PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಪ್ರತಿಯೊಂದು ಕ್ಷೇತ್ರದಲ್ಲಿ ಶ್ರದ್ಧೆ-ಪ್ರಾಮಾಣಿಕತೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ನಗರದ ಹೂವಿನಹಾಳ ರಸ್ತೆಯ ಎಂಎಸ್‌ಕೆ ಗಾಮೇಂಟ್ಸ್‌ನ ವಾರ್ಷಿಕೋತ್ಸವ ಹಾಗೂ ಜವಳಿ ಇಲಾಖೆಯ ಸಂಯುಕ್ತಶ್ರಯದಲ್ಲಿ ಸಂಸ್ಥೆಯಲ್ಲಿ ಹೊಲಿಗೆ ತರಬೇತಿ ಪಡೆದ ಪರಿಶಿಷ್ಠಜಾತಿ-ಪರಿಶಿಷ್ಠ ಪಂಗಡ, ಅಲ್ಪಸಂಖ್ಯಾತ,ಹಿಂದುಳಿದ ವರ್ಗದ ಮಹಿಳೆಯರಿಗೆ ತರಬೇತಿ ಪತ್ರ ಗೌರವ ಧನದ ಚೆಕ್ ವಿತರಣೆ ಕಾರ‍್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿ ಇಂದು ನಗರದಲ್ಲಿ ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸಲು ನಗರದಲ್ಲಿ ಸರಕಾರ ಇಂಥ ಗಾರ್ಮೆಂಟ್ಸ್‌ಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗ ಕೈಗೊಂಡು ಉಪಜೀವನ ಸಾಗಿಸಲು ಅನುಕೂಲವಾಗುತ್ತದೆ,ಸರಕಾರ ಮಹಿಳೆಯರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಈಗಾಗೀ ಇದರ ಸದುಪಯೋಗ ಪಡೆದುಕೊಳ್ಳಬೇಕು ಅಂದಾಗ ಯೋಜನೆ ಸದುಪಯೋಗವಾಗುತ್ತದೆ, ತರಬೇತಿ ಪಡೆದ ಮಹಿಳೆಯರಿಗೆ ನಗರಸಭೆ ಹಾಗೂ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ನೀಡುವರು ಇದರ ಸದುಪಯೋಗವನ್ನು ಮಹಿಳೆಯರು ಪಡೆಯಬೇಕು ಎಂದರು.
ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ ಮಾತನಾಡಿ ಕಲುಬುರಗಿಯಲ್ಲಿ ಎಂಎಸ್‌ಕೆ ಮಿಲ್ ಸುಮಾರು ನೂರು ವರ್ಷದ ಇತಿಹಾಸ ಹೊಂದಿದೆ ಅದರಂತೆ ನಗರದಲ್ಲಿ ಎಂಎಸ್‌ಕೆ ಗಾರ್ಮೆಂಟ್ಸ್ ಮಹಿಳೆಯರಿಗೆ ವಿವಿಧ ತರಬೇತಿ ನೀಡುತ್ತ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಸಹಾಯ ಸಹಕಾರ ನೀಡುತ್ತೀದೆ ಇದು ಸಂತಸವೆನಿಸುತ್ತದೆ, ಈ ಸಂಸ್ಥೆಯು ಇನ್ನು ಹೆಚ್ಚು ಯಶಸ್ಸು ಸಾಧಿಸಲಿ ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ತೀರ್ಥಪ್ಪ ಗೋಟೂರು ವಹಿಸಿ ಸಂಸ್ಥೆಯು ನಗರದಲ್ಲಿ ಯಶಸ್ವೀಯಾಗಿ ಕಾರ‍್ಯ ನಿರ್ವಹಿಸುತ್ತ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತೀದೆ, ಮುಂದಿನ ದಿನಗಳಲ್ಲಿ ಬಟ್ಟೆ ತಯಾರಿಸಲು ಜವಳಿ ಇಲಾಖೆಯಿಂದ ಕೈಮಗ್ಗವನ್ನು ಮಂಜೂರು ಮಾಡಲಾಗಿದೆ ಇದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಎಂಎಸ್‌ಕೆ ಸಂಸ್ಥೆಯ ಮುಖ್ಯಸ್ಥ ಮಹಮ್ಮದ್ ಶಫಿ, ಯುನಿಯನ್ ಬ್ಯಾಂಕ್‌ನ ಅಭಿವೃದ್ಧಿ ಅಧಿಕಾರಿ ಸತ್ಯನಾರಾಯಣ ಬಿ. ಹಲಗತ್ತಿ, ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ಹುಸೇನ್ ಫೀರಾ ಮುಜಾವರ್, ಮೈಲಪ್ಪ ಬಿಸರಳ್ಳಿ,ಯುನೂಸ್ ರೇಡಿಯೋ ಸೆಂಟರ್ ಮತ್ತೀತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top