PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ: ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ದಿನಾಂಕ ೦೩-೦೧-೨೦೧೫ ಸಾಯಂಕಾಲ ೫.೦೦ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಕರ್ತೃ ಗದ್ದುಗೆಯ ಮುಂಭಾಗದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವಂತೆ ಬಸವಪಟ ಆರೋಹಣ ಮಾಡುವ ಕಾರ್ಯಕ್ರಮ ಜರುಗುವದು ಮತ್ತು  ಇದಾದ ನಂತರ  ಗವಿಸಿದ್ಧೇಶ್ವರರ ಗದ್ದುಗೆಯ ಮೇಲೆ ಪಂಚ ಕಳಸಗಳನ್ನು ಸಹ ಇಡುವಂತಹ  ಕಾರ್ಯಕ್ರಮಗಳು ಜರುಗುತ್ತವೆ. ಈ ಮೂಲಕ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ಸಿಗುತ್ತದೆ. 


ಕೊಪ್ಪಳ: ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಮಹಾರಥೋತ್ಸವದ ದಾಸೋಹಕ್ಕೆ ಜಿಲ್ಲೆಯಾದ್ಯಂತ ಭಕ್ತರು ದವಸ ಧಾನ್ಯ, ರೊಟ್ಟಿ, ತರಕಾರಿಗಳನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಇಂದು ಕೂಡಾ ಚೆನ್ನಾಳ ಗ್ರಾಮದ ಭಕ್ತರಿಂದ ೫೦೧ , ಯಡ್ಡೋಣಿ ಗ್ರಾಮದ ಭಕ್ತರಿಂದ ೫೦೦೦, ಹಂಚಿನಾಳ ಗ್ರಾಮದ ಭಕ್ತರಿಂದ ೬೦೦೦,  ಮುಂಡರಗಿ ತಾಲ್ಲೂಕಿನ ಬರದೂರ ಗ್ರಾಮದ ಭಕ್ತರಿಂದ ೪೦೦೦, ಯಲಬುರ್ಗಾ ತಾಲ್ಲೂಕಿನ ಗುದ್ನೆಪ್ಪನಮಠದ ಭಕ್ತರಿಂದ ೫೦೦೧ ರೊಟ್ಟಿ ಹಾಗೂ ತರಕಾರಿ, ದವಸ-ಧಾನ್ಯಗಳು ಮಹಾದಾಸೋಹಕ್ಕೆ  ಅರ್ಪಿಸಿದರು. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಆಶಿರ್ವದಿಸಿದ್ದಾರೆ.

Advertisement

0 comments:

Post a Comment

 
Top