ಕೊಪ್ಪಳ : ಕೊಪ್ಪಳ ನಗರದ ಮುಸ್ಲಿಂ ಶಾದಿಮಹಲ್ ಕಾರ‍್ಯಕಾರಿಣಿ ಮಂಡಳಿ ರಚಿಸುವದಕ್ಕಾಗಿ ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆ ಈ ಹಿಂದೆ ರದ್ದಾಗಿತ್ತು. ರದ್ದತಿ ಆದೇಶ ಪ್ರಶ್ನಿಸಿ ಸೈಯದ್ ಅಬ್ದುಲ್ ಲತೀಪ್ ಹುಸೇನಿ ಹಾಗೂ ಪೀರಸಾಬ ಬೆಳಗಟ್ಟಿಯವರು ಧಾರವಾಡದ ಉಚ್ಛನ್ಯಾಯಾಲಯ ಪೀಠದಲ್ಲಿ ರಿಟ್ ಸಲ್ಲಿಸಿದ್ದರು. ಒಂದೇ ವಿಷಯದ ಕುರಿತ ೨ ರಿಟ್ ಅರ್ಜಿಗಳನ್ನು ಒಟ್ಟುಗೂಡಿಸಿ ನ್ಯಾಯಾಲಯರು ಎರಡೂ ರಿಟ್ ಅರ್ಜಿಗಳ ವಾದಿ ಮತ್ತು ಪ್ರತಿವಾದಿಗಳ ವಾದ ಆಲಿಸಿ ೧೯-೨-೨೦೧೫ರಂದು ಅಂತಿಮ ಆಜ್ಞೆ ಪ್ರಕಟಿಸಿದೆ. ಅದರನ್ವಯ ಕಾನೂನು ಬದ್ದವಾಗಿ ಚುನಾವಣೆ ಪ್ರಕ್ರಿಯೆ ನಡೆಯಲಿ ಎಂದು ಸೈಯದ್ ಯಾಕೂಬ್ ಹುಸೇನಿ, ಅದೀಲ್ ಪಟೇಲ್, ಇಸ್ಮಾಯಿಲ್ ಗೇಟಿನ್ ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಉಚ್ಛನ್ಯಾಯಾಲಯವು ೧೯-೨-೨೦೧೫ರಂದು ಆದೇಶ ನೀಡಿದ್ದು ದಿ. ೨೮-೨-೨೦೧೫ರೊಳಗೆ ಹೊಸ ಚುನಾವಣಾಧಿಕಾರಿಯನ್ನು ನೇಮಿಸಬೇಕು ಮತ್ತು ೩೦-೪-೨೦೧೫ರೊಳಗೆ ಚುನಾವಣೆ ಪ್ರಕ್ರಿಯೆ ಸಂಪೂರ್ಣಗೊಳಿಸಬೇಕು ಎಂದು ಆದೇಶ ನೀಡಿದೆ. ಅದರನ್ವಯ ಕಾನೂನುಬದ್ದವಾಗಿ ಚುನಾವಣೆ ನಡೆಯಲಿ ಅದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಹೇಳಿದರು. ಹಿಂದಿನ ಚುನಾವಣಾಧಿಕಾರಿ ತಮ್ಮ ವೈಯುಕ್ತಿಕ ಕೆಲಸದ ಒತ್ತಡದಿಂದ ರಾಜೀನಾಮೆ ನೀಡಿರಬಹುದು, ಈಗ ಶಾದಿಮಹಲ್‌ನ ಸದಸ್ಯರ ಸಂಖ್ಯೆ ೧೩೯೮ ಇದ್ದು ಹೊಸದಾಗಿ ಸದಸ್ಯರನ್ನು ಸೇರಿಸುವುದು ಬಿಡುವುದು ಹೊಸ ಚುನಾವಣಾಧಿಕಾರಿಯ ವಿವೇಚನೆ ಬಿಟ್ಟ ವಿಷಯ ಎಂದರು. ಈ ಸಂದರ್ಭದಲ್ಲಿ ಅಯೂಬ್ ಅಡ್ಡೇವಾಲೆ, ರೆಹಮಾನ್ ಮಣ್ಣೂರ, ಎಂ.ಡಿ.ಅಬೂಬಕರ್ ಉಪಸ್ಥಿತರಿದ್ದರು.
0 comments:
Post a Comment