ಹಾಗೆಯೆ ಇನ್ನೋರ್ವ ಅತಿಥಿ ಡಾ. ಕೆ.ಜಿ ಕುಲಕರ್ಣಿ ಈ ದೇಶದಲ್ಲಿ ಯುವಕರು , ಡ್ರಗ್ಸ್, ಮಧ್ಯಪಾನ, ಗುಟುಕಾ, ತಂಬಾಕು ಧೂಮಪಾನಗಳಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ, ಆದ್ದರಿಂದ ವಿದ್ಯಾರ್ಥಿಗಳು ಇಂತಹ ದುಷ್ಟಚಟಗಳಿಂದ ದೂರ ವಿರಬೇಕು ಎಂದು ವಿದ್ಯಾರ್ಥಿಗಳಲ್ಲಿ ಕಾಳಜಿ ಮೂಡಿಸುವುದ ಮುಖಾಂತರ ಯುವಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಬಾಗಣ್ಣ ಎಸ್ ಹೊತಿನಮಡಿ ಪ್ರಸ್ತಾವಿಕವಾಗಿ ಮಾತನಾಡಿ ನಾನು ಒಬ್ಬ ವಿದ್ಯಾರ್ಥಿಯಾಗಿ ಈ ದೇಶದ ಪ್ರಜೆಯಾಗಿ ದೇಶದಲ್ಲಿ ಹೆಚ್ಚುತ್ತಿರುವ ದುಷ್ಟಚಟಗಳನ್ನು ಮಾಡುತ್ತಿದ್ದರೆ ಅಥವಾ ಮಾಡುವವರು ಕಂಡರೆ ಅದನ್ನು ತಡೆಯುವಲಿ ಶ್ರಮಿಸುತ್ತೇನೆ ಮತ್ತು ನನ್ನಿಂದ ಈ ದೇಶಕ್ಕೆ ಹಾಗೂ ನನ್ನ ಕುಟುಂಬಕ್ಕೆ ದಕ್ಕೆ ತರುವಂತಹ ಯಾವುದೇ ರೀತಿಯ ದಕ್ಕೆ ತರುವಂತ ಕೆಲಸಕ್ಕೆ ಕೈ ಹಾಕುವುದಿಲ್ಲ. ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತಿದ್ದೇನೆ ಎಂದು ಪ್ರತಿಜ್ಞಾವಿಧಿ ಭೋಧಿಸಿದರು. ಆನಂದ ಆಶ್ರೀತ್ ವಂಧಿಸಿದರು. ಪ್ರಶಾಂತ ಮತ್ತೂರು ನಿರೂಪಿಸಿದರು. ಮತ್ತು ಎಲ್ಲಾ ಪದಾಧಿಕಾರಿಗಳು, ಉಪನ್ಯಾಸಕರು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

0 comments:
Post a Comment