PLEASE LOGIN TO KANNADANET.COM FOR REGULAR NEWS-UPDATES



ಕನಕಗಿರಿ ಉತ್ಸವ ಆಚರಣೆ ಸಂಬಂಧ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಕನಕಗಿರಿ ಉತ್ಸವದ ಅಧಿಕೃತ ಲೋಗೋವನ್ನು ಕನಕಗಿರಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.
  ಈ ಬಾರಿಯ ಕನಕಗಿರಿ ಉತ್ಸವ ಫೆ. ೨೩ ಮತ್ತು ೨೪ ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಕನಕಗಿರಿ ಉತ್ಸವ-೨೦೧೫ ರ ಲೋಗೋ, ಕನಕಾಚಲಪತಿ ದೇವಸ್ಥಾನ, ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಮೂರ್ತಿಯನ್ನೊಳಗೊಂಡಂತೆ ಅತ್ಯಂತ ಆಕರ್ಷಕವಾಗಿದೆ.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಸದಸ್ಯ ವೀರೇಶ್ ಸಮಗಂಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‌ಪಿ ವಿನ್ಸಂಟ್ ಶಾಂತಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಊರಿನ ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top