ಕೊಪ್ಪಳ, ಜು.೦೩ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪುರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜು.೦೧ ರಂದು ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದ್ದು, ಸಂಬಂಧಪಟ್ಟ ಪೋಷಕರು ಮಗುವನ್ನು ಪಡೆಯಬಹುದಾಗಿದೆ ಎಂದು ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.
ನವಜಾತ ಶಿಶುವನ್ನು ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದು, ಗ್ರಾಮದ ಅಂಗನವಾಡಿ ಕಾರ್ಯಕರ್ತರು ಶಿಶುವನ್ನು ರಕ್ಷಣೆ ಮಾಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಶಿಶು ಸಿಕ್ಕಿದ ಮಾಹಿತಿ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶಿಶುವಿನ ಪೋಷಕರು ಪತ್ತೆಯಾಗದ ಕಾರಣ ತಾತ್ಕಾಲಿಕ ಪೋಷಣೆ, ರಕ್ಷಣೆ ಹಾಗೂ ಚಿಕಿತ್ಸೆಗಾಗಿ ಶಿಶುವನ್ನು ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯು ಘಟಕದಲ್ಲಿ ಇರಿಸಲಾಗಿದೆ. ತಿಳಿ ಕೆಂಪು ಮೈಬಣ್ಣ, ದುಂಡು ಮುಖ ಹೊಂದಿರುವ ಶಿಶುವು, ೧.೭ ಕೆ.ಜಿ ತೂಕ ಹೊಂದಿದೆ. ಶಿಶುವಿಗೆ ಸಂಬಂಧಪಟ್ಟ ಪೋಷಕರು ಇದ್ದಲ್ಲಿ ಈ ಕೆಳಗಿನ ವಿಳಾಸಕ್ಕೆ ೬೦ ದಿನಗಳೊಳಗಾಗಿ ಬಂದು ಶಿಶುವನ್ನು ಪಡೆಯಬಹುದಾಗಿದೆ. ವಿಳಾಸ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ, ಸರ್ಕಾರಿ ಬಾಲಕರ ಬಾಲಮಂದಿರ, ರೋಟರಿ ಕ್ಲಬ್ ಬಿಲ್ಡಿಂಗ್, ಭಾಗ್ಯನಗರ ರಸ್ತೆ, ಕೊಪ್ಪಳ, ದೂರವಾಣಿ ಸಂಖ್ಯೆ: ೦೮೫೩೯-೨೩೪೪೧೦, ೨೩೪೧೩೫, ೦೮೫೩೯-೨೨೫೦೩೦, ಮೊ: ೭೨೫೯೩೭೪೮೬೮. ಶಿಶುವಿನ ಪೋಷಕರು ಪತ್ತೆಯಾಗದಿದ್ದಲ್ಲಿ ಕಾನೂನು ಪ್ರಕಾರ ಶಿಶುವನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

0 comments:
Post a Comment