ಹೊಸದಿಲ್ಲಿ, ಫೆ. : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಪೂರ್ಣಾವಧಿ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಬಜೆಟ್‌ನ ಮುಖ್ಯಾಂಶಗಳು:
*ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಮೊದಲ ಆದ್ಯತೆ
*ದೇಶದ ಅಭಿವೃದ್ಧಿ ದರ ಶೇ.7.4ರಷ್ಟು ಏರಿಕೆಯ ಗುರಿ
*ಹಗರಣ, ಜಂಗಲ್ ರಾಜ್ ಸಂಸ್ಕೃತಿ ಅಂತ್ಯಕ್ಕೆ ಪಣ
*ಹಣದುಬ್ಬರ ತಡೆಯುವಲ್ಲಿ ಸರಕಾರ ಸಫಲವಾಗಿದೆ - 9 ತಿಂಗಳಲ್ಲಿ ಭಾರತ ಹಲವು ಮಹತ್ತರ ಹೆಜ್ಜೆ
*ಸಬ್ಸಿಡಿ ತಲುಪಬೇಕಾದರೆ ಜಾಮ್ ಅವಶ್ಯಕವಾಗಿದೆ: ಜಾಮ್ ಅಂದರೆ: ಜನಧನ್, ಮೊಬೈಲ್, ಆಧಾರ
*24 ಗಂಟೆ ವಿದ್ಯುತ್, ನೀರು ಪೂರೈಕೆಗೆ ಕ್ರಮ
*ಬಡತನ ನಿರ್ಮೂಲನೆಯೇ ನಮ್ಮ ಸರಕಾರದ ಎಲ್ಲ ಯೋಜನೆಗಳ ಗುರಿ
*ದೇಶದ ಜನರ ವಿಶ್ವಾಸಕ್ಕೆ ತಕ್ಕಂತೆ ನಮ್ಮ ಸರಕಾರ ಕಾರ್ಯ ನಿರ್ವಹಿಸಲಿದೆ
*ರಾಜ್ಯಗಳಿಗೆ ಮೊದಲಿಗಿಂತ ಹೆಚ್ಚಿನ ಅಧಿಕಾರ ನೀಡಲಾಗಿದೆ - ಹಾಗೆಯೇ ದೇಶದ ಆರ್ಥಿಕ ಅಭಿವೃದ್ಧಿಗೆ ರಾಜ್ಯಗಳ ಕೊಡಗೆ ಅವಶ್ಯ
*ಎಲ್ಲ ಗ್ರಾಮಗಳಲ್ಲಿ ಶಾಲೆಗಳ ನಿರ್ಮಾಣ ನಮ್ಮ ಧ್ಯೇಯ
*1 ಲಕ್ಷ ಕಿ.ಮೀ. ರಸ್ತೆಗಳ ನಿರ್ಮಾಣಕ್ಕೆ ಕ್ರಮ
*ಪ್ರತಿ 5 ಕಿ.ಮೀ.ಗೆ ಶಾಲೆಗಳ ನಿರ್ಮಾಣ - 75 ಸಾವಿರ ಪ್ರಾಥಮಿಕ ಶಾಲೆಗಳ ನಿರ್ಮಾಣ - ಪ್ರೌಢಶಾಲೆಗಳ ಸಂಖ್ಯೆ ಹೆಚ್ಚಳ
*20 ಸಾವಿರ ಗ್ರಾಮಗಳಿಗೆ ಸೌರ ವಿದ್ಯುತ್ ವ್ಯವಸ್ಥೆ
*ದೇಶಾದ್ಯಂತ 6 ಕೋಟಿ ಟಾಯ್ಲೆಟ್ ನಿರ್ಮಾಣದ ಗುರಿ
*ಹಣದುಬ್ಬರವನ್ನು ಶೇ.6ಕ್ಕಿಂತ ಕಡಿಮೆ ಮಾಡುವ ಗುರಿ
*ಈ ವರ್ಷ ಆರ್'ಬಿಐ ನೀತಿ ಬದಲಾಯಿಸಲಿದ್ದೇವೆ
*ದೇಶದ ಮುಂದೆ 4 ಪ್ರಮುಖ ಸವಾಲುಗಳಿವೆ - ಕೃಷಿ, ಶಿಕ್ಷಣ, ಆರೋಗ್ಯ, ನರೇಗಾಗೆ ಆದ್ಯತೆ
*ಕನಿಷ್ಠ 2 ಕೋಟಿ ಗೃಹಗಳ ನಿರ್ಮಾಣಕ್ಕೆ ಕ್ರಮ
*ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾಗೆ ಆದ್ಯತೆ
*‘ಪ್ರತಿ ಹನಿಗೂ ಹೆಚ್ಚು ಬೆಳೆ’ ಯೋಜನೆ ಜಾರಿ
*ನಬಾರ್ಡ್ ಕೃಷಿ ನಿಧಿಗೆ 25 ಸಾವಿರ ಕೋಟಿ ರೂ. ಹಂಚಿಕೆ
*ಸಣ್ಣ ನೀರಾವರಿಗೆ 5,300 ಕೋಟಿ ರೂ. ಮೀಸಲು
*ಸ್ವಚ್ಛ ಭಾರತ ಯೋಜನೆಯಡಿ 6 ಕೋಟಿ ಟಾಯ್ಲೆಟ್ ನಿರ್ಮಾಣ
*ಮುದ್ರಾ ಬ್ಯಾಂಕ್ ಮೂಲಕ ಎಸ್ಸಿ, ಎಸ್ಟಿ ಸಮುದಾಯಕ್ಕೆ ಆರ್ಥಿಕ ನೆರವು - ಪರಿಶಿಷ್ಟ ಜಾತಿ-ಪಂಗಡಗಳಿಗೆ 20 ಸಾವಿರ ಕೋಟಿ ರೂ.
*ಗುಡಿ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ರೂ.
*ಗ್ರಾಮೀಣಾಭಿವೃದ್ಧಿ ನಿಧಿಗೆ 25 ಸಾವಿರ ಕೋಟಿ ರೂ.
*ಜನಧನ ಯೋಜನೆ ನಿರ್ವಹಣೆಗೆ ಅಂಚೆ ಇಲಾಖೆ ನೆರವು
*ಜನಧನ ಯೋಜನೆಗೆ ಅಪಘಾತ ವಿಮೆಯಾಗಿ 2 ಲಕ್ಷ ರೂ.
*ಪ್ರಧಾನ ಮಂತ್ರಿ ವಿಮಾ ಸುರಕ್ಷಾ ಯೋಜನೆ ಜಾರಿ: ನೂತನ ವಿಮಾ ಯೋಜನೆಗೆ 330 ಕೋಟಿ ರೂ. - ವರ್ಷಕ್ಕೆ 12 ರೂ. ಕಟ್ಟಿದರೆ 2 ಲಕ್ಷ ವರೆಗೆ ವಿಮೆ
*ಬಡ ವೃದ್ಧರಿಗೆ ಅಟಲ್ ನಿವೃತ್ತಿ ವೇತನ ಯೋಜನೆ - ಹಿರಿಯ ನಾಗರಿಕರಿಗಾಗಿ ಕಲ್ಯಾಣ ನಿಧಿ ಸ್ಥಾಪನೆ
*ಏಡ್ಸ್ ಪೀಡಿತರಿಗೆ ಹೊಸ ಯೋಜನೆ ಜಾರಿ
*ಅಲ್ಪಸಂಖ್ಯಾತರಿಗೆ ನಯೀ ಮಂಝಿಲ್ ಯೋಜನೆ ಜಾರಿ
*ಮೂಲಸೌಕರ್ಯ ಕ್ಷೇತ್ರದ ಹೂಡಿಕೆಗೆ ತೆರಿಗೆ ವಿನಾಯಿತಿ
*ಬಡವರು ವರ್ಷಕ್ಕೆ 12 ರೂಪಾಯಿ ಕಟ್ಟಿದರೆ 2 ಲಕ್ಷ ಅಪಘಾತ ಪರಿಹಾರ ವಿಮೆ
*ಎಪ್ರಿಲ್ 1, 2016ಕ್ಕೆ ನೇರ ನಗದು ವ್ಯವಸ್ಥೆ (ಜಿಎಸ್‌ಟಿ) ಅನುಷ್ಠಾನ
*5 ವಿದ್ಯುತ್ ಉತ್ಪಾದನಾ ಘಟಕಗಳಿಗೆ ಪ್ರಸ್ತಾಪ - ಪ್ರತಿ ಘಟಕದಿಂದ 4 ಸಾವಿರ ಮೆಗಾವ್ಯಾಟ್ ಉತ್ಪಾದನೆಗೆ ಕ್ರಮ
*ಪಿಪಿಪಿ ಮಾದರಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ
*ಕ್ಲೇಮ್ ಮಾಡದ ನಿವೃತ್ತಿ ವೇತನದ ಹಣದ ಮೂಲಕ ನಾಗರಿಕರ ಕಲ್ಯಾಣ ನಿಧಿ
*ಏಕೀಕೃತ ಶಿಶು ಕಲ್ಯಾಣ ಯೋಜನೆಗೆ 2,000 ಕೋಟಿ ರೂ.
