PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ: ತಾಲೂಕಿನ ಹೊಸಬಂಡಿಹರ್ಲಾಪೂರ ಗ್ರಾಮದಲ್ಲಿ ಶ್ರೀ ಕನಕದಾಸ ಕ್ಷೇಮಾಬಿವೃದ್ದಿ ಸಂಘದಿಂದ ಶ್ರೀಕನಕದಾಸ ಭಾವಚಿತ್ರ ಹಳೆಬಂಡಿಹರ್ಲಾಪೂರ ಮತ್ತು ಹೊಸಬಂಡಿಹರ್ಲಾಪೂರ ಗ್ರಾಮದಲ್ಲಿ ಬೆಳಿಗ್ಗೆ ೯:೦೦ ಗಂಟೆಗೆ  ಶ್ರಿ ಶಿವಶಾಂತವೀರ ಮಹಸ್ವಾಮಿಗಳು ನಗರಗಡ್ಡಿ ಮಠ ಇವರ ಅಮೃತಅಸ್ತದಿಂದ ನಾಮಪಲಕವನ್ನು ಅನಾವರಣ ಮಾಡಿದರು ಇದಾದ ನಂತರ ಶ್ರೀಕನಕದಾಸರ ಭಾವಚಿತ್ರದೊಂದಿಗೆ ಗಂಗೆಪೂಜೆ ನಂತರ ಶ್ರೀಮಾರುತೇಶ್ವವರ ದೇವಸ್ಥಾನದಿಂದ ಪೂಜೆ ಮಾಡಿ ಸುಮಂಗಲಿಯರಿಂದ ಪೂರ್ಣಕುಂಭ, ಕಳಸ, ಡೊಳ್ಳುಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕದಾಸರ ವಿಜೃಂಬಣೆಯಿಂದ ಮೇರವಣಿಗೆ ಮಾಡಿದರು ಇದಾದ ನಂತರ ವೇದಿಕೆಯಲ್ಲಿ ಕನಕದಾಸರ ಜಯಂತಿ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
               ಈ ಕಾರ್ಯಕ್ರಮದಲ್ಲಿ ದೇವಣ್ಣ ಮೇಕಾಳಿ ತಾ.ಪಂ. ಮಾಜಿಅಧ್ಯಕ್ಷರು ಕುರುಬ ಸಮಾಜವು ಆರ್ಥಿಕವಾಗಿ ಹಿಂದುಳಿದಿದೆ ಜನಾಂಗದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸಿ ಡಾಕ್ಟರ್, ಇಂಜೀನಿಯರ್ ಆಗಬೇಕೆಂದು ಸಲಹೆ ಸೂಚನೆ ಕೊಟ್ಟರು ಮತ್ತು ಕನಕದಾಸರ ಬಗ್ಗೆ ಮಾತನಾಡಿದರು ಈ ವೇದಿಕೆ ಮೇಲೆ ಶ್ರೀಮತಿ ರತ್ನಮ್ಮ ಬ್ರಹ್ಮಯ್ಯ ಗ್ರಾ.ಪಂ.ಅಧ್ಯಕ್ಷರು, ಶಿವಪುತ್ರಪ್ಪ ಸಹಾಯ ವ್ಯವಸ್ಥಾಪಕರು ಭರುಕಾ ವಿದ್ಯುತ್ ನಿಗಮ ಶಿವಪುರ, ಕಾಸಯ್ಯಸ್ವಾಮಿ, ಪಕೀರಪ್ಪ, ತಿಪ್ಪಣ್ಣ, ಮಹಾಂತಪ್ಪ ಚೌಡಾಪೂರ ಶಿಕ್ಷಕರು, ಹನುಮಂತಪ್ಪ ಕಟ್ಟಿಗೆ, ಹನುಮಂತಪ್ಪ ಬೊಳುಗುರಿ ಸಮಾಜದ ಅಧ್ಯಕ್ಷರು ನಿರೂಪಣೆಯನ್ನು ದೇವರಾಜ ಗಡಾದ ಮತ್ತು ವಂದನಾರ್ಪಣೆಯನ್ನು ನಾಗರಾಜ ಗುಡ್ಲಾನೂರು ಇದಾದ ನಂತರ ಅನ್ನಸಂತರ್ಪಣೆ ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

0 comments:

Post a Comment

 
Top