ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರಮೇಲೆ ನಡೆದ ಹಲ್ಲೆ ಪ್ರಕರಣ ಹಾಗೂ ಜಿಲ್ಲೆಯ ಮೀಸಲುಕ್ಷೇತ್ರ ಪ್ರತಿನಿಧಿಸುವ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿರವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವನ್ನು ಖಂಡಿಸಿ ದಿ.೮ರಂದು ಕೊಪ್ಪಳ ಬಂದ್‌ಗೆ ಮಾದಿಗ ದಂಡೂರ್ ಹೋರಾಟಸಮಿತಿ ಕರೆನೀಡಿದೆ ಎಂದು ರಾಜ್ಯ ಸಮಿತಿ ಅಧ್ಯಕ್ಷ ಕೆ.ಹುಸೇನಪ್ಪ ಸ್ವಾಮಿ ಹೇಳಿದರು.
ಈ ಕುರಿತು ಹೇಳಿಕೆ ನೀಡಿದ ಅವರು ಮರಕುಂಬಿ ಗ್ರಾಮದಲ್ಲಿ ಅಸ್ಪೃಶರನ್ನು ಬಹಿಷ್ಕಾರಹಾಕಿ ಅವರ ಕೇರೆಗೆ ನುಗ್ಗಿ ಅವರಮೇಲೆ ಹಲ್ಲೆ ನಡೆಸಿ ಧಾಂದಲೇಮಾಡಿದ ಸವರ್ಣಿಯರ ಮೇಲೆ ಕ್ರಮ ಕೈಗೊಳ್ಳಬೇಕು ಮೀಸಲು ಕ್ಷೇತ್ರದ ಪ್ರತಿನಿಧಿಯಾಗಿ ದಲಿತರಮೇಲೆಯೇ ದೌರ್ಜನ್ಯ ನಡೆದರು ಕಣ್ಣಿದ್ದು ಕುರುಡರಂತೆ ವರ್ತಿಸುವ ಸಚಿವ ಶಿವರಾಜ ತಂಗಡಗಿ ಯವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕೊಪ್ಪಳ ಬಂದ್‌ಗೆ ಕರೆ ನೀಡಲಾಗಿದ್ದು ಪ್ರಗತಿಪರ ಸಂಘಟನೆಗಳು, ವ್ಯಾಪಾರಸ್ತರು, ಶಾಲಾ ಕಾಲೇಜು ವಿದ್ಯಾರ್ಧಿಗಳು ಬೆಂಬಲಿಸುವಂತೆ ಮನವಿಮಾಡಿಕೊಂಡರು.
ಮುಂದುವರೆದು ಮಾತನಾಡಿದ ಅವರು ಮರಕುಂಬಿ ಗ್ರಾಮದ ದಲಿತರಮೇಲಿನ ದೌರ್ಜನ್ಯ ಮತ್ತು ಈ ಪ್ರಕರಣ ಸತ್ಯತೆಯನ್ನು ಬಯಲಿಗೆ ತರಲು ಕೇಂದ್ರದ ಸಿಓಡಿ ತನಿಖೆಯಾಗಲಿ ೯೬ಜನರ ಮೇಲೆ ಪ್ರಕರಣ ದಾಖಲಿಸಿದ್ದರು ಕೇವಲ ೫೬ ಜನರನ್ನು ಬಂಧಿಸಿ ಇನ್ನೂ ೪೦ ಜನರನ್ನು ಹಾಗೇ ಬಿಟ್ಟಿರುವ ಪೊಲೀಸರ ಕ್ರಮ ಖಂಡನಾರ್ಹವಾಗಿದೆ ಎಂದ ಅವರು ದಲಿತ ವಿರೋಧಿ ಸಚಿವ ಮತ್ತು ಅವರ ಕೈಗೊಂಬೆ ಅಧಿಕಾರಿ ಎಂತೆ ವರ್ತಿಸು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗಂಗಾವತಿ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ, ಗಂಗಾವತಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗು ಗಂಗಾವತಿ ತಹಸೀಲ್ದಾರ್ ರವರಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಅವರು ಸವರ್ಣಿಯರಿಂದ ದಲಿತರಮೇಲೆ ನಿರಂತರ ಶೋಷಣೆ ನಡೆಯುತ್ತಿದ್ದರೂ ನಿರ್ಲಕ್ಷ್ಯ ತೋರುವ ಇಂತಹ ಬೇಜವಾಬ್ದಾರಿ ಅಧಿಕಾರಿಗಳಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಸಚಿವ ಶಿವರಾಜ ತಂಗಡಗಿ ಯವರನ್ನು ಸಂಪುಟದಿಂದ ವಜಾ ಗೊಳಿಸಬೇಕು ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೇಗೆ ಒತ್ತಾಯಿಸಿ ರಾಜ್ಯಾಧ್ಯಂತ ಮಾದಿಗ ದಂಡೂರ್ ಹೋರಾಟ ಸಮಿತಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ರಾಜ್ಯಾಧ್ಯಕ್ಷ ಕೆ.ಹುಸೇನಪ್ಪ ಸ್ವಾಮಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದಿಗ ದಂಡೂರ್ ಸಮಿತಿಯ ಜಿಲ್ಲಾ ಅಧ್ಯಕ್ಷ ಪ್ರಭುರಾಜ ಬೋಚನಳ್ಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಕೆ.ಎಸ್.ಮೈಲಾರಪ್ಪ, ತಾಲೂಕಾಧ್ಯಕ್ಷ ಸಂಜೀವಪ್ಪ ಕಡೆಮನಿ, ಗೌರವಾಧ್ಯಕ್ಷ ಎಸ್.ದುರಗಪ್ಪ, ಜಿಲ್ಲಾ ಖಜಾಂಚಿ ಜಿಂಗಜ್ಜ ಶಾಹಪೂರ್, ಜಿಲ್ಲಾ ಕಾರ್ಯಾಧ್ಯಕ್ಷ ಗುಂಡಪ್ಪ ಬಡಗಿ, ಜಿಲ್ಲಾ ಉಪಾಧ್ಯಕ್ಷ ಕೆ.ಸುಭಾಶ್, ಜಂಟಿಕಾರ್ಯದರ್ಶಿ ಮೂಕಪ್ಪ ಬಸಾಪೂರ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ನಕ್ಕುಂಟಿ ಮತ್ತಿತರರು ಉಪಸ್ಥತರಿದ್ದರು.
0 comments:
Post a Comment