ದಿನಾಂಕ ೨೩ ಫೆಬ್ರುವರಿ ೨೦೧೫ ರಂದು ನೆರವೇರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೆಂಕನಗೌಡ ಹಿರೇಗೌಡ್ರು,ನಿರ್ದೇಶಕರು ಕೆ.ಎಂ.ಎಫ್.ಹಾಲಿನ ಒಕ್ಕೋಟ ಬಳ್ಳಾರಿ ಮತ್ತು ರಾಯಚೂರ, ಮಾತನಾಡುತ್ತಾ ಮಕ್ಕಳು ನಾಡಿನ ಸಂಪತ್ತು,ಮಕ್ಕಳ ಮನಸ್ಸು ಮೃದು ಸ್ವಾಭಾವದ್ದು ಅದಕ್ಕೆ ಅನುಗುಣವಾಗಿ ಸಿಬ್ಬಂದಿಯವರ ಶ್ರಮ ಅಪಾರ,ಡಾ||.ಎ.ಪಿ.ಜೆ.ಅಬ್ದುಲ್ ಕಲಾಮ ನಮ್ಮ ರಾಷ್ಟ್ರದ ರಾಷ್ಟ್ರಪತಿಯರು ವಿಖ್ಯಾತ ವಿಜ್ಙಾನಿಗಳು ಅಂತಹ ಮಹಾನ್ ವ್ಯಕ್ತಿಯ ಆರ್ದಶ ಪಾಲಿಸಿದ್ದಲ್ಲಿ ಈ ಕಲಮ್ ಶಾಲೆಯಲ್ಲಿ ಪ್ರತಿ ಮಗೂ ಡಾ||.ಕಲಾಮರಂತೆ ಸೃಷ್ಠಿಯಾಗುವಂತೆ ಈ ಶಾಲೆ ಶ್ರಮಿಸಿ ಪ್ರಸಿದ್ಧ ವಿಜ್ಙಾನಿಗಳನ್ನು ಸೃಷ್ಠಿಸಲಿ ಎಂದು .ವೆಂಕಣಗೌಡ ಹಿರೇಗೌಡ್ರು ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಹಾರೈಸಿದರು.
ಕೊಪ್ಪಳ : ಕಲಮ್ ಪಬ್ಲಿಕ್ ಸ್ಕೂಲಿನ ೧೪ನೇ ಶಾಲಾ ವಾಷಿಕೋತ್ಸವದ ಸಮಾರಂಭ
ಮತ್ತೋರ್ವ ಅತಿಥಿಯಾದ .ಕೆ.ರಾಘವೇಂದ್ರಾಚಾರ್ ಮಾತುನಾಡುತ್ತಾ ಶಾಲಾ ವಾರ್ಷಿಕ ವರದಿಯಿಂದ ತಿಳಿದು ಬರುವುದದೇನಂದರೆ ಶಾಲೆಯು ಮಕ್ಕಳು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ. ಪತ್ರಕರ್ತರಾದ ಜಿ.ಎಸ್.ಗೋನಾಳ ಮಾತುನಾಡುತ್ತಾ ಈ ಶಾಲೆ ಪ್ರಾರಂಭದ ದಿನದಲ್ಲಿ ಕೆಲವೇ ಕೆಲ ಮಕ್ಕಳನ್ನು ಹೊಂದಿದ್ದು ಇಂದು ಹೆಮ್ಮರವಾಗಿ ಬೆಳದು ನಿಂತಿದ್ದು ಶ್ಲಾಘಿನೀಯ ಕೆಲಸ ಇದರಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರಶ್ರಮ ಮೆಚ್ಚುವಂತಹದ್ದು ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಅಲೀಮುದ್ದೀನ್,ಹಾಗೂ ಅತಿಥಿಗಳಾದ ಫೇತ್ ಫೇಲ್ಲೊಶಿಪ್ ಚರ್ಚಿನ ಫಾದರ್ ಅಬ್ರಾಹಮ್ ಹಾಗೂ ಶ್ರೀ.ರಮೇಶ ಚೌಡಕಿ ತಾಲೂಕ ಪಂಚಾಯತ್ ಸದ್ಯಸರು,ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಆದಿಲ್ ಪಟೇಲ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಶೈಲಾಜಾ ಹಿರೇಮಠ ಕಾರ್ಯಕ್ರಮವನ್ನು ನಿರೋಪಿಸಿದರು ಮತ್ತು ಶ್ರೀ.ರೆಂಬೋಮೊ ವಂದಿಸಿದರು.
0 comments:
Post a Comment