PLEASE LOGIN TO KANNADANET.COM FOR REGULAR NEWS-UPDATES


: ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿ ಮಾ.೦೮ ರ ಸಂಜೆ ೫ ಗಂಟೆಗೆ ತಾಲೂಕಿನ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗಿರಿಜನ ಉತ್ಸವ-೨೦೧೫ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಣ್ಣ ನೀರಾವರಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ್, ಅಮರನಾಥ ಪಾಟೀಲ್, ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ವಿ.ಮಾಲಿಪಾಟೀಲ್, ಉಪಾಧ್ಯಕ್ಷ ಮುದ್ದವ್ವ ಆರ್.ಕರಡಿ, ಜಿಲ್ಲಾ ಪಂಚಾಯತ್ ಸದಸ್ಯೆ ವನಿತಾ ಗಡಾದ್, ತಾಲೂಕಾ ಪಂಚಾಯತ್ ಸದಸ್ಯ ದಾನಪ್ಪ. ಜಿ. ಕವಲೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೂರಸಾಬ್ ಭೈರಾಪುರ, ಉಪಾಧ್ಯಕ್ಷೆ ಹುಲಿಗೆಮ್ಮ ನಾಯಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಬಣ್ಣ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬಳಿಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳ್ಳಾರಿಯ ಮೋಹನ ಮತ್ತು   ತಂಡದವರಿಂದ ತಾಷಾ ರಂಡೋಲ್ ಹಾಗೂ ಕಂಪ್ಲಿಯ ಜಾನಕಿ ಮತ್ತು ತಂಡದವರಿಂದ ಹಕ್ಕಿ-ಪಿಕ್ಕಿ ನೃತ್ಯ ಪ್ರದರ್ಶನ ನಡೆಯಲಿದ್ದು, ತರ‍್ಲಕಟ್ಟಿಯ ಶ್ರೀಕಾಂತಗೌಡ ಮಾಲಿಪಾಟೀಲ್‌ಯಿಂದ ಗೀಗೀಪದಗಳು, ಭಾಗ್ಯನಗರದ ನಾಗರಾಜ ಶ್ಯಾವಿಯಿಂದ ಕೊಳಲು ವಾದನ, ಕೊಪ್ಪಳ ರಿದಂ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಪ್ರದರ್ಶನ, ಕುಷ್ಟಗಿಯ ಗ್ಯಾನಪ್ಪ ತಳವಾರ ಅವರಿಂದ ಜಾನಪದ ಗೀತೆಗಳು, ಕುಷ್ಟಗಿಯ ಬಸಪ್ಪ ಚೌಡ್ಕಿ ಅವರಿಂದ ಚೌಡ್ಕಿ ಪದಗಳು ಯಲಬುರ್ಗಾದ ಮಾನಪ್ಪ ವಜ್ರಬಂಡಿ ಅವರಿಂದ ರಂಗಗೀತೆಗಳು ಹಾಗೂ ರಂಜಿತ ಲಕಮಾಪುರ ಅವರಿಂದ ಭರತನಾಟ್ಯ ಪ್ರದರ್ಶನಗಳು ನಡೆಯಲಿವೆ.
ಅಲ್ಲದೇ, ನಾಗರಾಳದ ಬಸವರಾಜ ಗಂಗನಾಳ ಅವರಿಂದ ಬಯಲಾಟ ಪದಗಳು, ಯರೇಹಂಚಿನಾಳದ ಹನುಮಂತ ನರೇಗಲ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ, ಕೊಡತಗೇರಿಯ ಭೀಮಪ್ಪ ಪೂಜಾರ ಅವರಿಂಧ ತತ್ವಪದಗಳ, ಬಸವರಾಜ ಬಿನ್ನಾಳ ಅವರಿಂದ ವಚನಗಾಯನ, ಗಂಗಾವತಿಯ ಸುಜಾತ ಅವರಿಂದ ಸುಗಮ ಸಂಗೀತ ಹಾಗೂ ಗೋಪಾಲ ಕಾವಲಿ ಅವರಿಂದ ಭಜನೆ ಪದಗಳ ಗಾಯನ ಕಾರ್ಯಕ್ರಮಗಳು ಜರುಗಲಿವೆ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

0 comments:

Post a Comment

 
Top