PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ: ಕಂದಾಯ ಅದಾಲತ್ ಕಾರ್ಯಕ್ರಮದಿಂದ ರೈತರ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯಲಿದೆ ಎಂದು ತಹಸೀಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ ಹೇಳಿದರು. 
ತಾಲೂಕಿನ ಯರೇಹಂಚಿನಾಳ ಗ್ರಾಪಂ ಆವರಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಪಹಣಿಯಲ್ಲಿನ ಲೋಪದೋಷ, ಪೋತಿ ವಿರಾಸತ್, ಸೇರಿದಂತೆ ಇನ್ನಿತರ ರೈತರ ಜಮೀನಿನ ಸಮಸ್ಯೆಗಳಿಗೆ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಿದಲ್ಲಿ, ಶೀಘ್ರದಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದರು.ಇಲಾಖೆಯ ಸಿಬ್ಬಂದಿ ಶಿವಶರಣಪ್ಪ ಮಾತನಾಡಿ, ಪಹಣಿಯಲ್ಲಿನ ೧೯ಕಲಂ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಸರ್ವೆ ಅಧಿಕಾರಿ ವೀರಣ್ಣ ತಳುವಗೇರಿ ಮಾತನಾಡಿದರು. 
ಉಪ-ತಹಸೀಲ್ದಾರ ರವಿಕುಮಾರ್ ವಸ್ತ್ರದ, ಕಂದಾಯ ನಿರೀಕ್ಷಕ ಬಿ.ಎನ್.ನಾಗಲಿಂಗಪ್ಪ, ಗ್ರಾಮ ಲೆಕ್ಕಾಧಿಕಾರಿ ಬಿ.ಸುರೇಶ, ಗ್ರಾಪಂ ಸದಸ್ಯರಾದ ಹನುಮಂತಪ್ಪ ಬಾವಿಹುಡೇದ, ಬಸವರಾಜ ಪುಣೇದ, ಬೀಬಿಜಾನ್ ರ‍್ಯಾವಣಕಿ, ಎಂ.ಈರವ್ವ, ಬಸವರಾಜ ಬನ್ನಿಕೊಪ್ಪ, ಸೇರಿ ಇತರರಿದ್ದರು. ಇದೇ ಸಂದರ್ಭದಲ್ಲಿ ಹತ್ತಾರು ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.


Advertisement

0 comments:

Post a Comment

 
Top