PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :  ಕರ್ನಾಟಕ ನಾಟಕ ಅಕಾಡೆಮಿ,ಬೆಂಗಳೂರು,ಕನ್ನಡನೆಟ್.ಕಾಂ ಕವಿಸಮೂಹ ಕೊಪ್ಪಳ ಸಹಯೋಗದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ದಿ. ೨೭-೩-೨೦೧೫ರ ಸಂಜೆ ೪:೩೦ಕ್ಕೆ  ನಗರದ ವಾಲ್ಮೀಕಿ ಭವನದಲ್ಲಿ  ರಂಗ ಕಾವ್ಯಗೋಷ್ಠಿ, ರಂಗಗೀತೆ ಗಾಯನ, ರಂಗಾಭಿನಯ ಹಾಗೂ ರಂಗಸನ್ಮಾನ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.              
       ವಿಶ್ವ ರಂಗಭೂಮಿ ಸಂದೇಶವನ್ನು ಹಿರಿಯ ರಂಗಕರ್ಮಿ  ಬಾಬಣ್ಣ ಕಲ್ಮನಿ ವಾಚನ ಮಾಡಲಿದ್ದಾರೆ. ಕಾರ‍್ಯಕ್ರಮದ ಉದ್ಘಾಟನೆಯನ್ನು  ಸಂಗಣ್ಣ ಕರಡಿ ಸಂಸದರು, ಕೊಪ್ಪಳ ಅಧ್ಯಕ್ಷತೆಯನ್ನು ಶಾಸಕರಾದ ರಾಘವೇಂದ್ರ ಹಿಟ್ನಾಳ  ವಹಿಸಿಕೊಳ್ಳಲಿದ್ದಾರೆ. ಪ್ರಾಸ್ತಾವಿಕವಾಗಿ  ಸಿರಾಜ್ ಬಿಸರಳ್ಳಿ ಸಂಪಾದಕರು, ಕನ್ನಡನೆಟ್.ಕಾಂ ಮಾತನಾಡಲಿದ್ದಾರೆ. ರಂಗಉಪನ್ಯಾಸವನ್ನು ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ನೀಡಲಿದ್ದಾರೆ. 
       ಮುಖ್ಯ ಅತಿಥಿಗಳಾಗಿ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ ಅಧ್ಯಕ್ಷರು,ನಗರಸಭೆ, ಕೊಪ್ಪಳ,ಬಾಳಪ್ಪ ಬಾರಕೇರ ಉಪಾಧ್ಯಕ್ಷರು,ನಗರಸಭೆ, ಕೊಪ್ಪಳ,ಸೈಯದ್ ಜುಲ್ಲುಖಾದರ್ ಖಾದ್ರಿ ಅಧ್ಯಕ್ಷರು ನಗರಾಭಿವೃದ್ದಿ ಪ್ರಾಧಿಕಾರ, ಕೊಪ್ಪಳ ,ಕೊಟ್ರಪ್ಪ ಚೋರನೂರು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ,ಶ್ರೀಮತಿ ಇಂದಿರಾ ಭಾವಿಕಟ್ಟಿ ಅಧ್ಯಕ್ಷರು, ಅಭಿನೇತ್ರಿ ಕಲಾಬಳಗ,ಸಾಧಿಕ ಅಲಿ ಅಧ್ಯಕ್ಷರು, ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘ,ಕೊಪ್ಪಳ, ದೇವೂ ನಾಗನೂರ ಪ್ರಧಾನ ಕಾರ್ಯದರ್ಶಿಗಳು, ಮೀಡಿಯಾ ಕ್ಲಬ್, ಕೊಪ್ಪಳ, ಶಂ.ನಿಂ. ತಿಮ್ಮನಗೌಡರ ರಂಗ ಕಲಾವಿದರು, ಕೊಪ್ಪಳ ಆಗಮಿಸಲಿದ್ದಾರೆ.
