ದಿನಾಂಕ: ೨೦/೧೧/೨೦೧೪ರಂದು ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಹಿಳಾ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹೇಂದ್ರ ಚೋಪ್ರಾ ನಗರಸಭಾ ಸದಸ್ಯರು ವಹಿಸಿಕೊಂಡಿದ್ದರು. ಉದ್ಘಾಟಕರಾಗಿ ಶ್ರೀಮತಿ ಲತಾ ವಿ ಸಂಡೂರು ಅಧ್ಯಕ್ಷರು ನಗರಸಭೆ ಕೊಪ್ಪಳ ಇವರು ವಹಿಸಿಕೊಂಡದ್ದರು. ಮುಖ್ಯತಿಥಿಗಳಾಗಿ ಎಂ.ಪಿ ಮಂಟೂರು ಶ್ರೀಮತಿ ಬಸಮ್ಮ, ವಿ, ಕಾತರಕಿ ಪ್ರಾಚಾರ್ಯರು ವಹಿಸಿಕೊಂಡಿದ್ದರು. ಅತಿಥಿಗಳಾಗಿ ಶ್ರೀಮತಿ ರೇಣುಕಾ ಪೂಜಾರ ನಗರಸಭಾ ಸದಸ್ಯರು ಕೊಪ್ಪಳ, ಶ್ರೀಮತಿ ಸರಿತಾ ಹೊಸಮನಿ ನಗರಸಭಾ ಸದಸ್ಯರು ಕೊಪ್ಪಳ ಹಾಗೂ ಶ್ರೀಮತಿ ಪಾರ್ವತಿ ಬಳ್ಳಾರಿ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಕಾಳಮ್ಮ ಪತ್ತಾರ ಹಿರಿಯ ನ್ಯಾಯವಾದಿಗಳು ಹಾಗೂ ಪೋಲಿಸ್ ಇಲಾಖೆಯ ಜಗದೀಶ ಹಿರೇಮಠ ಎಸ್‌ಪಿ ಆಫೀಸ್ ಕೊಪ್ಪಳ ಉಪಸ್ಥಿತರಿದ್ದರು. ನಂತರ ಕುಮಾರಿ ಶೋಭಿತಾ ಪ್ರಾರ್ಥನೆಯನ್ನು ಮಾಡಿದರು. ನಂತರ ವಜೀರಸಾಬ ತಳಕಲ್ಲ ಯೋಜನಾಧಿಕಾರಿಗಳು ನಗರಸಭೆ ಕೊ
ಪ್ಪಳ ಇವರು ಕಾರ್ಯಕ್ರಮದ ಸ್ವಾಗತ ಮತ್ತು ಪುಷ್ಪಾರ್ಪಣೆಯನ್ನು ನಡೆಸಿಕೊಟ್ಟರು. ಉದ್ಘಾಟನೆಯನ್ನು ಶ್ರೀಮತಿ ಲತಾ ವಿ ಸಂಡೂರು ನಗರಸಭೆ ಅಧ್ಯಕ್ಷರ ಮತ್ತು ಉಪಸ್ಥಿತರಿದ್ದ ಮುಖ್ಯ ಅತಿಥಿಗಳು ನಡೆಸಿಕೊಟ್ಟರು. ನಂತರ ಪ್ರಾಸ್ತಾವಿಕ ನುಡಿಯನ್ನು ಯೋಜನೆ ಕುರಿತು ವಜೀರಸಾಬ ತಳಕಲ್ಲ ಇವರು ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ೧೯ ನಗರಸಭೆ, ೫ ಮಹಾನಗರ ಪಾಲಿಕೆ, ೧ ಪುರಸಭೆ ಹೀಗೆ ಒಟ್ಟು ೨೫ ನಗರಗಳಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಗಳಿಂದ ನಗರ ಮೂಲ ಸೌಕರ್ಯ ಅಭಿವೃದ್ದಿ ಯೋಜನೆಯಡಿಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ ಪ್ರತಿಯೊಂದು ಮನೆಗೆ ನೀರು ಸರಬರಾಜು ಯೋಜನೆ ಹಾಗೂ ಕಡ್ಡಾಯ ಶೌಚಾಲಯ ಹೊಂದಬೇಕು ಮತ್ತು ಬಳಸಿದ ನೀರು ಮತ್ತು ಶೌಚಾಲಯದ ನೀರನ್ನು ಒಳಚರಂಡಿ ಸಂಪರ್ಕಕ್ಕೆ ಕಲ್ಪಿಸಿ ಪರಿಸರ ಸ್ವಚ್ಚತೆ ಹಾಗೂ ನಗರದ ನೈರ್ಮಲ್ಯ ಕಾಪಾಡಬೇಕು. ಇದಕ್ಕೆಲ್ಲ ಸಾರ್ವಜನಿಕರು ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಹಕರಿಸಬೇಕೆಂದು ಮತ್ತು ನಗರದ ಅಭಿವೃದ್ಧಿಗಾಗಿ ಭೂಕಂದಾಯ ಮತ್ತು ಮನೆಯ ನೀರಿನ ಕರವನ್ನು ಕಾಲಕಾಲಕ್ಕೆ ಕಟ್ಟಿ ನಗರದ ಅಭಿವೃದ್ಧಿಗೆ ಸಹಕರಿಸಬೆಕೆಂದು ತಿಳಿಸಿದರು.
