PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಆತ್ಮ ಬಲದಿಂದ ಸಾಧಿಸುವ ಛಲ ಹೆಚ್ಚುತ್ತದೆ ಎಂದು ಸಾಹಿತಿ ಡಾ.ವಸಂತ ಕುಷ್ಟಗಿ ಹೇಳಿದರು.ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತ,ಪ್ರತಿಯೊಬ್ಬ ಪ್ರಜೆಯಲ್ಲಿ ಸಾಧಿಸಬೇಕು ಎಂಬ ಛಲವಿರುತ್ತದೆ.ಆ ಛಲಕ್ಕೆ ಆತ್ಮ ಬಲವನ್ನು ತುಂಬಿದಾಗ ಸಾಧಿಸುವ ಛಲ ಇನ್ನೂ ಹೆಚ್ಚುತ್ತದೆ.ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.ಅಂಗವಿಕಲರು ಅಂಗವಿಕಲತೆಯ ಬಗ್ಗೆ ಹೆಚ್ಚು ಗಮನ ಹರಿಸದೆ ಸಾಧಿಸುವ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು.ಅಂಗವಿಕಲರಾಗಿದ್ದುಕೊಂಡು ಸಾಮಾನ್ಯ ವ್ಯಕ್ತಿಗಳಿಗಿಂತ ಹೆಚ್ಚು ಸಾಧನೆಯನ್ನು ಮಾಡಿ ತೊರಿಸಿದವರು ಸಮಾಜದಲ್ಲಿ ಅನೇಕರಿದ್ದಾರೆ.ಅಂಗವಿಕಲರಲ್ಲಿ ಅನೇಕ ವಿಭಿನ್ನ ರೀತಿಯ ಪ್ರತಿಭೆಗಳಿದ್ದು ಅಂತಹ ಪ್ರತಿಭೆಗಳು ಹೊರಬರಬೇಕಾದರೆ ವೇದಿಕೆಗಳ ಅವಶ್ಯವಿದೆ.ಸಮಾಜದಲ್ಲಿ ಅಂಗವಿಕಲರ ಬಗ್ಗೆ ಅನುಕಂಪವನ್ನು ಪಡದೇ ಅವರಿಗೆ ಅವಕಾಶವನ್ನು ನೀಡಬೇಕು.ಅಲ್ಲದೆ ಅಂಗವಿಕಲರಾಗಿದ್ದು ಅನೇಕ ಸಾಧನೆಯನ್ನು ಮಾಡಿದವರನ್ನು ಗುರುತಿಸಿ ಗೌರವಿಸುವ ಕೆಲಸವು ಸರ್ಕಾರ ಹಾಗೂ ಸಮಾಜದ ವತಿಯಿಂದ ಜರುಗಬೇಕು.ಪುಟ್ಟರಾಜ ಗವಾಯಿಗಳು ಅಂಗವಿಕಲರಿಗೆ ಹಾಗೂ ಸಾಮಾನ್ಯ ವ್ಯಕ್ತಿಗಳಿಗೆ ಆಶಾ ಕಿರಣವಾಗಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ಡಾ.ಹನುಮಾಕ್ಷಿ ಗೊಗಿ ಮಾತನಾಡಿ,ಅಂಗವಿಕಲರು ಅಂಗವಿಕಲತೆಯನ್ನು ಶಾಪವಾಗಿ ಪರಿಗಣಿಸದೆ ವರವಾಗಿ ಸ್ವೀಕರಿಸಬೇಕು.ಅಂಗವಿಕಲರಲ್ಲಿ ಏಕಾಗ್ರತೆಯ ಶಕ್ತಿಯು ಜಾಸ್ತಿ ಇರುತ್ತದೆ.ಏನಾದರೂ ಸಾಧಿಸಬೇಕು ಎಂಬ ಹಂಬಲವಿರುತ್ತದೆ.ಪುಟ್ಟರಾಜ ಗವಾಯಿಗಳು ಕೇವಲ ಸಂಗೀತ ಕ್ಷೇತ್ರಕ್ಕೆ ಮಾತ್ರ ಕೊಡುಗೆಯನ್ನು ನೀಡದೆ ಸಾಹಿತ್ಯ ಕ್ಷೇತ್ರಕ್ಕೂ ಕೂಡಾ ಅಪಾರ ಕೊಡುಗೆಯನ್ನು ನೀಡಿದ್ದಾರೆ.ಸುಮಾರು ೮೦ಕೃತಿಗಳನ್ನು ರಚಿಸಿದ್ದಾರೆ.ಮೂರು ಭಾಷೆಗಳ ಬಗ್ಗೆ ತಿಳಿದಿದ್ದರು.ವ್ಯಕ್ತಿ ಬಾಳಿ-ಬದುಕಿದರೆ ಸಾಲದು,ಬದುಕಿರುವಾಗ ಸಮಾಜಕ್ಕೆ ಏನನ್ನು ಕೊಡುಗೆಯಾಗಿ ನೀಡಿದ್ದಿನಿ ಎಂಬುದು ಅರಿಯಬೇಕು.ಪುಟ್ಟರಾಜ ಗವಾಯಿಗಳು ವಿರೇಶ್ವರ ಆಶ್ರಮವನ್ನು ಸ್ಥಾಪಿಸುವುದರ ಮೂಲಕ ಅನೇಕರು ವಿದ್ಯಾಬ್ಯಾಸ ಮಾಡಲು ಅನೂಕೂಲ ಮಾಡಿಕೊಟ್ಟಿದ್ದಾರೆ.ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.ಆದರೆ ಅಂಗವಿಕಲರ ಸಮುದಾಯಕ್ಕೆ ಗೌರವ ಕೊಡುವುದಾದರೆ ಅವರಿಗೆ ಮರಣೋತರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಹೇಳಿದರು.
   ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ  ಚಿಲವಾಡಗಿ ಮಾತಡುತ್ತ,ಅಂಧರ ಬಾಳಿನ ಆಶಾಕಿರಣವಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಒತ್ತಾಯಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ವಹಿಸಿದ್ದರು.ಕಾರ್ಯಕ್ರಮದಲ್ಲಿ  ಪ್ರಭಾರಿ ಸಮನ್ವಯಾಧಿಕಾರಿಗಳಾದ ಎಂ.ಎಚ್.ಕುರಿ,ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಶಾಸಕರ ಮಾದರಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಗುರುರಾಜ ಕುಲಕರ್ಣಿ,ಸಂಗಿತ ಶಿಕ್ಷಕರಾದ ಯಮನೂರಪ್ಪ ಭಜಂತ್ರಿ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು.ಶಿಕ್ಷಕರಾದ ಶ್ರೀನಿವಾಸರಾವ್ ಕುಲಕರ್ಣಿ ಸ್ವಾಗತಿಸಿ,ನಾಗಪ್ಪ ನರಿ ವಂದಿಸಿದರು.

Advertisement

0 comments:

Post a Comment

 
Top