*ಇ-ಬಿಜ್ ಪೋರ್ಟಲ್ ಆರಂಭಿಸಲು ನಿರ್ಧಾರ
*ನೇರ ತೆರಿಗೆ ಪದ್ಧತಿ ಘೋಷಣೆ
*ಸ್ಟಾರ್ಟಪ್ ಕಂಪನಿಗಳಿಗೆ ಉತ್ತೇಜನ
*ಮಕ್ಕಳ ಸುರಕ್ಷತೆಗೆ 1,500 ಕೋಟಿ ರೂ.ಮೀಸಲು
*ಚಿನ್ನದ ನಗದಿಕರಣಕ್ಕಾಗಿ ಹೊಸ ಯೋಜನೆ: ದೇಶದಲ್ಲಿ 20 ಸಾವಿರ ಟನ್ ತಟಸ್ಥವಾಗಿ ಉಳಿದಿದೆ - ಚಿನ್ನದ ಬಾಂಡ್ ಯೋಜನೆ ಜಾರಿ: ಅಶೋಕ ಚಕ್ರವುಳ್ಳ ಚಿನ್ನದ ನಾಣ್ಯ ಬಿಡುಗಡೆ
*ರುಪೆ ಕಾರ್ಡ್ ಮೂಲಕ ಹಣದ ವರ್ಗಾವಣೆಗೆ ಕ್ರಮ
*ಶಿಕ್ಷಣ ಸಾಲದ ನಿರ್ವಹಣೆಗೆ ಐಟಿ ತಜ್ಞರ ನೇಮಕ
*ಬೆಂಗಳೂರಿನ ಐಟಿ ಸಂಶೋಧನಾ ಘಟಕ ಸ್ಥಾಪನೆ
*"ಸೆಟು' ಹೆಸರಿನಲ್ಲಿ ಐ.ಟಿ. ವಲಯಕ್ಕೆ ನೂತನ ಯೋಜನೆ
*ಕಾರ್ಪೊರೇಟ್ ತೆರಿಗೆ ಶೇ.30ರಿಂದ ಶೇ.25ಕ್ಕೆ ಇಳಿಕೆ
*ಮೋದಿ ಆರೋಗ್ಯ ಯೋಜನೆ ಜಾರಿ
*ಬಡವರ ಅಭ್ಯುದಯಕ್ಕೆ ಇಪಿಎಫ್‌ನ 6 ಸಾವಿರ ಕೋಟಿ ರೂ. ಬಳಕೆ
*150 ದೇಶಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯ ವಿಸ್ತರಣೆ
*ವಾಣಿಜ್ಯ ವ್ಯಾಜ್ಯಗಳಿಗೆ ವಿಶೇಷ ನ್ಯಾಯಾಲಯ ಸ್ಥಾಪನೆ
*ರಕ್ಷಣಾ ಇಲಾಖೆಗೆ 2,46,727 ಕೋಟಿ ರೂ.
*5 ರಾಜ್ಯಗಳಲ್ಲಿ ಏಮ್ಸ್ ಸ್ಥಾಪನೆ ಘೋಷಣೆ - ಆಂಧ್ರ, ಪಂಜಾಬ್, ಹಿಮಾಚಲ ಪ್ರದೇಶ, ಅಸ್ಸಾಂ, ಜಮ್ಮವಿನಲ್ಲಿ ಏಮ್ಸ್
*ವಾರಣಾಸಿ, ಅಮೃತಸರ, ಹೈದ್ರಾಬಾದ್'ಗಳನ್ನ ವರ್ಲ್ಡ್ ಹೆರಿಟೇಜ್ ಮಾಡಲಾಗುವುದು - 25 ವರ್ಲ್ಡ್ ಹೆರಿಟೇಜ್ ಸೆಂಟರ್ - ಹಂಪಿಗೂ ವರ್ಲ್ಡ್ ಹೆರಿಟೇಜ್ ಸೆಂಟರ್ನಲ್ಲಿ ಸ್ಥಾನ
*ಕಪ್ಪು ಹಣ ನಿರ್ಮೂಲನೆಗೆ ಕಠಿಣ ಕ್ರಮ.
0 comments:
Post a Comment