ಶ್ರೀ ಗವಿಸಿದ್ದೇಶ್ವರನ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಾರ್ಗ ಬದಲಾವಣೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜಾ ಅವರು ತಿಳಿಸಿದ್ದಾರೆ.
ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಇದಕ್ಕಾಗಿ 02 ಡಿಎಸ್‍ಪಿ, 15-ಪಿಐ, 41-ಪಿಎಸ್‍ಐ, 61-ಎಎಸ್‍ಐ, 189-ಹೆಚ್‍ಸಿ, 478- ಪಿಸಿ, 40 ಜನ ಡಬ್ಲ್ಯೂಹೆಚ್‍ಸಿ/ಡಬ್ಲ್ಯೂಪಿಸಿ, 400-ಹೋಂಗಾಡ್ರ್ಸ್, 04-ಕೆಎಸ್‍ಆರ್‍ಪಿ, 10-ಡಿಎಆರ್‍ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಅಪರಾಧ ನಿಯಂತ್ರಣ ಕರ್ತವ್ಯಕ್ಕಾಗಿ ಒಬ್ಬರು ಪಿಐ, ಪಿಎಸ್‍ಐ, ಎಎಸ್‍ಐ ಹಾಗೂ 25 ಜನ ಸಿಬ್ಬಂದಿಯವರನ್ನು ಪ್ರತ್ಯೇಕವಾಗಿ ನೇಮಿಸಲಾಗಿದೆ.
ಪಾರ್ಕಿಂಗ ವ್ಯವಸ್ಥೆ : ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಕುಷ್ಟಗಿ ಕಡೆಯಿಂದ ಬರುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಕುಷ್ಟಗಿ ರಸ್ತೆಯಲ್ಲಿರುವ ತಾಲೇಡಾ ಹೋಂಡಾ ಶೋ ರೂಂ ಎದುರು. ಹೊಸಪೇಟೆ, ಗಂಗಾವತಿ ಕಡೆಯಿಂದ (ಕೆಇಬಿ ಗ್ರೀಡ್ ಮಾರ್ಗವಾಗಿ) ಆಗಮಿಸುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಶ್ರೀ ಮಲಿಯಮ್ಮ ಗುಡಿಯ ಹಿಂದುಗಡೆ ಖಾಲಿ ಸ್ಥಳದಲ್ಲಿ. ಹೂವಿನಾಳ, ಹಾಲವರ್ತಿ, ಕುಣಿಕೇರಿ, ಬಹದ್ದೂರಬಂಡಿ, ಹ್ಯಾಟಿ ಮತ್ತು ಗಡಿಯಾರ ಕಂಬ ಕಡೆಯಿಂದ ಬರುವ ಮೋಟಾರ ಸೈಕಲ್, ಮೋಟಾರ ಸೈಕಲ್, ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ವಾಹನಗಳಿಗೆ ಪಾಂಡುರಂಗ ಗುಡಿಯ ಹಿಂದೆ ಮತ್ತು ಹೂವಿನಾಳ ರಸ್ತೆ ಗುಡ್ಡದ ಬದಿಗೆ ಖಾಲಿ ಸ್ಥಳದಲ್ಲಿ. ಬಸವೇಶ್ವರ ವೃತ್ತದ ಕಡೆಯಿಂದ ಬರುವ ವಿಐಪಿ ವಾಹನಗಳಿಗೆ ಗವಿಮಠ ರಸ್ತೆಯಲ್ಲಿ ಬಿಬಿಎಂ ಕಾಲೇಜ್ ಆವರಣದಲ್ಲಿ. ಹೊಸಪೇಟೆ, ಗಂಗಾವತಿ, ಕುಷ್ಟಗಿ, ಗದಗ ಕಡೆಯಿಂದ ಬರುವ ಎತ್ತಿನಬಂಡಿಗಳಿಗೆ ಗವಿಮಠ ರಸ್ತೆಯಲ್ಲಿ ಬಿಬಿಎಂ ಕಾಲೇಜ್ ಪಕ್ಕದಲ್ಲಿ ಅರಣ್ಯ ಇಲಾಖೆ ಖಾಲಿ ಸ್ಥಳದಲ್ಲಿ. ಬಸವೇಶ್ವರ ವೃತ್ತದ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಭಾರತ ಗ್ಯಾಸ್ ಕಚೇರಿ ಎದುರುಗಡೆ ಗವಿಮಠ ರಸ್ತೆ, ಗವಿಶ್ರೀ ನಗರ 3ನೇ ಕ್ರಾಸ್ ರಸ್ತೆ ಮಾರ್ಗ. ಹುಬ್ಬಳ್ಳಿ, ಗದಗ, ಯಲಬುರ್ಗಾ, ಕುಕನೂರು ಕಡೆಯಿಂದ ಬರುವ ಮೋಟಾರ ಸೈಕಲ್, ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಟ್ರ್ಯಾಕ್ಸ್, ಎತ್ತಿನಬಂಡಿ, ಆಟೋಗಳಿಗೆ ಎಪಿಎಂಸಿಯ 1, 2, 3, 4, 5ನೇ ಗೇಟ್ ಮುಖಾಂತರ ಎಪಿಎಂಸಿಯಲ್ಲಿ. ಹ್ಯಾಟಿ, ಹೂವಿನಾಳ, ಹಾಲವರ್ತಿ, ಗೊಂಡಬಾಳ, ಮುಂಡರಗಿ, ಕುಣಿಕೇರಿ ಕಡೆಯಿಂದ ಬರುವ ಮೋಟಾರ ಸೈಕಲ್, ಟಾಂ ಟಾಂ, ಟ್ರ್ಯಾಕ್ಟರ್, ಟ್ರ್ಯಾಕ್ಸ್, ಲಾರಿ, ಆಟೋಗಳಿಗೆ ಕುವೆಂಪು ನಗರ ಹತ್ತಿರದ ಪಾರ್ಕಿಂಗ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಭಾರಿ ವಾಹನಗಳ ಮಾರ್ಗ ಬದಲಾವಣೆ ವ್ಯವಸ್ಥೆ : ಜಾತ್ರೆಯ ಅಂಗವಾಗಿ ಜ.07 ರಂದು ಮ.4 ಗಂಟೆಯಿಂದ ರಾ.8.30 ಗಂಟೆಯವರೆಗೆ ಜಾತ್ರೆಗೆ ಬರುವ ವಾಹನ ಹೊರತುಪಡಿಸಿ ಬೇರೆಲ್ಲಾ ಭಾರಿ ವಾಹನಗಳನ್ನು ಗಿಣಿಗೇರಾ ಕ್ರಾಸ್‍ದಿಂದ ಕರ್ಕಿಹಳ್ಳಿ ಕ್ರಾಸ್, ಹಿರೇಬಗನಾಳ, ಹ್ಯಾಟಿ, ಚಿಕ್ಕಸಿಂದೋಗಿ ಮುಖಾಂತರ ಕೋಳೂರು ಕ್ರಾಸ್‍ವರೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಕೋಳೂರು ಕ್ರಾಸ್‍ವರೆಗೆ ಬಂದ ವಾಹನಗಳು ಅಲ್ಲಿಂದ ರಾ.ಹೆ-63 ಮುಖಾಂತರ ಕುಕನೂರು, ಗದಗ ಕಡೆಗೆ ಹೋಗಬಹುದಾಗಿದೆ.
ಜ.07 ರಂದು ಮ.4 ಗಂಟೆಯಿಂದ ರಾ.8.30 ಗಂಟೆಯವರೆಗೆ ಜಾತ್ರೆಗೆ ಬರುವ ವಾಹನ ಹೊರತುಪಡಿಸಿ ಬೇರೆಲ್ಲಾ ಭಾರಿ ವಾಹನಗಳನ್ನು ಕೋಳೂರು ಕ್ರಾಸ್‍ದಿಂದ ಚಿಕ್ಕಸಿಂದೋಗಿ, ಹ್ಯಾಟಿ, ಹಿರೇಬಗನಾಳ ಮುಖಾಂತರ ಗಿಣಗೇರಾ ಬೈಪಾಸ್ ಕ್ರಾಸ್ ಕಡೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಗಿಣಿಗೇರಾ ಬೈಪಾಸ್ ಕ್ರಾಸ್ ಕಡೆಗೆ ಬಂದ ವಾಹನಗಳು ಅಲ್ಲಿಂದ ಹೊಸಪೇಟೆ ಮತ್ತು ಗಂಗಾವತಿಯ ಕಡೆಗೆ ಹೋಗಬಹುದಾಗಿದೆ. ಜಾತ್ರೆಯ ಆಯಕಟ್ಟಿನ 4 ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಜ.07 ರಿಂದ 09 ರವರೆಗೆ ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಜನರು ಸೇರುವುದರಿಂದ ಜಾತ್ರೆಗೆ ಬರುವ ಮಹಿಳೆಯರು, ಬೆಲೆಬಾಳುವ ಆಭರಣಗಳನ್ನು ಹಾಕಿಕೊಂಡು ಬರಬಾರದು, ಆಭರಣಗಳನ್ನು ಎಲ್ಲರಿಗೂ ಎದ್ದು ಕಾಣುವಂತೆ ಪ್ರದರ್ಶಿಸಬಾರದು, ಜಾತ್ರೆಯಲ್ಲಿ ಹೆಚ್ಚಾಗಿ ಚಿಕ್ಕ ಮಕ್ಕಳು ಕಾಣೆಯಾಗುವುದರಿಂದ ಜಾತ್ರೆಗೆ ಬರುವಾಗ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕು. ಜಾತ್ರೆಗೆ ಬಂದಾಗ ನಿಮ್ಮ ಮೊಬೈಲ್, ಪರ್ಸ್, ವ್ಯಾನಿಟಿ ಬ್ಯಾಗ್ ಹಾಗೂ ಇನ್ನಿತರೆ ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Home
»
»Unlabelled
»
ಗವಿಸಿದ್ದೇಶ್ವರ ಜಾತ್ರೆ : ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಾರ್ಗ ಬದಲಾವಣೆ
Advertisement
Subscribe to:
Post Comments (Atom)
0 comments:
Post a Comment