      ಈ ಸಂದರ್ಭದಲ್ಲಿ  ಬಹಾದ್ದೂರಬಂಡಿಯ ಮಾಬುಸಾಬ ಹಿರೇಮಸೂತಿ, ಶಿವನಾಯಕ ದೊರೆ ರಂಗನಿರ್ದೇಶಕರು, ಕೂಡ್ಲಿಗಿ ಇವರಿಗೆ ರಂಗಸನ್ಮಾನ ಹಮ್ಮಿಕೊಳ್ಳಲಾಗಿದೆ.  ರಂಗಾಭಿನಯವನ್ನು ಕೊಟ್ರಪ್ಪ ಚೋರನೂರು ಮತ್ತು ರಂಗಗೀತೆಗಳನ್ನು  ನಾರಾಯಣ ಜೋಶಿ, ಕೊಟ್ರಯ್ಯಸ್ವಾಮಿ ಹುಲಿಗಿ, ಜೀವನಸಾಬ ಬಿನ್ನಾಳ ಹಾಡಲಿದ್ದಾರೆ. 
     ರಂಗ ಕಾವ್ಯಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಅಲ್ಲಮಪ್ರಭು ಬೆಟ್ಟದೂರ, ವಿಠ್ಠಪ್ಪ ಗೋರಂಟ್ಲಿ,  ಎಚ್.ಎಸ್.ಪಾಟೀಲ್, ಡಾ.ಮಹಾಂತೇಶ ಮಲ್ಲನಗೌಡರ, ಎ.ಎಂ.ಮದರಿ, ಡಾ.ವಿ.ಬಿ.ರಡ್ಡೇರ್, ರಮೇಶ ಗಬ್ಬೂರ್,ಅಕ್ಬರ್ ಕಾಲಿಮಿರ್ಚಿ, ಜಾಜಿ ದೇವೇಂದ್ರಪ್ಪ, ಅಲ್ಲಾಗಿರಿರಾಜ್,ಡಿ.ಎಂ.ಬಡಿಗೇರ, ಶಿ.ಕಾ.ಬಡಿಗೇರ, ನಟರಾಜ ಸೋನಾರ, ಪ್ರಮೋದ ತುರ್ವಿಹಾಳ, ಅರಳಿ ನಾಗಭೂಷಣ, ಡಾ.ಶಿವಕುಮಾರ ಮಾಲಿಪಾಟೀಲ್, ದಯಾನಂದ ಮಹೂಲಿಕರ್, ಮಾನಪ್ಪ ಬೆಲ್ಲದ, ಜಗನ್ನಾಥ ಬಿಸರಳ್ಳಿ, ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ,ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್,ರಾಘವೇಂದ್ರ ತೂನಾ,ಬಸವರಾಜ ಸಂಕನಗೌಡರ, ಶಿವಪ್ರಸಾದ ಹಾದಿಮನಿ, ವಿಜಯ ಅಮೃತರಾಜ್, ವೀರಣ್ಣ ಹುರಕಡ್ಲಿ,ಮಹೇಶ ಬಳ್ಳಾರಿ, ಸಿರಾಜ್ ಬಿಸರಳ್ಳಿ,  ವಿಮಲಾ ಇನಾಂದಾರ್, ಶಾಂತಾದೇವಿ ಹಿರೇಮಠ, ಅನೂಸೂಯಾ ಜಾಗೀರದಾರ, ಶೀಲಾ ಹಾಲ್ಕುರಿಕೆ, ಅರುಣಾ ನರೇಂದ್ರ, ವಿಜಯಲಕ್ಷ್ಮೀ ಕೊಟಗಿ, ಮಾಲಾ ಬಡಿಗೇರ, ಪುಷ್ಪಲತಾ ಏಳುಬಾವಿ,ಗಾಯತ್ರಿ ಭಾವಿಕಟ್ಟಿ, ಡಾ.ಸುಮತಿ ಹಿರೇಮಠ,ಲಲಿತಾ ಭಾವಿಕಟ್ಟಿ,ಮಹಾಲಕ್ಷ್ಮೀ ಬಾಂಧವಿ ವಿಸ್ತಾರ್ ಸೇರಿದಂತೆ ಜಿಲ್ಲೆಯ ಕವಿಗಳು ಭಾಗವಹಿಸಲಿದ್ದಾರೆ. ಕಾರ‍್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಕನ್ನಡನ ನೆಟ್ ಡಾಟ್ ಕಾಂ ಕವಿಸಮೂಹದ  ಸಿರಾಜ್ ಬಿಸರಳ್ಳಿ, ಮಹೇಶ ಬಳ್ಳಾರಿ ಕೋರಿದ್ದಾರೆ. ವಿವರಗಳಿಗೆ ಸಂಪರ್ಕಿಸಿ : ೯೮೮೦೨೫೭೪೮೮,೯೦೦೮೯೯೬೬೨೪,



Advertisement

0 comments:

Post a Comment

 
Top