ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಐ.ಕ್ಯೂ.ಎ.ಸಿ ಅಡಿಯಲ್ಲಿ ಇಲ್ಲಿನ ಸಭಾ ಭವನದಲ್ಲಿ ಮದ್ಯಾಹ್ನ ೧ ಗಂಟೆಗೆ ವಾಣಿಜ್ಯ ವಿಭಾಗದಿಂದ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಬ್ಯಾಂಕಿಂಗ್ ಎಂಬ ವಿಷಯದಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಮರಿಯಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರ್ರಾಧ್ಯಾಪಕಿ ಶ್ರೀಮತಿ ಎಲ್. ಮಂಜುಭಾರ್ಗವಿ ಮಾತನಾಡಿ ಪ್ರಚಲಿತ ದಿನಗಳಲ್ಲಿ ಆನ್ ಲೈನ್ ಬ್ಯಾಂಕಿಂಗ್ ಪದ್ದತಿ ತುಂಬಾ ಮಹತ್ವ ಪಡೆದುಕೊಂಡಿದೆ. ವ್ಯವಹಾರಸ್ಥರಿಗೆ ಆರ್.ಟಿ.ಜಿ.ಎಸ್ ಮತ್ತು ಇ.ಎಫ್.ಟಿ ತಂತ್ರಾಂಶವು ತುಂಬಾ ಉಪಯುಕ್ತವಾಗಿದೆ. ಮತ್ತು ಎಲ್ಲರು ಮನೆಯಲ್ಲಿ ಕುಳಿತು ಕೊಂಡೇ ಆನ್ ಲೈನ್ ಇರುವ ಕಂಪ್ಯೂಟರ‍್ಸಗಳ ಮೂಲಕ ಬ್ಯಾಂಕುಗಳೊಂದಿಗೆ ವ್ಯವಹಾರ ಮಾಡಬಹುದು. ಇದರಿಂದ ಸಮಯದ ಉಳಿತಾಯವು ಆಗಿ ಮನುಷ್ಯನ ಒತ್ತಡವು ಸಹ ಕಡಿಮೆಯಾಗತ್ತದೆ. ಪ್ರಸ್ತೂತ ದಿನಮಾಮಗಳಲ್ಲಿ ವಿದ್ಯಾರ್ಥಿಗಳಿಗೆ ಇದರ ಮಾಹಿತಿ ಅತ್ಯವಶ್ಯಕವಾಗಿದೆಯೆಂದರು. ವೇದಿಕೆಯಲ್ಲಿ ದಾರುಕಸ್ವಾಮಿ. ಮಹೇಶ ಮಮದಾಪುರ ಉಪಸ್ಥಿತರಿದ್ದರು. ಸ್ವಾಗತ ಪ್ರಾಧ್ಯಾಪಕ ನಟರಾಜ ಪಾಟೀಲ. ಪ್ರಾಸ್ತಾವಿಕ ಪ್ರಾಧ್ಯಾಪಕ ತಿಮ್ಮಾರೆಡ್ಡಿ ಮೇಟಿ, ವಂದನಾರ್ಪಣೆ ಶೋಭಾರಾವ್ ನಿರ್ವಹಿಸಿದರು. ಅಪಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 comments:
Post a Comment