ಕೊಪ್ಪಳ ಮಾ,೧೯ : ಇದೇ ತಿಂಗಳು ರಾಜ್ಯ ಸರ್ಕಾರ ಜಾತಿಗಣತಿ ಕೈಗೊಳ್ಳುತ್ತೀದ್ದು ನಮ್ಮ ಗೊಲ್ಲ ಸಮುದಾಯದವರು ಗೊಲ್ಲ ಎಂದು ನಮೂದಿಸಬೇಕು ಎಂದು ಹೈದ್ರಾಬಾದ್-ಕರ್ನಾಟಕ ಗೊಲ್ಲ ಸಮುದಾಯದ ಒಕ್ಕೂಟದ ಮುಖಂಡ ಕುರಗೋಡ ರವಿ ಸಮುದಾಯದ ಬಾಂಧವರಲ್ಲಿ ಮನವಿ ಮಾಡಿದರು.
ಅವರು ಬೀದರ್ ಜಿಲ್ಲೆ ಹುಮನಾಬಾದ್‌ನಲ್ಲಿ ಬುಧುವಾರದಂದು ಹೈದ್ರಾಬಾದ್-ಕರ್ನಾಟಕ ಗೊಲ್ಲ ಸಮುದಾಯದ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಗೊಲ್ಲ ಸಮುದಾಯದ ಪ್ರತಿನಿಧಿಯಾಗಿ ಪಾಲ್ಗೋಂಡು ಮಾತನಾಡುತ್ತ ಇಂದು ನಮ್ಮ ಗೊಲ್ಲ ಸಮುದಾಯ ಶೈಕ್ಷಣಿಕವಾಗಿ,ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆಯಲು ನಮ್ಮ (ಯಾದವ)ಗೊಲ್ಲ ಸಮುದಾಯವನ್ನು ಬಲಿಷ್ಠಗೊಳಿಸಬೇಕಾಗಿದೆ, ರಾಜ್ಯ ಸರ್ಕಾರಕ್ಕೆ ನಮ್ಮ ಸಮಾಜ ಬಲಿಷ್ಠವಾಗಿದೆ ಎಂಬುದುದನ್ನು ಮನವರಿಕೆ ಮಾಡಬೇಕಾಗಿದೆ ಹೀಗಾಗಿ ಈ ಜಾತಿಗಣತಿಯಲ್ಲಿ ಸಮಾಜ ಬಾಂಧವರು(ಯಾದವ), ಗೊಲ್ಲ ಎಂದು ನಮೂದಿಸುವಂತೆ ಮನವಿ ಮಾಡಿ, ರಾಜ್ಯ ಸರ್ಕಾರವು ತೀರ ಹಿಂದುಳಿದ ಗೊಲ್ಲ ಸಮುದಾಯವನ್ನು ಪರಿಶಿಷ್ಠ ಪಂಗಡದಲ್ಲಿ ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೈ.ಕ ಗೊಲ್ಲ ಸಮುದಾಯದ ಒಕ್ಕೂಟದ ಸಂಚಾಲಕ ಪಿ.ಗಾದೆಪ್ಪ, ಬೀದರ್ ಜಿಲ್ಲೆ ಗೊಲ್ಲ ಸಮುದಾಯದ ಅಧ್ಯಕ್ಷ ಕೆ.ಜಗನ್ನಾಥ,ಹುಮನಾಬಾದ್ ಪುರಸಭೆ ಅಧ್ಯಕ್ಷ ವಿನಾಯಕ ಯಾದವ್, ನ್ಯಾಯವಾದಿ ವೆಂಕಟೇಶ, ಯುವ ಮುಖಂಡ ಕೆ.ರಾಮಕೃಷ್ಣ ಸಮುದಾಯದ ಮುಖಂಡರು, ಗುರು-ಹಿರಿಯರು ಉಪಸ್ಥಿತರಿದ್ದರು.

0 comments:
Post a Comment