ಕೊಪ್ಪಳ, ಮಾ. ೬. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ಗ್ರಾಮ ಪಂಚಾಯತ ಕಾತರಕಿ ಗುಡ್ಲಾನೂರ ಮತ್ತು ಶ್ರೀ ತಾಯಮ್ಮದೇವಿ ಭಜನಾ ಯುವಕ ಸಂಘ ಕಾತರಕಿ ಆಶ್ರಯದಲ್ಲಿ ಶನಿವಾರ ಮಾರ್ಚ ೮ ರಂದು ಗ್ರಾಮೀಣ ಕ್ರೀಡೋತ್ಸವ ನಡೆಯಲಿದೆ.
ಮಾರ್ಚ್ ೮ ರಂದು ಬೆಳಿಗ್ಗೆ ೧೦-೩೦ ಕ್ಕೆ ಅಳವಂಡಿ ಹೋಬಳಿ ಕಾತರಕಿಯ ಜಗದ್ಗುರು ಸಿದ್ಧಾರೂಢ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ರೀಡಾಕೂಟವನ್ನು ಶಾಸಕ ಇಕ್ಬಾಲ ಅನ್ಸಾರಿಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸುವರು, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಜಿಲ್ಲಾ ಪಂಚಾಯತ ಸದಸ್ಯೆ ಭಾಗೀರಥಿ, ತಾಲೂಕ ಪಂಚಾಯತಿ ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ, ವೆಂಕನಗೌಡ್ರ ಹಿರೇಗೌಡ್ರ ಸೇರಿದಂತೆ ಇತರರು ಭಾಗವಹಿಸುವರು.
ದೇಸಿ ಕ್ರೀಡೆಗಳನ್ನು ಪ್ರಚುರಪಡಿಸಲು ಹಮ್ಮಿಕೊಂಡಿರುವ ಐದು ಪ್ರಕಾರಗಳ ದೇಸಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಾನದಂಡಗಳು ಇರುವದಿಲ್ಲ, ಟಗ್ ಆಫ್ ವಾರ್ (ಗುಂಪು), ಸಾಮೂಹಿಕ ರಸ್ತೆ ಓಟ (೫ಕಿ, ಮೀ), ಮ್ಯುಜಿಕಲ್ ಚೇರ್, ಸ್ಲೋ ಸೈಕಲ್ ರೇಸ್ ಸ್ಪರ್ಧೆ, ಭಾರ ಎತ್ತುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ಕೊಡಲಾಗುವದು ಎಂದು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣಯ್ಯ ಮತ್ತು ಜಗದಯ್ಯ ಸಾಲಿಮಠ ತಿಳಿಸಿದ್ದಾರೆ.
0 comments:
Post a Comment