PLEASE LOGIN TO KANNADANET.COM FOR REGULAR NEWS-UPDATES

ಪಂಚಮಸಾಲಿ ಸಮಾಜ ಸಂಘಟನೆಯಲ್ಲಿ ಮನೆಯಲ್ಲಿ ಅರಮನೆ ಕಾರ್ಯಕ್ರಮ ಸಹಕಾರಿ ಎಂದು ಮಾಜಿ ಸಂಸದ ಹಾಗೂ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ಶಿವರಾಮಗೌಡರವರು ಅಭಿಪ್ರಾಯಪಟ್ಟರು. ಅವರು ನಗರದ ಚಂದ್ರಶೇಖರ ತೋಟದ ಅವರ ಮನೆಯಲ್ಲಿ ಗುರುವಾರ ರಾತ್ರಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮನೆಯಲ್ಲಿ ಅರಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪಂಚಮಸಾಲಿ ಸಮಾಜ ಸಂಘಟನೆಗೆ ಈ ಮೊದಲಿನಿಂದಲೂ ಹಮ್ಮಿಕೊಂಡು ಬರುತ್ತಿರುವ ಈ ಮನೆಯಲ್ಲಿ ಅರಮನೆ ಕಾರ್ಯಕ್ರಮದ ಮೂಲಕ ಸಮಾಜ ಬಾಂಧವರು ಒಗ್ಗೂಡುತ್ತಿದ್ದು, ಸಂಘಟನೆಗೆ ಸಹಕಾರಿಯಾಗಿದೆ. ಪ್ರತಿ ತಿಂಗಳೂ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ತಪ್ಪದೇ ಭಾಗವಹಿಸಿ ತಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕು. ಮುಂಬರುವ ದಿನಗಳಲ್ಲಿ ಸಮಾಜದ ಸಂಘಟನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದ ಅವರು, ಸಮಾಜದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಲು ತಿಳಿಸಿದರು. ತಾಲೂಕ ಪಂಚಾಯತ ಸದಸ್ಯ ಶರಣಪ್ಪ ಸಾಹುಕಾರ ಮಾತನಾಡಿ, ಪಂಚಮಸಾಲಿ ಸಮಾಜದ ಸಂಘಟನೆಯಲ್ಲಿ ಶಿವರಾಮಗೌಡರ ಕೊಡುಗೆ ಅಪಾರ. ಸಮಾಜದ ಪ್ರತಿಯೊಬ್ಬರ ಮನೆಮನೆಗೆ ತೆರಳಿ ಸಂಘಟಿಸಿದ ಪರಿಣಾಮವೇ ಇಂದು ನಾವೆಲ್ಲ ಇಲ್ಲಿ ಸೇರಿದ್ದೇವೆ. ಸಮಾಜವನ್ನು ತಳಮಟ್ಟದಿಂದ ಸಂಘಟಿಸಿದ ಕೀರ್ತಿ ಶಿವರಾಮಗೌಡರಿಗೆ ಸಲ್ಲುತ್ತದೆ. ಸಂಘಟನೆ ವಿಚಾರದಲ್ಲಿ ನಮಗೆ ಶಿವರಾಮಗೌಡರೇ ಆದರ್ಶ ಮತ್ತು ಸ್ಪೂರ್ತಿ ಎಂದ ಅವರು, ಶಿವರಾಮಗೌಡರ ಮಾರ್ಗದರ್ಶನದಲ್ಲಿ ಸಮಾಜ ಬಾಂಧವರು ಸಂಘಟಿತರಾಗಲು ಕರೆ ನೀಡಿದರು. ಶಿವರಾಮಗೌಡರ ಕೊಡುಗೆ ಸ್ಮರಿಸಿದ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಪಂಪನಗೌಡ ಪೊಲೀಸ್ ಪಟೇಲ್ ಸಮಾಜ ಸಂಘಟನೆಗೆ ತಾವು ಸದಾ

ಸಿದ್ಧರಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಕಳಕನಗೌಡ, ಕಂಪ್ಲಿ ಬಸಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಚನ್ನವೀರನಗೌಡ ಕೋರಿ, ಶ್ರೀಶೈಲಗೌಡ, ಶರಣಪ್ಪ ಸೂಡಿ, ಚಂದ್ರಶೇಖರ ತೋಟದ, ಬಸಾಪಟ್ಟಣ ಬಸನಗೌಡ, ಶಿವಾನಂದ ಮೇಟಿ, ಎ.ಕೆ. ಮಹೇಶ ಕುಮಾರ, ವೀರೇಶ ಸುಳೇಕಲ್, ಸಾಹಿತಿ ಎಸ್.ವಿ. ಪಾಟೀಲ ಗುಂಡೂರು, ವಿನಯ್ ಪಾಟೀಲ್, ಪ್ರಕಾಶ ಪಾಟೀಲ, ಮಹಾಲಿಂಗಪ್ಪ, ರಾಮತ್ನಾಳ ಬಸವರಾಜ, ಜಗದೀಶ ಬೀಳಗಿ, ಸುರೇಶ ಗೌರಪ್ಪನವರ್, ಶರಣೇಗೌಡ ಪಾಟೀಲ, ಮಹಾರುದ್ರಸ್ವಾಮಿ, ವೀಣಾ ಗ್ರೂಪ್ಸ್‌ನ ಎಸ್.ಬಿ. ಯಲಿಗಾರ್, ರೇಣುಕುಮಾರ್, ಶರಣಪ್ಪ, ಪಂಪಾಪತಿ, ಬಸವರಾಜ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top