PLEASE LOGIN TO KANNADANET.COM FOR REGULAR NEWS-UPDATES


ಕುಷ್ಟಗಿ ತಾಲೂಕಿನ ಕುಂಬಳಾವತಿ ಗ್ರಾಮದ ಪರಸಪ್ಪ ತಂದೆ ಮೂಕಪ್ಪ ವಾಲೀಕಾರ ಎಂಬ ಆರೋಪಿಯು ಅದೇ ಗ್ರಾಮದ ಮೂಗ ಮಹಿಳೆಯ ಮೇಲೆ ಅತ್ಯಾಚಾರ ವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೧೩ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿತನು ಈ ಮಹಿಳೆಗೆ ಇಲ್ಲಸಲ್ಲದ ಚಿತ್ರಹಿಂಸೆ ಹಾಗೂ ಜೀವ ತೆಗೆಯುತ್ತೇನೆ ಎಂದು ಜೀವದ ಭಯ ಹಾಕಿದ್ದನು. ಕಳೆದ ೨೦೧೩ ರ ಆಗಸ್ಟ್-೨೦ ರಂದು ಕುಂಬಳಾವತಿ ಗ್ರಾಮದ ಮೂಗ ಮಹಿಳೆಯು ಮನೆಯಲ್ಲಿ ಒಬ್ಬಳೆ ಇರುವುದನ್ನು ನೋಡಿ ಮನೆಯೊಳಗೆ ಪ್ರವೇಶ ಮಾಡಿ ಮಹಿಳೆಗೆ ಅತ್ಯಾಚಾರವೆಸಗಿದ್ದಾನೆ.  
ಈ ಪ್ರಕರಣ ಕುರಿತಂತೆ ಹನುಮಸಾಗರ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ಕುರಿತಂತೆ ತನಿಖೆಯನ್ನು ಹನುಮಸಾಗರ ಪಿ.ಎಸ್.ಐ. ಮಂಗಳಪ್ಪ ಹಾಗೂ ಕುಷ್ಟಗಿ ಸಿ.ಪಿ.ಐ. ನೀಲಪ್ಪ ಎಂ.ಓಲೇಕಾರ ಅವರು ಕೈಗೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ ಡಿ.ಬಬಲಾದಿ ಅವರು ವಿಚಾರಣೆ ನಡೆಸಿ ಆರೋಪಿಗೆ ಭಾ.ದ.ಸ. ಕಲಂ : ೩೨೩ ರ ಅಡಿಯಲ್ಲಿ ಅಪರಾಧಕ್ಕಾಗಿ ೧ ವರ್ಷ ಶಿಕ್ಷೆ, ಭಾ.ದ.ಸ. ಕಲಂ : ೪೪೮ ರ ಅಡಿಯಲ್ಲಿ ಅಪರಾಧಕ್ಕಾಗಿ ೧ ವರ್ಷ ಶಿಕ್ಷೆ, ಭಾ.ದ.ಸ. ಕಲಂ : ೫೦೬ ರ ಅಡಿಯಲ್ಲಿ ಅಪರಾಧಕ್ಕಾಗಿ ೧ ವರ್ಷ ಶಿಕ್ಷೆ ಹಾಗೂ ಭಾ.ದ.ಸ. ಕಲಂ : ೩೭೬ ರ ಅಡಿಯಲ್ಲಿ ಅಪರಾಧಕ್ಕಾಗಿ ೧೦ ವರ್ಷ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎಂ.ಎ.ಪಾಟೀಲ್ ಸಾರ್ವಜನಿಕ ಅಭಿಯೋಜಕರು ಕೊಪ್ಪಳ ಇವರು ವಾದ ಮಂಡಿಸಿದರು.

Advertisement

0 comments:

Post a Comment

 
Top