PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಮಾ.೩೧: ಇಲ್ಲಿನ ಹಿರಿಯ ನ್ಯಾಯವಾದಿ ಪಿ.ಆರ್.ಹೊಸಳ್ಳಿ ಮತ್ತು ಡಾ: ಹಸನ್ ಅಲಿ ನಿಂಗಾಪುರ ರವರ ತಂದೆ ದಿ|| ಜನಾಬ್ ರಾಜಾಹುಸೇನಸಾಹೇಬ ಹೊಸಳ್ಳಿ (ಹುಲಿಗಿ) ರವರ ಸ್ಮರಣಾರ್ಥವಾಗಿ ಕೊಪ್ಪಳ ನಗರದ ಪಿರ್‌ದೋಸ್ ನಗರದ ಓಣಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಇದೇ ದಿನಾಂಕ : ೦೩-೦೪-೨೦೧೫ ರ ಶುಕ್ರವಾರದಂದು ಬೆಳಿಗ್ಗೆ ೮ ಗಂಟೆಗೆ ಉಚಿತ ಸಾಮೂಹಿಕ ಖತ್ನಾ ಶಿಬಿರವನ್ನು ಏರ್ಪಡಿಸಲಾಗಿದೆ. 
ಸದರಿ ಖತ್ನಾ ಶಿಬಿರದಲ್ಲಿ ಪಾಲ್ಗೊಳ್ಳುವ ಮುಸ್ಲಿಂ ಮಕ್ಕಳಿಗೆ ಉಚಿತವಾಗಿ ಖತ್ನಾ ಮಾಡಿಸುವುದಲ್ಲದೇ ಉಚಿತವಾಗಿ ವಸ್ತ್ರ, ಔಷದಿ ಹಾಗೂ ಇನ್ನೀತರ ಅನುಕೂಲತೆಗಳನ್ನು ನ್ಯಾಯವಾದಿ ಪೀರಾಹುಸೇನ ಹೊಸಳ್ಳಿ ಇವರಿಂದ ಒದಗಿಸಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಡಾ: ಹಸನ್ ಅಲಿ ಆರ್.ನಿಂಗಾಪುರ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಸುಮಾರು ೨೧ ವರ್ಷಗಳಿಂದ ಸತತವಾಗಿ ಮುಸ್ಲಿಂ ಮಕ್ಕಳಿಗೆ ಹೊಸಳ್ಳಿ ಬಂಧುಗಳಿಂದ ಅವರ ತಂದೆಯವರ ಸ್ಮರಣಾರ್ಥ ಸೇವೆಗಾಗಿ ಉಚಿತ ಖತ್ನಾ ಶಿಬಿರವನ್ನು ನಡೆಸುತ್ತ ಯಶಸ್ವಿಗೊಳಿಸಿದ್ದಾರೆ. ಡಾ: ಹಸನ್ ಅಲಿ ನಿಂಗಾಪುರ ರವರು ಕೊಪ್ಪಳ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ವಿಜಯಾಪುರ, ಗದಗ ಇತ್ಯಾದಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ಬಹುಭಾಗದ ಪ್ರದೇಶಗಳಲ್ಲಿ ಉಚಿತ ಖತ್ನಾ ಶಿಬಿರ ಸೇವೆಯನ್ನು ನಡೆಸುತ್ತಿದ್ದಾರೆ. ಇಚ್ಚಿಸುವ ಪಾಲಕರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಹಾಗೂ ನೇರವಾಗಿ ದಿ.೦೩ ರಂದು ನಡೆಯಲಿರುವ ಶಿಬಿರದಲ್ಲಿ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯೊಳಗಾಗಿ ಭೇಟಿ ಮಾಡಿ ಉಚಿತ ಖತ್ನಾ ಶಿಬಿರ ಮಾಡಿಸಿಕೊಳ್ಳಬಹುದು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಿರಿಯ ನ್ಯಾಯವಾದಿ ಪೀರಾಹುಸೇನ ಹೊಸಳ್ಳಿ ಹಾಗೂ ಅವರ ಸಹೋದರ ಡಾ ಹಸನ್ ಅಲಿ ನಿಂಗಾಪುರ (ನವಾಜ್) ರವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.೯೮೪೫೫೮೧೩೯೬, ೯೯೭೨೮೩೯೪೪೪ ಕ್ಕೆ ಸಂಪರ್ಕಿಸಬಹುದಾಗಿದೆ. 

Advertisement

0 comments:

Post a Comment

 
Top