಯಾಸಕರ ಹೆಸರು ಹಾಗೂ ಪೂರ್ಣ ವಿಳಾಸ ಇತ್ಯಾದಿ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-೫೬೦೦೦೨ ಈ ವಿಳಾಸಕ್ಕೆ ಸೆಪ್ಟಂಬರ್.೧೪ ರೊಳಗಾಗಿ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-೫೬೦೦೦೨, ದೂರವಾಣಿ ಸಂಖ್ಯೆ:೦೮೦-೨೨೪೮೪೫೧೬, ೨೨೧೦೭೭೦೪ ಇವರನ್ನು ಅಥವಾ ಪ್ರಾಧಿಕಾರದ ವೆಬ್‌ಸೈಟ್
www.kannadapustakapradhikara.com ನ್ನು ಸಂಪರ್ಕಿಸಬಹುದಾಗಿದೆ.

Advertisement

0 comments:

Post a Comment

 
Top