PLEASE LOGIN TO KANNADANET.COM FOR REGULAR NEWS-UPDATES


ನಾವು ಕೇವಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಮಕ್ಕಳಿಗೆ ಸೇರಿಸುತ್ತಿದ್ದೆವೆ. ಅಲ್ಲಿ ಅವರು ಕೇವಲ ಹೆಚ್ಚಿನ ಅಂಕ ಪಡೆಯುತ್ತಾರೆ ಇಂಗ್ಲೀಷನಲ್ಲಿ ಮಾತಾಡುತ್ತಾರೇ. ಹೊರತು ಮೌಲ್ಯಧಾರಿತ ಮತ್ತು ಜೀವನ ಕೌಶಲ್ಯಕ್ಕೆ ಬೇಕಾಗುವ ಅಂಶ ಅವರು ಕಲಿತಾ ಇಲ್ಲ. ಇಂದು ನಮಗೆ ಮೌಲ್ಯಧಾರಿತ ಶಿಕ್ಷಣ ಬೇಕು ಆವಾಗ ನಮ್ಮ ದೇಶ ಅಭಿವೃದ್ದಿಯಾಗಲು ಸಾಧ್ಯಾ. ಎಂದು ಅಲ್ಲಾನಗರದ ಸಹ ಶಿಕ್ಷಕರಾದ ದೇವರಡ್ಡಿ ಡಂಬ್ರಳ್ಳಿ ಇವರು ಯುವಜನರನ್ನು ಉದ್ದೇಶಿಸಿ ಮಾತನಾಡಿದರು.
      ಇವರು ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ ವಂದೇಮಾತರಂ ಯುವ ಸೇವಾ ಸಂಘ (ರಿ) ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ೧೫೨ ನೇ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಅಚಿವ್ ಸ್ಪೋಕನ್ ಇಂಗ್ಲೀಷ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲೆಯ ನಿರುದ್ಯೋಗಿ ಯುವ ಜನರಿಗಾಗಿ ಮೇಣಬತ್ತಿ ತಯಾರಿಕ ತರಬೇತಿಯನ್ನು ಉದ್ಘಾಟನೆಮಾಡಿ ಮಾತನಾಡುತ್ತಾ ವಿವೇಕಾನಂದರಂತೆ ಭಾರತವನ್ನು ವಿಶ್ವಕ್ಕೆ ಒಂದು ಮಾದರಿ ಮಾಡಿದಂತ ಮಹಾನುಭಾವರು ಬೇಕು.ವಿವೇಕಾನಂದರ ಕಾಲದಲ್ಲಿ ಇಂಥಹ ಆಧುನಿಕ ಸವಲತ್ತುಗಳಿಲ್ಲದೆ ಅವರು ವಿಶ್ವಕ್ಕೆ ದೇಶದ ಆದರ್ಶ, ತತ್ವಸಿದ್ದಾಂತ ಸಂಸ್ಕೃತಿ ಪರಿಚಹಿಸಿದ್ದಾರೆ. ಅವರ ಆದರ್ಶವನ್ನು ಇಂದಿನ ಆಧುನಿಕ ತಂತ್ರಜ್ಞಾನವನ್ನು ಇರುವಂತಹ ಯುಗದಲ್ಲಿ ನಾವು ಅವುಗಳನ್ನು ಕೇವಲ ಕೇಳುತ್ತೆವೆ, ಮಾತನಾಡುತ್ತೆವೆ ಆದರೆ ಅದನ್ನು ರೂಡಿಯಲ್ಲಿ ತರುತ್ತಿಲ್ಲ ಎಂದು ಯುವಜನರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಥಿತಿಗಳಾಗಿ ಆಗಮಿಸಿದ ಉಪನ್ಯಾಸಕರಾದ ಶಿವಪ್ರಸಾದ ಹಾದಿಮನಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ನಮ್ಮನು ನಾವು ಗೌರವಿಸೊಣ ಆಗ ನಮ್ಮನು ಬೇರೆಯವರು ಗೌರವಿಸುತ್ತಾರೆ ಜಗತ್ತಿನ ಬಹಳ ದೊಡ್ಡದಿದೆ ಅದನ್ನು ತಿಳಿಯಲು ಪ್ರಥಮವಾಗಿ ನಮ್ಮನ್ನು ನಾವು ಅರಿಯೋಣ ನಮ್ಮ ಹಿರಿಯರಿಂದ ಮಾರ್ಗದರ್ಶನ ಪಡೆಯಬೇಕು ನಮ್ಮ ಸಂಸ್ಕೃತಿಯನ್ನು, ನಮ್ಮ ಸುತ್ತಮುತ್ತಲಿನ ಸ್ಥಳ ಮತ್ತು ನಮ್ಮ ನಾಡು ದೇಶದ ಬಗ್ಗೆ ಅಧ್ಯಾಯನ ಮಾಡಬೇಕು ಆಗ ನಮ್ಮ ನಾಡು ದೇಶದ ಬಗ್ಗೆ ಅಭಿಮಾನ ಹುಟ್ಟುತ್ತದೆ ಅದನ್ನು ಬಿಟ್ಟು ನಾವು ಮೋಬೈಲ್ ನಲ್ಲಿ ಅನವಶ್ಯಕ ಸಮಯ ವ್ಯರ್ಥ ಮಾಡುತ್ತಿದ್ದೆವೆ ಇದರ ಬದಲು ನಾವು ಅದರಿಂದ ಜ್ಞಾನವೃದ್ದಿಯಾಗಲು ಅವಶ್ಯವಿರುದನ್ನು ಮಾತ್ರ ಉಪಯೋಗ ಮಾಡಿಕೋಳ್ಳಬೇಕು ಎಂದರು. 
     ಉಚಿತವಾಗಿ ಮೇಣಬತ್ತಿ ತಯಾರಿಕ ತರಬೇತಿಯನ್ನು ತರಬೇತಿದಾರರಾದ ರಾಮಸ್ವರೂಪ ಕಾಂಬ್ಳೇಕರ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೇಯನ್ನು ವಂದೇಮಾತರಂ ಯುವ ಸೇವಾ ಸಂಘದ ಅಧ್ಯಕ್ಷರಾದ ರಾಕೇಶ ಕಾಂಬ್ಳೇಕರ ವಹಿಸಿದ್ದರು. ಕಾರ್ಯಕ್ರಮದ ನಿರುಪಣೆಯನ್ನು ವಿರೇಶ ಹಾಲಗುಂಡಿ. ಸ್ವಾಗತ ಮತ್ತು ವಂದನಾರ್ಪಣೇಯನ್ನು ಗವಿಸಿದ್ದಮ್ಮ ಹಿರೇಮಠ ಮಾಡಿದರು. ಎಂದು ಪತ್ರಿಕಾ ಪ್ರಕಟಣೆ ನಿಡಿದಾರೆ. 

Advertisement

0 comments:

Post a Comment

 
Top