ಕೊಪ್ಪಳ,ಜ,೦೬: ನಗರದ ಹೊರವಲಯ ಹೂವಿನಾಳ ರಸ್ತೆ ಗವಿಮಠದ ಹಿಂದುಗಡೆ ಇರುವ ಎಂ.ಎಸ್.ಕೆ ಗಾರ್ಮೆಂಟ್ಸ್ ಸ್ಥಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಏರ್ಪಡಿಸಿದ ಟೈಲರಿಂಗ್ ತರಬೇತಿ ಶಿಬಿರಕ್ಕೆ ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್, ಯುವ ನಾಯಕ ವೀರಣ್ಣ ಸಂಡೂರ್ ನೇತೃತ್ವದ ತಂಡ ಭೇಟಿಮಾಡಿ ೩ ತಿಂಗಳದ ಟೇಲರಿಂಗ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತ್ತಿರುವದು ಸಂತೋಷ ವ್ಯಕ್ತಪಡಿಸಿ ಹೊಲಿಗೆ ತರಬೇತಿ ಈ ಶಿಬಿರಕ್ಕೆ ಶ್ಲಾಘಿಸಿದರು.
ಮಹಿಳೆಯರು ಸ್ವಯಂ ಉದ್ಯೋಗ ಪ್ರಾರಂಭಿಸಿ ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಈ ತರಬೇತಿ ಶಿಬಿರ ಅತ್ಯಂತ ಸಹಕಾರಿಯಾಗಿದೆ ಇದರ ಸದುಪಯೋಗವನ್ನು ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಆರ್ಥಿಕಮಟ್ಟ ಸುಧಾರಣೆ ಜೊತೆಗೆ ಶೈಕ್ಷಣಿಕವಾಗಿ ಸುಧಾರಿಸಿಕೊಂಡರೆ ಆರ್ಥಿಕ, ಸಾಮಾಜಿ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮಹಿಳೆಯರು ಸಮರ್ಥರಾಗಿತ್ತಾರೆ ಎಂದು ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್ ಮತ್ತು ಯುವ ನಾಯಕ ವೀರಣ್ಣ ಸಂಡೂರ್ ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಮಹೇಶ್ ಭಜಂತ್ರಿ, ಮಲ್ಲು . ರಾಜಪ್ಪ, ಎಂ.ಡಿ.ಜಹೀರ್ ಅಲಿ ಅಲ್ಲದೆ ಎಂ.ಎಸ್.ಕೆ ಗಾರ್ಮೆಂಟ್ಸ್ ನ ಮಾಲಕರಾದ ಶಫೀಖ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
0 comments:
Post a Comment