PLEASE LOGIN TO KANNADANET.COM FOR REGULAR NEWS-UPDATES

   




ಕೊಪ್ಪಳ:  ಐತಿಹಾಸಿಕ ಪ್ರಸಿದ್ದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿ ಕೊಂಡಿರುವ ರಕ್ತದಾನ ಶಿಬಿರದಲ್ಲಿ ೪೦೬ ರಕ್ತದಾನ ಮಾಡಿ ಇತಿಹಾಸ ನಿರ್ಮಿಸಿದರು.
ಶಿಬಿರವನ್ನು  ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ   ನೀಡಿದರು. ಸಂಸ್ಥಾನ ಶ್ರೀ ಗವಿಮಠ ಹಾಗೂ ಭಾರತಿಯ ರೆಡ್ ಕ್ರಾಪ್ ಸಂಸ್ಥೆಯ ಸಂಯುಕ್ತಾಶ್ರಯzಲ್ಲಿ  ಗುರುವಾರ ೮ ರಿಂದ ಸೋಮವಾರ   ೧೨ರ ವರೆಗೆ ಐದು ದಿನಗಳ ಕಾಲ  ಜರುಗಲಿದೆ.

ರಕ್ತದಾನಕ್ಕೆ ನೂಕುನುಗ್ಗಲೂ ಜಾತ್ರಯ ಅಂಗವಾಗಿ ಹಂಮ್ಮಿಕೊಂಡಿದ್ದ ಈ ರಕ್ತ  ಶಿಬಿರದಲ್ಲಿ ರಕ್ತದಾನ ಮಾಡಲು ಭಕ್ತರು ಸಾಲುಗಟ್ಟಿ ನಿಂತಿದ್ದು ಬೆಳಿಗ್ಗೆ ಕೆಲಕಾಲ ನೂಕುನು ಗ್ಗಲಾಯಿತು.ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಜ್ಞೆಯಂತೆ ಯುವ ಭಕ್ತರು ರಕ್ತದಾನ ಮಾಡಲು ಉತ್ಸುಕತೆಯಿಂದ ನಿಂತಿದ್ದು ಬೆಳಿಗ್ಗೆ ೯ ರಿಂದ ಪ್ರಾರಂಭಗೊಂಡ ರಕ್ತದಾನ ಶಿಬಿರಕ್ಕೆ ಜನರ ಸ್ಪದನೆ ನಿರೀಕ್ಷೆ ಮೀರಿ ವ್ಯಕ್ತವಾಗಿದೆ. 
  ಜಿಲ್ಲೆಯಲ್ಲಿ ಜರುಗಿದ ರಕ್ತದಾನದಲ್ಲಿ ಒಂದೆದಿನ ೪೦೬ ಜನರಕ್ತದಾನಮಾಡಿರುವದು ಇದೆ ಮೊದಲಾಗಿದ್ದು ಜಿಲ್ಲೆಯಲ್ಲಿ ಇಂದಿನ ಶಿಬಿರದಲ್ಲಿ ಅತಿಹೆಚ್ಚು ರಕ್ತದಾನ ಮಾಡಿದ ಕೀತ್ರಿಗೆ ಪಾತ್ರವಾಗಿದೆ.         
    ಈ ಸಂದರ್ಭದಲ್ಲಿ ಭಾರತಿಯ ರೆಡ್ ಕ್ರಾಪ್ ಸಂಸ್ಥೆ ಚೆರಮನ್ ಡಾ|| ಕೆ.ಜಿ.ಕುಲಕರ್ಣಿ  ಕಾರ್ಯದರ್ಶಿ ಡಾ||ಶ್ರೀನಿವಾಸ ಹ್ಯಾಟಿ.ನಿರ್ದೇಶಕರಾದ ಡಾ||ಸಿ.ಎಸ್.ಕರಮುಡಿ, ಡಾ||ಸಜ್ಜನ್,ಡಾ||ಗವಿ ಪಾಟೀಲ್ ಸುಂದರ್ ಅವರಾದಿ. ಸೋಮರೆಡ್ಡಿ ಅಳವಂಡಿ. ಸಂತೋಷ ದೇಶಪಾಂಡೆ. ಗೌರಮ್ಮ ದೇಸಾಯಿ ರಾಜೇಶ ಯುವಗಲಿ.ಸಂಘಟಕರಾದ ಮಂಜುನಾಥ ಅಂಗಡಿ, ರಮೇಶ ತುಪ್ಪದ, ಮಲ್ಲಿಕಾರ್ಜುನ  ಹ್ಯಾಟಿ ಇತರರು  ಉಪಿಸ್ಥಿತರಿದ್ದರು...
ರಕ್ತದಾನ ಶಿಬಿರ ಜಾತ್ರೆಯಲ್ಲಿ ಸೋಮವರ ೧೨ರ ವರೆಗೆ ಪ್ರತಿದಿನ ಬೆಳಿಗ್ಗೆ ೯ ರಿಂದ ಮದ್ಯಾಹ್ನ ೪ರವರೆಗೆ ಜರುಗಲಿದ್ದು ಆಸಕ್ತರು ಭಾಗವಹಿಸಿ ರಕ್ತದಾನ ಮಾಡುವಂತೆ ಡಾ,ಕೆ.ಜಿ.ಕುಲಕರ್ಣಿ ತಿಳಿಸಿದ್ದಾರೆ.



ಕೊಪ್ಪಳ: ಕೊಪ್ಪಳ ಗವಿಮಠದ ಜಾತ್ರೆಯಲ್ಲಿ  ಕೊಪ್ಪಳ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಜರುಗಿತು. ಜಾತ್ರೆಗೆ ಬಂದ ಅಸಂಖ್ಯಾತ ಭಕ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಿದರು. ಯುವಕರು, ಹೆಣ್ಣುಮಕ್ಕಳು, ಪೋಲಿಸರು, ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಜಾತ್ರೆಗೆ ಬಂದ ವ್ಯಾಪಾರಸ್ಥರು ಹೀಗೆ ಅಸಂಖ್ಯಾತ ಭಕ್ತರು ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಜೀವದಾನ ಮಾಡುವಲ್ಲಿ ಮಾನವೀಯತೆ ಮೆರೆದರು. ಯುವಕರು ದಂಡು ಸಾಲು ಸಾಲಾಗಿ ನಿಂತುಕೊಂಡು ರಕ್ತದಾನ ಮಾಡುವಲ್ಲಿ ಉತ್ಸಹಾಹ ತೋರಿಸುತ್ತಿದ್ದರು. ದಿನಾಂಕ ೮,ಜನೆವರಿ ಯಿಂದ ಜನವರಿ ೧೨ ನೇ ತಾರೀಖಿನವರೆಗೆ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ಗವಿಮಠ ಮಹಾದ್ವಾರದ ಎಡ ಭಾಗದಲ್ಲಿ  ಈ ರಕ್ತದಾನ ಶಿಬಿರ ಜರುಗಲಿದೆ. ಇಂದು ೪೦೬ ಜನರು ರಕ್ತದಾನ ಮಾಡಿ ಮಾನವಿಯತೆ ಮೆರೆದರು. 

Advertisement

0 comments:

Post a Comment

 
Top