PLEASE LOGIN TO KANNADANET.COM FOR REGULAR NEWS-UPDATES

 ಹೊಸಪೇಟೆ- ನಗರದ ತಾಲೂಕು ಬೇಡ ಜಂಗಮ ಸಂಘವು ತತ್ವನಿಧಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಹಮ್ಮಿಕೊಂಡಿದೆ.
ಇದೇ ದಿ. ೮ರ ಭಾನುವಾರದಂದು  ರಾಣಿಪೇಟೆಯ ಬಯಲಾಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಾಶಿನಾಥಯ್ಯ ವಹಿಸುವರು, ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ.ಮಹಿಳಾ ಮೋರ್ಚಾದ ಅಧ್ಯಕ್ಷೆ ರಾಣಿ ಸಂಯುಕ್ತ ವಹಿಸುವರು, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು,  ಉತ್ತಂಗಿಯ ಮಹಾಲ್ ಮಠದ ಶ್ರೀ.ಮ.ನಿ.ಪ್ರ. ಶಂಕರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಉಪನ್ಯಾಸಕಿ ಅಕ್ಕ ಮಹಾದೇವಿಯವರಿಂದ ವಿಶೇಷ ಉಪನ್ಯಾಸ  ಏರ್ಪಡಿಸಲಾಗಿದೆ.
ಈ ವಿಶೇಷ ಸಂದರ್ಭದಲ್ಲಿ ಬೇಡ ಜಂಗಮ ಮಹಿಳಾ ಘಟಕದ ವತಿಯಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಜಂಗಮ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ  ಘಟಕದ ಅಧ್ಯಕ್ಷೆ ಟಿ.ಹೆಚ್.ಎಂ.ಶೀಲಾ ಕುಮಾರಸ್ವಾಮಿ ಕೋರಿದ್ದಾರೆ.

Advertisement

0 comments:

Post a Comment

 
Top