ಕೊಪ್ಪಳ, ಫೆ. ೧೬. ನಗರದ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ನಡೆಯುವ ೬೬ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮ ಫೆ. ೧೮ ಬುಧವಾರ ಸಂಜೆ ೬.೩೦ ಗಂಟೆಗೆ ಶ್ರೀಮಠದ ಕೆರೆಯ ದಡದಲ್ಲಿ ನಡೆಯಲಿದೆ.
ಶಿವರಾತ್ರಿ ಅಮವಾಸ್ಯೆಯ ಬೆಳಕಿನೆಡೆಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲಕೋಟಿಯ ಪ. ಪೂ. ಕಾಲೇಜಿನ ಉಪನ್ಯಾಸಕರು, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ|| ಅರ್ಜುನ ಗೊಳಸಂಗಿ ವಹಿಸಿಕೊಳ್ಳುವರು, ಸಿಂಧನೂರ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಗೋವಿಂದರಾಜ ಬಾರಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೋರನಾಳ ಗ್ರಾಮದ ಕೇಶಪ್ಪ ಶಿಳ್ಳಿಕ್ಯಾತರ ತೊಗಲು ಗೊಂಬೆ ಆಟ ಪ್ರದರ್ಶನ ಮಾಡುವರು, ನರೇಂದ್ರ ಗುಡದೂರರನ್ನು ಇದೇ ವೇಳೆ ಸನ್ಮಾನಿಸಲಾಗುದು. ಈ ಬಾರಿಯ ಬೆಳಕಿನೆಡೆಗೆ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಕೊಪ್ಪಳ ನಗರದ ವಿಶ್ವ ಆಫ್‌ಸೆಟ್ ಪ್ರಿಂಟರ‍್ಸ ಮತ್ತು ಐಶ್ವರ್ಯ ಪ್ರಿಂಟಿಂಗ್ ಪ್ರೆಸ್‌ನ ಗೊಂಡಬಾಳ ಕುಟುಂಬದವರು ಮಾಡುತ್ತಿದ್ದಾರೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದು ಶ್ರೀಮಠ ತಿಳಿಸಿದೆ.
0 comments:
Post a Comment