ನಂತರ ಲತಾ ವಿ ಸಂಡೂರು ನಗರಸಭೆ ಅಧ್ಯಕ್ಷರು ಈ ಕಾರ್ಯಕ್ರಮದ ಕುರಿತು ಮಾತನಾಡಿದರು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಮತ್ತು ಸರಕಾರದ ಯೋಜನೆಗಳನ್ನು ಪಡೆದುಕೊಂಡು ಸ್ವಾಲಂಬಿಗಳಾಗಿ ಜೀವಿಸಬೇಕೆಂದು ತಿಳಿಸಿದರು. ೨೨.೭೫ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಹಾಗೂ ೭.೨೫ರ ಅನುದಾನದಲ್ಲಿ ಕೊಳಚೆ ಪ್ರದೇಶ ಹಾಗೂ ಹಿಂದುಳಿದ ವರ್ಗದವರಿಗೆ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ೨೦,೦೦೦ ರೂಗಳನ್ನು ನಗರಸಭೆಯಿಂದ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಶ್ರೀಮತಿ ಕಾಳಮ್ಮ ಪತ್ತಾರ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿ ಇಂದಿನ ಸಮಾಜದಲ್ಲಿ ಹಲವಾರು ಸಮಸ್ಯೆಗಳಿಂದ ದ್ವಂದ್ವಕ್ಕೊಳಗಾಗಿ ಹತಾಸೆ ಭಾವನೆಗೆ ಇಡಾಗುತ್ತಿದ್ದಾರೆ ಆದ್ದರಿಂದ ಪುರುಷ ಮತ್ತು ಮಹಿಳೆಯರು ಪರಿಪಕ್ವವಾದ ಮನಸ್ಸು ಹೊಂದುವವರೆಗೂ ವಿವಾಹ ಮಾಡಬಾರದು ಆದ್ದರಿಂದ ಸಂವಿಧಾನದಲ್ಲಿ ಮಹಿಳೆಯರಿಗೆ ೧೮ ವರ್ಷ, ಪುರುಷರಿಗೆ ೨೧ ವರ್ಷ ಎಂದು ನಿಗದಿ ಪಡಿಸಲಾಗಿದೆ ಆದರೂ ಸಹ ಇಂದಿನ ಸಮಾಜದ ಜಂಜಾಟದಿಂದ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮಹಿಳೆಯರು ಆರ್ಥಿಕ ಭದ್ರತೆ ಇಲ್ಲದಂತಾಗಿ ಸಾಕಷ್ಟು ಸಾಮಾಜಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ ಕಾನೂನಿನಲ್ಲಿ ಮಹಿಳೆಯರಿಗೆ ಉತ್ತಮ ಸಲಹೆ ಮತ್ತು ಪರಿಹಾರಗಳಿದ್ದು ಸಂಬಂಧಿಸಿದ ಪೋಲಿಸ್ ಇಲಾಖೆಗಳು ಮತ್ತು ವಕೀಲರನ್ನು ಭೇಟಿ ಮಾಡಿ ಪರಿಹಾರವನ್ನು ಕಂಡುಕೊಳ್ಳಬೇಕು. ನಂತರ ತನ್ನ ಉದ್ಯೋಗದ ಸ್ಥಳದಲ್ಲಿ ಪುರುಷ ಸಹೋದ್ಯೋಗಿಗಳಿಂದ ಯಾವುದೇ ರೀತಿಯ ಕಿರುಕುಳಕ್ಕೆ ಒಳಗಾಗದೇ ಗೌರವಯುತ ಪರಿಸರದಲ್ಲಿ ತಾನು ಕೆಲಸ ಮಾಡಬೇಕೆನ್ನುವುದು ಪ್ರತಿಯೊಬ್ಬ ದುಡಿಯುವ ಮಹಿಳೆಯ ಮೂಲಭೂತ ಹಕ್ಕು ಎಂಬುದಾಗಿ ನಮ್ಮ ಸರ್ವೋಚ್ಛ ನ್ಯಾಯಾಲಯವು (ಸುಪ್ರೀಂ ಕೋರ್ಟ್) ವಿಶಾಖಾ ಮತ್ತಿತರರು ವಿರುದ್ಧ ರಾಜಸ್ಥಾನ ರಾಜ್ಯ ಮತ್ತಿತರರು ಎನ್ನುವ ಪ್ರಕರಣದಲ್ಲಿಯ ಮಹತ್ವದ ತೀರ್ಪಿನಲ್ಲಿ ಹೇಳಿದ್ದಲ್ಲದೇ ಲೈಂಗಿಕ ಕಿರುಕುಳಕ್ಕೊಳಗಾದ ದುಡಿಯುವ ಮಹಿಳೆಯ ರಕ್ಷಣೆಗೆ ಸೂಕ್ತ ಮಾರ್ಗದರ್ಶನ ಸೂತ್ರಗಳನ್ನು ನೀಡಿದೆ ಎಂದು ತಿಳಿಸಿದರು.
ನಂತರ ಪೋಲಿಸ್ ಇಲಾಖೆಯ ಜಗದೀಶ ಹಿರೇಮಠ ಎಸ್‌ಪಿ ಆಫೀಸ್ ಕೊಪ್ಪಳ ಮಾತನಾಡಿದರು. ಅತ್ಯಾಚಾರ ಮಾಡಿದ ಪುರುಷನಿಗೆ ೭ ವರ್ಷಗಳಿಗೆ ಕಡಿಮೆಯಿಲ್ಲದ ೧೦ ವರ್ಷಗಳವರೆಗೆ ಅಥವಾ ಅಜೀವವಾಗಿ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ಮತ್ತು ದಂಡದ ಶಿಕ್ಷೆ. (ಸೆಕ್ಶನ್ ೩೭೬ ) ವಿಶೇಷ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ಸಕಾರಣಗಳು ಕಂಡುಬಂದಲ್ಲಿ ಕನಿಷ್ಠ ಪ್ರಮಾಣದ ಅಂದರೆ ೭ ವರ್ಷಗಳಿಗಿಂತ ಕಡಿಮೆ ಅವಧಿಗೆ ಕಾರಾಗೃಹ ಮತ್ತು ದಂಡದ ಶಿಕ್ಷೆ. ಅತ್ಯಾಚಾರ ಮಾಡಿದ ಪುರುಷನು ಪ್ರಭಾವಿ ವ್ಯಕ್ತಿ, ಪೋಲಿಸ ಅಧಿಕಾರಿ ಅಥವಾ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಯಾಗಿದ್ದರೆ ಕನಿಷ್ಠ ೧೦ ವರ್ಷಗಳಿಗೆ ಕಡಿಮೆಯಿಲ್ಲದ ಅಥವಾ ಅಜೀವವಾಗಿ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ಮತ್ತು ದಂಡದ ಶಿಕ್ಷೆಯನ್ನು ವಿಧಿಸಬಹುದಾಗಿದೆ. (ಸೆಕ್ಶನ್ ೩೭೬ಅ) ಮಹಿಳೆಯು ಗರ್ಭಿಣಿಯಾಗಿದ್ದಾಗ, ೧೨ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಾಲಕಿಯಾಗಿದ್ದರೆ ಮತ್ತು ಸಾಮೂಹಿಕವಾಗಿ ಅವಳ ಮೇಲೆ ಅತ್ಯಾಚಾರವೆಸಗಿದಲ್ಲಿ ಪರುಷನು ನ್ಯಾಯಾಲಯ ನೀಡುವ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. (ಸೆಕ್ಶನ್ ೩೭೬ಆ) ಎಂದು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕೊನೆಯದಾಗಿ ಶಾಂತಕುಮಾರ ಸೊಂಪೂರವರು ವಂದನಾರ್ಪಣೆಯನ್ನು ತಿಳಿಸಿ ಕಾರ್ಯಕ್ರಮವನ್ನು ಮುಕ್ತಾಗೊಳಿಸಿದರು.
0 comments:
Post a Comment