PLEASE LOGIN TO KANNADANET.COM FOR REGULAR NEWS-UPDATES



ಮಾರ್ಚ :  ನಗರದ ಸಾಹಿತ್ಯ ಭವನದಲ್ಲಿ ನಡೆಯದ ’ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಮತ್ತು ಎ.ಐ.ಡಿ.ವೈ.ಓ, ಸಂಘಟಿಸಿದ್ದ "ಕೊಪ್ಪಳ ಸಾಂಸ್ಕೃತಿಕ ಜನೋತ್ಸವ" ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಅವರು. ಇಂದು ಶಾಸಕರ, ಮಂತ್ರಿಗ ಸಂಬಳ- ಭತ್ಯ ಪ್ರತಿ ವರ್ಷ ಹೆಚ್ಚಾಗುತ್ತೆ. ಆದರೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಕಲಾವಿದರಿಗೆ. ಸಾಹಿತಿಗಳಿಗೆ ಯಾವುದೆ ಪ್ರಾತ್ಸಾಹ ವಿಲ್ಲ ಎಂದು ಅವರು ನುಡಿದರು. 
ಇಂದು ಕೇಂದ್ರದಲ್ಲಿ ಬಲಪಂಥಿಯ ಶಕ್ತಿಗಳು ಅಧಿಕಾರ ವಹಿಸಿದೆ ಜನ ವಿರೋಧಿ ನೀತಿಗಳಾದ ರೈತರನ್ನು ಹೊಕ್ಕಲೆಬ್ಬಿಸುವ ಭೂಸ್ವಾಧಿನ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಮೂಲಕ ಜಾರಿಯಾಗಿರುವದು ಪ್ರಜಾ ಪ್ರಭುತ್ವದ ಕಗ್ಗೋಲೆ  ಇದನ್ನು ಪ್ರತಿಯೊಬ್ಬರು ವಿರೋಧಿಸ ಬೇಕು ಎಂದು ಕರೆನೀಡಿದರು.
       ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಐಡಿವೈಓನ ರಾಜ್ಯ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ರವರು ಮಾತನಾಡುತ್ತಾ ಸಾಹಿತಿ ಶರತಚಂದ್ರರವರ ಪ್ರಸಿದ್ದ ನುಡಿಯಾದ "ಮಾನವನ ಸಾವು ದುಃಖಕರ ನಿಜ ಆದರೆ ಮಾನವನ ಮೌಲ್ಯಗಳ ಸಾವು ಅತ್ಯಂತ ದುಃಖಕರ" ಎಂದು ಸ್ಮರಿಸುತ್ತಾ ಇಂದು ಆಳು ತ್ತಿರು ಸರ್ಕಾರಗಳಿಗೆ ಜನರ ಬಗ್ಗೆ ಕಾಳಜಿ ಇಲ್ಲ ಆದ್ದರಿಂದಲೆ  ಮಾದ್ಯಮಗಳಲ್ಲಿ ವಿಜೃಂಬಿಸುತ್ತಿರು ಕ್ರೌರ‍್ಯ,  ಹಿಂಸೆ, ಅನೈತಿಕ ಸಂಬಂದಗಳ ಬಗ್ಗೆ ಯಾರು ಮಾತನಾಡುವುದಿಲ್ಲ. ಇದರ ವಿರುದ್ದ ಇಂದು ಚಳುವಳಿ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಜನೋತ್ಸವ ದಂತ ಸದಭಿರುಚಿಯ ಕಾರ್ಯಕ್ರಮಗಳನ್ನು ಮುನ್ನಡೆಸಲು ಜನರೆ ಮುಂದೆ ಬgಬೇಕೆಂದು ನುಡಿದರು. 
ಬಳ್ಳಾರಿ ಯಿಂದ ಆಗಮಿಸಿದ್ದ ಕುಮಾರಿ ಸಹನಾ ರವರ ಕುಚಪುಡಿ ನೃತ್ಯವನ್ನು ಪ್ರದರ್ಶಿಸಿದರು. ಧಾರವಾಡದ ನಾದಜಂಕಾರ ತಂಡವು ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರೆ, 
ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದ ಸಾಯಿ ಕಲಾ ತಂಡದಿಂದ ಪ್ರಸ್ತುತ ಪಡಿಸಿದ  ಪಾಪಸ್ಸ ಕಳ್ಳಿ ಮುಳ್ಳಿ ನಡುವೆ ಜನಪದ ನೃತ್ಯ ಕಾರ್ಯಕ್ರಮವು ಜನಮನ ಸೂರೆಗೊಳಿಸಿತು. ಬ್ರೆಕ್ ಥ್ರೂ ಸೈನ್ಸ್ ಸೊಸೈಟಿ ಕೊಪ್ಪಳ ಇವರಿಂದ ನಡೆಸಿದ  ಪವಾಡ ರಹಸ್ಯ ಬಯಲು ಕಾರ್ಯಕ್ರಮ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರೇರೆಪಿಸಿತು.

ಎ.ಐ.ಡಿ.ವೈ.ಓ,ನ ರಾಜ್ಯ ಕಾರ‍್ಯಕಾರಿ ಸಮಿತಿಯ ಸದಸ್ಯರಾದ ಬಿ ಆರ್. ಉಮೇಶ ಮತ್ತು ಎ.ಐ.ಡಿ.ವೈ.ಓ, ನ ಜಿಲ್ಲಾಧ್ಯಕ್ಷರಾದ ಮಾರುತಿ ಹೊಸಮನಿ ವೇದಿಕೆಮೇಲೆ  ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘಟನಕಾರರಾದ ಶರಣು ಗಡ್ಡಿಯವರು  ಮಾತನಾಡಿದರು. ಎ.ಐ.ಡಿ.ವೈ.ಓ, ನ ಜಿಲ್ಲಾ ಕಾರ್ಯಧರ್ಶಿಗಳಾದ ರಮೇಶ ವಂಕಲಕುಂಟಿ ಅಧ್ಯಕ್ಷತೆಯನ್ನು ವಹಿಸಿದ್ದರು.

Advertisement

0 comments:

Post a Comment

 
Top