PLEASE LOGIN TO KANNADANET.COM FOR REGULAR NEWS-UPDATES

 ೧೨ನೇ ಶತಮಾನದಲ್ಲಿ ಕಂಡುಬಂದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಕಂಡದ್ದನ್ನು ಕಂಡಂತೆ ದಿಟ್ಟತನದಿಂದ ನುಡಿದವರು ನಿಜಶರಣ ಅಂಬಿಗರ ಚೌಡಯ್ಯ ಎಂದು ಸಿ.ಪಿ.ಎಸ್.ಶಾಲೆಯ ಶಿಕ್ಷಕಿ ವಿಜಯಾ ಹಿರೇಮಠ ಹೇಳಿದರು.
  ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವದಲ್ಲಿ ಅವರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡುತ್ತ,೧೨ನೇ ಶತಮಾನ ಅನೇಕ ಮಹಾನ ಶರಣರು ಜನಿಸಿದ ಶತಮಾನವಾಗಿದ್ದು.ಅದನ್ನು ಸುರ್ವಣ ಯುಗದಲ್ಲಿ ಬರೆದಿಡುವ ಯುಗವಾಗಿದೆ.ಅಂದಿನ ಕಾಲದ ಸಮಾಜದಲ್ಲಿ ಜಾರಿಯಲ್ಲಿದ ಮೂಡನಂಬಿಕೆ,ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಿದ ಕ್ರಾಂತ್ರಿ ಪುರುಷ ಬಸವಣ್ಣನವರ ಶಿಷ್ಯನೇ ನಿಜ ಶರಣ ಅಂಬಿಗರ ಚೌಡಯ್ಯ.ಅಂಬಿಗರ ಚೌಡಯ್ಯ ಎಲ್ಲಾ ಶರಣರಂತೆ ಈತನು ಕೂಡಾ ದೋಣಿ ನಡೆಸುವ ಕಾಯಕ ಮಾಡುತ್ತಿದ್ದರು.ವಿಚಾರ ಪರವಾದ ವಾಸ್ತವ ವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು.ಆದರೆ ಸಮಜದಲ್ಲಿ ಕಂಡು ಬಂದ ಸಮಾಜಿಕ ಪಿಡುಗಗಳ ಬಗ್ಗೆ ಕಂಡದ್ದನ್ನು ಕಂಡಂತೆ ದಿಟ್ಟತನದಿಂದ ನುಡಿಯುವ ಸ್ವಭಾವದವರಾಗಿದ್ದರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ಮಹಾನ ನಾಯಕರ ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ವಿರುಪಾಕ್ಷಪ್ಪ ಬಾಗೋಡಿ,ಗುರುರಾಜ ಕಟ್ಟಿ,ಸುನಂದಾ,ಶಂಕ್ರಮ್ಮ ಬಂಗಾರಶೆಟ್ಟರ್,ಗೌಸೀಯಾಬೇಗಂ ಹಾಜರಿದ್ದರು.ಶಿಕ್ಷಕಿ ಭಾರತಿ ಕೊಡ್ಲಿ ಕಾರ್ಯಕ್ರಮವನ್ನು ನಿರೂಪಿಸಿದರು.ಶಿಕ್ಷಕಿಯರಾದ ಮೋಹಿನ್‌ಪಾಷಾಭಿ ಸ್ವಾಗತಿಸಿ,ವಿಜಯಲಕ್ಷ್ಮೀ.ಎಸ್. ವಂದಿಸಿದರು.

Advertisement

0 comments:

Post a Comment

 
Top