PLEASE LOGIN TO KANNADANET.COM FOR REGULAR NEWS-UPDATES


ಹೊಸಪೇಟೆ: ತಾಲೂಕಿನಲ್ಲಿರುವ ಖಾಸಗಿ ಮತ್ತು ಅನುದಾನಿತ ಶಾಲೆಗಳು ಈಗಾಗಲೇ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳುತ್ತಿವೆ. ದಾಖಲಾತಿ ಮಾಡಿಕೊಳ್ಳುವ ಸಮಯದಲ್ಲಿ ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕೆ ಸಂಬಂಧಿಸಿದ ನೀತಿ-ನಿರೂಪಣೆಯ ಪ್ರಕಾರ ಮಾಡಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಪೋಷಕರಿಂದ ಡೊನೇಷನ್ ವಸೂಲು ಮಾಡುತ್ತಿವೆ. ಇದನ್ನು ನಿಯಂತ್ರಿಸಬೇಕೆಂದು ಡಿವೈಎಫ್‌ಐ ಸಂಘಟನೆ ಬುಧವಾರ ಹೋರಾಟ ನಡೆಸಿತು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ. ಮಹೇಶ್ ಮಾತನಾಡಿ, ಯಾರು ಹೆಚ್ಚು ಹಣವನ್ನು
ಕೊಡುತ್ತಾರೆಯೇ ಅವರ ಮಕ್ಕಳಿಗೆ ಶಾಲೆಯಲ್ಲಿ ದಾಖಲಾತಿ ಎಂಬ ಅರಣ್ಯ ನೀತಿ ಜಾರಿಯಲ್ಲಿದೆ ಹೊಸಪೇಟೆಯಲ್ಲಿ ಡೊನೇಷನ್ ಹಾವಳಿಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ನಿಂದ ಅನೇಕ ಬಾರಿ  ಮನವಿ ಸಲ್ಲಿಸಲಾಗಿದೆ. . ಆದರೆ ಯಾವುದೇ ರೀತಿಯಾದ ಡೊನೇಷನ್ ನಿಯಂತ್ರಿಸುವ ಬಗ್ಗೆ ಕಠಿಣ ಕ್ರಮವನ್ನು ಕೈಗೊಂಡಿಲ್ಲ. ಡೊನೇಷನ್ ಹಾವಳಿ ನಿರಂತರವಾಗಿ ನಡೆದಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದರು. ಡಿವೈಎಫ್‌ಐ ಮುಖಂಡ ಕಲ್ಯಾಣಯ್ಯ ಮಾತನಾಡಿ, ಡೊನೇಷನ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಹೋರಾಟದ ಭಾಗವಾಗಿ ೨೦೦೬ರಿಂದ ಡೊನೇಷನ್ ವಿರೋಧಿ ಸಮಿತಿಯನ್ನು ರಚಿಸಲಾಗಿತ್ತು. ಅದೇ  ರೀತಿಯಾಗಿ ೨೦೦೮ ರಿಂದ ಶಾಸಕರ ಅಧ್ಯಕ್ಷತೆಯಲ್ಲಿ ಡೊನೇಷನ್ ವಿರೋಧಿ ಸಮಿತಿಯನ್ನು ರಚಿಸ ಅದರ ವರದಿಯನ್ನು ಶಿಕ್ಷಣ ಇಲಾಖೆಗೆ ಮತ್ತು ಶಾಸಕರಿಗೆ ನೀಡಲಾಗುತಿತ್ತು. ಇಲಾಖೆಯಿಂದಲು ಸಹ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಸಮಿತಿ ಕೊಟ್ಟ ವರದಿಯ ಆಧಾರದ ಮೇಲೆ ಕಠಿಣ ಕ್ರವನ್ನು ಕೈಗೊಳ್ಳಲಿಲ್ಲ. ಈ  ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಇಲಾಖೆ ಇತ್ತ ಗಮನ ಹರಿಸಬೇಕೆಂದರು. ಡಿವೈಎಫ್‌ಐ ಮುಖಂಡ ಎನ್. ಯಲ್ಲಾಲಿಂಗ ಮಾತನಾಡಿ, ಪ್ಲೇ ಕ್ಲಾಸ್, ಎಲ್.ಕೆ.ಜಿ, ಯು.ಕೆ.ಜಿ ಮತ್ತು ಒಂದನೇ ತರಗತಿಗಳಿಗೆ ಮಕ್ಕಳನ್ನು ಸೇರಿಸಿಕೊಳ್ಳಲು ೫,೦೦೦ ರೂ ಗಳಿಂದ ೩೦,೦೦೦ ರೂಗಳಿಗೆ ಹಣವನ್ನು ಡೊನೇಷನ್ ಹೆಸರಿನಲ್ಲಿ ಯಾವುದೇ ರಶೀದಿಯನ್ನು ಕೊಡದೆ ಶಾಲೆಗಳು ಸಂಗ್ರಹಿಸುತ್ತಿವೆ. ಪ್ರಾಥಮಿಕ ಶಾಲೆಗಳಿಗೆಯೇ  ಇಷ್ಟು ಹಣವನ್ನು ಎಲ್ಲಾ ನಿಯಮಗಳನ್ನು ಮೀರಿ ಹಗಲು ದರೋಡೆಗೆ ಇಳಿದಿರುವ ಖಾಸಗಿ-ಅನುದಾನಿತ  ಶಾಲೆಗಳನ್ನು ನಿಮ್ಮ ಇಲಾಖೆ ನಿಯಂತ್ರಿಸದೇ ಇರುವುದನ್ನು  ನೋಡಿದರೆ ಇಲಾಖೆಯವರು ಇದರಲ್ಲಿ  ಪಾಲುದಾರರೇ ಎಂಬ ಸಂಶಯ ಬರುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ  ಮನವಿ ಸ್ವೀಕರಿಸಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಪ್ರತಿಭಟನೆಯ ನೇತೃತ್ವವನ್ನು ಕೆ.ರಮೇಶ್, ಬಂಡೆ ತಿರುಕಪ್ಪ, ಕೆ. ಹನುಮಂತ ಮತ್ತಿತರರು ವಹಿಸಿದ್ದರು. 

Advertisement

0 comments:

Post a Comment

 
Top