ಕೊಪ್ಪಳ: ಭಾಗ್ಯನಗರದ ಕೆ.ಎಚ.ಡಿ.ಸಿ. ನೇಕಾರ ಕಾಲೋನಿಯಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಲೈಯನ್ಸ ಕ್ಲಬ್ ಅಧ್ಯಕ್ಷ ಶ್ರೀನಿವಾಸಗುಪ್ತಾರವರು. ನಮ್ಮದೇಶದಲ್ಲಿ ದಿನಕ್ಕೆ ೮ ಲಕ್ಷಕ್ಕೂ ಅಧಿಕ ಜನ ಸಾಯುತ್ತಾರೆ ಆದರೆ ೬ ಲಕ್ಷ ಜನ ಕುರುಡರಿದ್ದಾರೆ ಹಾಗಾಗಿ ಎಲ್ಲರೂ ನೇತ್ರದಾನ ಮಾಡುವಂತಾದರೆ ಇಡೀ ದೇಶದಿಂದ ಕುರುಡುತನವನ್ನು ಸಂಪೂರ್ಣವಾಗಿ ಓಡಿಸಬಹುದು ಎಂದು ಹೇಳಿದರು.
ನೇಕಾರರಿಗೆ ಬೇಗನೆ ಕಣ್ಣಿನ ಸಮಸ್ಯೆ ಉಂಟಾಗುತ್ತದೆ. ಬಡವರಾದ ಅವರಿಗೆ ತೋರಿಸಿಕೊಳ್ಳಲು ಹಣವಿರುವುದಿಲ್ಲಾ ಇದನ್ನು ಗಮನಿಸಿ ನಾವು ಈ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸಿದ್ದೇವೆ. ಅಗತ್ಯವಾದರೆ ನೇಕಾರ ಗ್ರಾಮಗಳಾದ ದೋಟಿಹಾಳ, ಹನುಮಸಾಗರ, ಮತ್ತು ಕುಕನೂರು, ತಾವರಗೇರಿಗಳಲ್ಲಿಯೂ ಈ ರೀತಿ ಶಿಬಿರ ನಡೆಸಲು ಸಿದ್ದರಿದ್ದೇವೆ ಎಂದರು.
ನೇಕಾರ ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಕೀರ್ತಪ್ಪ ಗೋಟೂರು ಇಲಾಖೆಯಿಂದ ನೇಕಾರರಿಗೆ ನೀಡಲಾಗುವ ಯೋಜನೆ ಕುರಿತು ತಿಳಿಸಿದರು. ಸಭೆಯಲ್ಲಿ ಕೆ.ಎಚ್.ಡಿ.ಸಿ. ಯ ಯೋಜನಾಡಳಿತಾಧಿಕಾರಿ ಸೀತಾರಾಮಾಂಜನೇಯ ಮತ್ತು ಇನ್ನೊಬ್ಬ ನೇಕಾರ ಮುಖಂಢ ಬಸವಣ್ಣ ನರಗುಂದ ಲೈನ್ಸ ಸದಸ್ಯರಾದ ಪ್ರಭು ಹೆಬ್ಬಾಳ, ಲಯನ್ ಪರಮೇಶ್ವರಪ್ಪ ಕೊಪ್ಪಳ, ಪಿ.ಕೆ. ವಾರದ, ವಿ. ಶ್ಯಾನಬಾಗ, ಅರವಿಂದ ಅಗಡಿ, ಗುರುರಾಜ ಹಲಿಗೇರಿ, ಚಂದ್ರಕಾಂತ ತಾಲೆಡಾ, ವಿರೇಶ ಹಟ್ಟಿ. ಮುಂತಾದವರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ರಮೇಶ ಹ್ಯಾಟಿ ಕಾರ್ಯಕ್ರಮ ನಿರೂಪಿಸಿದರು ಕಣ್ಣಿನ ತಪಾಸಣೆಗೆ ಮೂರುನೂರಕ್ಕೂ ಹೆಚ್ಚು ನೇಕಾರರು ಹೆಸರು ನೊಂದಾಯಿಸಿದ್ದರು. ವೈದ್ಯರಾದ ಪ್ರಕಾಶ ತಪಾಸಣೆ ನಡೆಸಿದರು.
0 comments:
Post a Comment