PLEASE LOGIN TO KANNADANET.COM FOR REGULAR NEWS-UPDATES

 ಹೊಸಪೇಟೆ: ನಗರದಲ್ಲಿ ಶುಕ್ರವಾರ ಪರಸ್ಪರ ಬಣ್ಣ ಎರುಚುತ್ತಾ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.ಶಾಸಕ ಆನಂದ್ ಸಿಂಗ್ ಈ ಭಾರಿಯ ಹೋಳಿ ಹಬ್ಬದ ಮುಂದಾಳತ್ವ ವಹಿಸಿದ್ದರು. 
ನಗರದ ರಸ್ತೆಗಳೆಲ್ಲಾ ಬಣ್ಣಮಯವಾಗಿದ್ದವು. ಯುವಕರು ಗುಂಪು ಗುಂಪಾಗಿ ಬಣ್ಣ ಎರುಚುತ್ತಾ ಸಂಭ್ರಮಿಸಿದರು. ಹಂಪಿಯಲ್ಲಿ ಸಹ ಬಣ್ಣದಾಟ ಜೋರಾಗಿಯೇ ಇತ್ತು. ವಿದೇಶಿಯರು ಕೂಡಾ ಬಣ್ಣ ಎರುಚುತ್ತಾ ಬಣ್ಣದೋಕಳಿಯಲ್ಲಿ ಮಿಂದು ಸಂಭ್ರಮಿಸಿದರು.
ಶಾಸಕ ಆನಂದ್ ಸಿಂಗ್ ನೇತೃತ್ವದಲ್ಲಿ ನೂರಾರು ಯುವಕರು ಗುಂಪು ಗುಂಪಾಗಿ ಮೆರವಣಿಗೆ ನಡೆಸುತ್ತಾ ಬಣ್ಣ ಎರುಚುತ್ತಾ ಕಾಲೇಜ್ ರಸ್ತೆಯ ಮೂಲಕ ತಾಲೂಕು ಕ್ರೀಡಾಂಗಣದಲ್ಲಿ ನೆರೆದರು. ಈ ಮೆರವಣಿಗೆಯಲ್ಲಿ ವಾದ್ಯಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ತಾಷಾ ಕುಣಿತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ರಾಣಿಪೇಟೆಯ ಶಾಸಕರ ಮನೆಯಿಂದ ಆರಂಭವಾದ ಮೆರವಣಿಗೆಯು ತಾಲೂಕು ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು. ಶಾಸಕ ಆನಂದ್ ಸಿಂಗ್ ಮೆರವಣಿಗೆಯಲ್ಲಿ ಭಾಗವಹಿಸಿ ಬಣ್ಣದಾಟ ನಡೆಸಿದ್ದು ವಿಶೇಷವಾಗಿತ್ತು. ಹಂಪಿಯಲ್ಲಿ ಶುಕ್ರವಾರ ಹೋಳಿಹಬ್ಬದಂಗವಾಗಿ ವಿದೇಶಿ ಜೋಡಿಯೊಂದು ಪರಸ್ಪರ ರಂಗು ಬಳಿದುಕೊಂಡಿದ್ದು ಹೀಗೆ.
ಹೊಸಪೇಟೆ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಶಾಸಕ ಆನಂದ್ ಸಿಂಗ್ ನೇತೃತ್ವದಲ್ಲಿ ಯುವಕರು ಹೋಳಿ ಹಬ್ಬದ ರಂಗಿನಾಟ ನಡೆಸಿದ್ದು ಹೀಗೆ.



Advertisement

0 comments:

Post a Comment

 
Top