PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಆ,೦೧ ಪ್ರತಿಯೊಬ್ಬ ಮನುಷ್ಯನಲ್ಲಿ ಧಾರ್ಮಿಕ ಆಚಾರ ವಿಚಾರವಿರಬೇಕು ಧಾರ್ಮಿಕ ಆಚರಣೆಯಿಂದ ಮನುಷ್ಯನ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯಲಿದೆ ಮನಶುದ್ದಿ ಆತ್ಮಶುದ್ದಿಗಾಗಿ ಧಾರ್ಮಿಕ ಆಚರಣೆ ಅತ್ಯವಶಕವಾಗಿದೆ ಎಂದು ಸಯ್ಯದ್ ಫೌಂಢೇಶನ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಂಖಡ ಕೆ.ಎಂ.ಸಯ್ಯದ್ ಹೇಳಿದರು.
  ಅವರು ತಾಲೂಕಿನ ಹಳೇಬಂಡಿ ಹರ್ಲಾಪೂರ್ ಗ್ರಾಮದ ಐತಿಹಾಸಿಕ ಪ್ರಸಿದ್ಧ ಸಯ್ಯದ್ ಮೌಲಾಅಲಿ ದರ್ಗಾದ ೭ನೇ ಉರುಸ್ ನಿಮಿತ್ತ ಶನಿವಾರ ಬೆಳಿಗ್ಗೆ ದರ್ಗಾಕ್ಕೆ ಭೇಟಿಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಗಾ ಕಮೀಟಿಯವರು ಮಾಡಿದ ಸನ್ಮಾನವನ್ನು ಸ್ವೀಕರಿಸಿದ ಬಳಿಕ ಮಾತನಾಡುತ್ತಾ ಈ ಕುರಿತು ಪ್ರತಿಕ್ರೀಯೆ ನೀಡಿದರು. ಮುಂದುವರೆದು ಮಾತನಾಡಿದ ಅವರು ಈ ದರ್ಗಾದ ಉರುಸು ಈ ಭಾಗದ ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತರಯ ಪ್ರತೀಕವಾಗಿದೆ ಇಲ್ಲಿ ಎಲ್ಲರೂ ಕೂಡಿಕೊಂಡು ಉರುಸು ಆಚರಣೆಮಾಡಿ ಸರ್ವ ಜನಾಂಗದ ಶಾಂತಿ, ನೆಮ್ಮದಿ, ಭಾವ್ಯಕ್ಯತೆಯ ಜೀವನಕ್ಕಾಗಿ ಪ್ರಾರ್ಥಿಸಬೇಕು ಭೇದ, ಭಾವವಿಲ್ಲದೆ ಈ ಉರುಸ್ ಆಚರಣೆಮಾಡುತ್ತಿರುವ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಗಿದೆ ಎಂದು ಎಂದು ಸಯ್ಯದ್ ಫೌಂಢೇಶನ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಂಖಡ ಕೆ.ಎಂ.ಸಯ್ಯದ್ ಹೇಳಿದರು. ಉರುಸ್ ದಿನದ ಮುನ್ನಾ ಶುಕ್ರವಾರ ಗಂಧನಡೆಯಿತು, ಶನಿವಾರ ಉರುಸ್ ಮತ್ತು ಸಾಮೂಹಿಕ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿತು ರವಿವಾರ ಬೆಳಿಗ್ಗೆ ಜಿಯಾರತ್ ನಡೆಯಲಿದೆ ಈ ಸಂದರ್ಭದಲ್ಲಿ ಸಯ್ಯದ್ ಷಾ ಬಾಬಾ, ಮಹೇಬೂಬಷಾ, ಕಂಟೆಪ್ಪ, ಬಹೇಬೂಬಅಲಿ ಸಾಬ್, ಹನೀಫ್ ಸಾಬ್, ಫಕೀರಸಾಬ್, ಯಮನೂರ್ ಸಾಬ್ ಅಜ್ಮೀರ್ ಅಲಿ, ರೋಷನ್ ಅಲಿ, ತಾ.ಪಂ ಮಾಜಿ ಅಧ್ಯಕ್ಷ ದೇವಣ್ಣ ಮೇಕಾಳಿ, ಅಗಳಕೇರಿ ಗ್ರಾ.ಪಂ ಅಧ್ಯಕ್ಷ ಆರ್,ಡಿ.ಮುಲ್ಲಾ ಸದಸ್ಯ ಲಿಂಗರಾಜ್, ಬಿ.ಕೆ.ಹಿರೇಮಠ ವಕೀಲರು ಸೇರಿದಂತೆ ಸಯ್ಯದ್ ಫೌಂಡೇಶನ್ಸ್ ನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ಸುತ್ತಮುತ್ತಲಿನ ೭ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top