PLEASE LOGIN TO KANNADANET.COM FOR REGULAR NEWS-UPDATES

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮೂಲಕ ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾಜನಜಾಗೃತಿ ವೇದಿಕೆಯಅಧ್ಯಕ್ಷರಾದ ದೇವೇಂದ್ರಪ್ಪ ಬಳೂಟಗಿ ರವರುಕಾರ್ಯಕ್ರಮಉದ್ಘಾಟನೆ ಮಾಡಿ ಜಿಲ್ಲಾ ಜನಜಾ
ಗೃತಿ ವೇದಿಕೆ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ೪ ಮದ್ಯವರ್ಜನ ಶಿಬಿರದ ಮೂಲಕ ಸುಮಾರು ೪೦೦ ಜನರನ್ನು ಮದ್ಯ ಮುಕ್ತರನ್ನಾಗಿ ಮಾಡುವ ಶಿಬಿರ ಮತ್ತು ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ ೨೦ ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮದ ಮೂಲಕ  ದುಶ್ಚಟದಿಂದದೂರ ಸೆಳೆಯುವ, ಸನ್ಮಾರ್ಗಕ್ಕೆ ಪ್ರೇರೇಪಿಸುವ ಬಗ್ಗೆ, ಅಕ್ಟೋಬರ್ ೨ ರಂದುಜಿಲ್ಲೆಯಲ್ಲಿ ಸುಮಾರು ೫೦ ಕಾರ್ಯಕ್ರಮಗಳ ಮೂಲಕ ಜನರಲ್ಲಿದುಶ್ಚಟದ ವಿರುದ್ದಜನಾಂದೋಲನ ಜಾಗೃತಿಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಯಲಬುರ್ಗಾ ತಾಲೂಕಿನ ಅಕ್ಟೋಬರ್ ೨ ರಂದು ಮದ್ಯವರ್ಜನ ಶಿಬಿರದ ಜಿಲ್ಲಾ ಮಟ್ಟದ ಶತದಿನೋತ್ಸವಕಾರ್ಯಕ್ರಮ ಮತ್ತುಜಿಲ್ಲೆಯಲ್ಲಿ ೧೦೦ ಜನಜನಜಾಗೃತಿ ವೇದಿಕೆಯಅಜೀವ ಸದಸ್ಯರ ನೊಂದಾವಣೆ ಪ್ರಕ್ರಿಯೆ ಮಾಡುವ ಬಗ್ಗೆ ದಿನಾಂಕ:೦೬.೦೯.೨೦೧೪ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ (ರಿ.)ಕೊಪ್ಪಳ ಜಿಲ್ಲಾಯೋಜನಾಕಛೇರಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿಜಿಲ್ಲಾ ವೇದಿಕೆಯ ಕಾರ್ಯದರ್ಶಿಯಾದ  ಶಿವರಾಯ ಪ್ರಭು, ಸದಸ್ಯರಾದ ಅರಳಿ ಮಲ್ಲಿಕಾರ್ಜುನ, ರುದ್ರಪ್ಪ ಅಕ್ಕಿ, ಶ್ರೀಕಾಂತ ಸಜ್ಜನ್, ಯೋಜನಾಧಿಕಾರಿಗಳಾದ ದರ್ಣಪ್ಪ ಮೂಲ್ಯ, ದಿನೇಶ ಪೂಜಾತಿ, ಸದಾಶಿವಗೌಡ, ಹರೀಶಆರ್.ಎಸ್. ಜಿಲ್ಲಾ ವ್ಯವಸ್ಥಾಪಕರಾದ ನಾಗರಾಜರವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top