ಜಿಲ್ಲೆಯಲ್ಲಿ ಮರಕುಂಬಿಯ ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತು ಹೊಸಗುಡ್ಡದ ದಲಿತ ಮಹಿಳೆಯ ಕೊಲೆ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ರಕ್ಷಿಸಿ,ಪ್ರಕರಣವನ್ನು ತಿರುಚಿ ನಿರಪರಾಧಿಗಳನ್ನು ಬಂಧಿಸಿರುವುದನ್ನು ಖಂಡಿಸಿ ದೊಡ್ಡಮಟ್ಟದ ಹೋರಾಟ ನಡೆಸಲು ಸೆ.೨ರಂದು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಲಾಯಿತು. ಕೊನೆಗೆ ಜೀಪ್ ಜಾಥಾ ಮೂಲಕ ಹಳ್ಳಿ ಹಳ್ಳಿಗೆ ಸಂಚರಿಸಲು ಹಾಗೂ ಕರಪತ್ರ ಹಾಕಿಸಿ ಎಲ್ಲರಿಗೂ ವಿಷಯವನ್ನು ತಿಳಿಸಿ ಹೋರಾಟವನ್ನು ರಾಜ್ಯವ್ಯಾಪಿ ಮಾಡಲು ತೀರ್ಮಾನಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ಶಿವರಾಜ್ ತಂಗಡಗಿ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ಅಲ್ಲದೆ ತಂಗಡಗಿ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಬಗ್ಗೆ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿರುವುದು ಅತ್ಯಂತ ಅವಾಸ್ತವ. ಯಾಕೆಂದರೆ ಆರೋಪಿಗಳಲ್ಲಿ ಇಬ್ಬರು ಆಕೆಯ ಮಕ್ಕಳು ಮತ್ತು ಒಬ್ಬಾತ ಅಣ್ಣನಿರುವಾಗ ಅತ್ಯಾಚಾರ ಮಾಡಲು ಎಂದಾದರೂ ಸಾಧ್ಯವೆ? ಈ ಮಾತೆ ಅವರು ಪ್ರಕರಣವನ್ನು ತಿರುಚಿರುವದನ್ನು ಸಾಭೀತುಪಡಿಸುತ್ತದೆ. ಅದು ನಿಜವಾಗಿದ್ದರೆ ಅದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲಿ. ಇದರಿಂದ ಸತ್ಯ ಬಹಿರಂಗವಾಗಲಿ. ಇಲ್ಲವಾದರೆ ಹೋರಾಟ ಉಗ್ರರೂಪ ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜೆ.ಭಾರದ್ವಾಜ, ವಿಠ್ಠಪ್ಪ ಗೋರಂಟ್ಲಿ,ಎಚ್.ಎನ್.ಬಡಿಗೇರ್,ಬಸವರಾಜ ಶೀಲವಂತರ, ಮೈಲಪ್ಪ ಬಿಸರಳ್ಳಿ, ಸುಂಕಪ್ಪ ಗದಗ, ಕಾಸಿಮ್ ಸರದಾರ, ಹುಸೇನಪ್ಪ ಸ್ವಾಮಿ, ಎಚ್.ರಘು, ವೆಂಕಟೇಶ ಹಾಲವರ್ತಿ, ಧರ್ಮರಾಜ್ , ರಾಜಾಬಕ್ಷಿ ಎಚ್.ವಿ, ಎಸ್.ಎ.ಗಫಾರ್ ಮುಂತಾದವರು ಉಪಸ್ಥಿತರಿದ್ದರು.
0 comments:
Post a Comment